ನಾಡಿನ ಸುಭಿಕ್ಷೆಗೆ ನಾಡದೇವತೆಯಲ್ಲಿ ಸಿಎಂ ಬೊಮ್ಮಾಯಿ ಪ್ರಾರ್ಥನೆ

Social Share

ಮೈಸೂರು,ಸೆ.26- ನಮ್ಮೊಳಗಿರುವ ದುಷ್ಟ ಗುಣಗಳು ನಾಶವಾಗಿ ದೇಶದ ಸುಭಿಕ್ಷೆಗೆ ತಾಯಿ ಚಾಮುಂಡೇಶ್ವರಿ ಎಲ್ಲರನ್ನು ಹರಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾರ್ಥಿಸಿದ್ದಾರೆ.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಷ್ಟ ಗುಣಗಳು ನಾಶವಾಗಿ ದೇಶದ ಸುಭಿಕ್ಷೆಗೆ ರಾಷ್ಟ್ರಪತಿಯವರು ಚಾಮುಂಡಿ ದೇವಿ ಬಳಿ ಪ್ರಾರ್ಥನೆ ಮಾಡಿದ್ದಾರೆ. ಹೀಗಾಗಿ ನಮಗೆಲ್ಲರಿಗೂ ಒಳಿತಾಗಲಿದೆ ಎಂದು ಆಶಿಸಿದರು.

ಈಗ ಮಹಿಷಾಸುರ ಇಲ್ಲ ಆದರೆ ನಮ್ಮೊಳಗಿರುವ ದುಷ್ಟ ಗುಣಗಳ ನಾಶ ಮಾಡಬೇಕು. ತಾಯಿ ಚಾಮುಂಡಿ ಹಂಸವನ್ನು ಏರಿದ್ದಾರೆ. ಹಂಸ ಪವಿತ್ರತೆಯ ಸಂಕೇತ. ಅದು ಎಷ್ಟೇ ಭಾರವಾಗಿದ್ದರೂ ಅತಿ ಎತ್ತರಕ್ಕೆ ಹಾರುವ ಪಕ್ಷಿ ಪರಮಹಂಸ ಎಂದು ವಿಶ್ಲೇಷಿಸಿದರು.ಸರ್ವರಿಗೂ ಕಲ್ಯಾಣ ಬಯಸುವ ನಮಗೆ ಕನ್ನಡ ನಾಡನ್ನು ಅಭಿವೃದ್ದಿ ಪರ ಕೊಂಡೊಯ್ಯಲು ತಾಯಿ ಚಾಮುಂಡಿ ಶಕ್ತಿ ನೀಡಿ ಆಶಿರ್ವದಿಸಲಿ ಎಂದರು.


ಈ ಬಾರಿ ದಸರಾ ಅದ್ದೂರಿಯಾಗಿ ನಡೆಯುತ್ತಿದೆ. ಇದೊಂದು ನಾಡಹಬ್ಬ, ನಮ್ಮ ನಾಡಿನ ದುಡಿಯುವ ರೈತ, ಕಾರ್ಮಿಕರು ಮನೆ ಮನೆಯಲ್ಲಿ ನಾಡಹಬ್ಬ ಮಾಡುತ್ತಿದ್ದಾರೆ. ತಾಯಿ ಕಾಲ ಕಾಲಕ್ಕೆ ಮಳೆ ಬೆಳೆ ಕೊಟ್ಟು ನಮಗೆಲ್ಲರಿಗೂ ಆಶಿರ್ವಾದ ಮಾಡುತ್ತಿರುವುದು ನಮಗೆ ದೊಡ್ಡ ಶಕ್ತಿ ಎಂದು ಹೇಳಿದರು.

ಇದನ್ನೂ ಓದಿ : ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ

ಮೈಸೂರು ಮಹಾರಾಜರ ಕಾಲದಿಂದಲೂ ದಸರಾವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ನಾವು ಹಲವಾರು ಸಮಸ್ಯೆಗಳನ್ನು ಎದುರಿಸಿ ಜನ ಕಲ್ಯಾಣದೆಡೆಗೆ ಹೆಜ್ಜೆ ಹಾಕಿರುವುದು ನಿಮಗೆಲ್ಲ ಗೊತ್ತಿದೆ ಎಂದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟನೆಗೆ ಬಂದಿರುವುದು ನಮಗೆ ಹೆಮ್ಮೆ.

ನಾನು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಅವರ ಕಚೇರಿಗೆ ಕರೆ ಮಾಡಿದಾಗ, ಅವರು ನಾನು ರಾಷ್ಟ್ರಪತಿಯಾಗಿ ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಅದು ತಾಯಿ ಚಾಮುಂಡಿ ದರ್ಶನ ಪಡೆಯುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದಿದ್ದರು ಎಂದು ಸ್ಮರಿಸಿದರು.

ಇದನ್ನೂ ಓದಿ : ದಸರಾ ಉದ್ಘಾಟಿಸಿ ರಾಷ್ಟ್ರಪತಿ ಮುರ್ಮು ಭಾಷಣ, ಇಲ್ಲಿದೆ ಹೈಲೈಟ್ಸ್

ಇಂದು ನಾಡ ದೇವತೆ ಚಾಮುಂಡೇಶ್ವರಿಯ ಅಗ್ರ ಪೂಜೆಯೊಂದಿಗೆ ದಸರ ಉದ್ಘಾಟನೆ ಮಾಡಿ ನಮಗೆಲ್ಲ ಹೆಮ್ಮೆ ತಂದಿರುವ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತಮ್ಮ ಭಾಷವಣವನ್ನು ಮುಗಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಸಚಿವರಾದ ಎಸ್.ಟಿ.ಸೋಮಶೇಖರ್, ಸುನೀಲ್ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article