ಪರಮಪೂಜ್ಯರ ಇಚ್ಚೆಯಂತೆಯೇ ಅಂತಿಮ ವಿಧಿವಿಧಾನ : ಸಿಎಂ

Social Share

ಬೆಂಗಳೂರು,ಜ.3- ವಯೋಸಹಜವಾಗಿ ಲಿಂಗೈಕ್ಯರಾದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ವೇಳೆ ಸಾರ್ವಜನಿಕರು ಶಾಂತಿ ರೀತಿಯಿಂದ ವರ್ತಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮಪೂಜ್ಯರ ಇಚ್ಚೆಯಂತೆಯೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಸಾರ್ವಜನಿಕರು ಕೂಡ ಶಾಂತವಾಗಿ ವರ್ತಿಸಿ ಜಿಲ್ಲಾಡಳಿತಕ್ಕೆ ಸಹಕಾರ ಕೊಡಬೇಕೆಂದು ಮನವಿ ಮಾಡಿಕೊಂಡರು.

ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ಶ್ರೀಗಳು ನಮಗೆ ಒಂದು ದೊಡ್ಡ ಸಂಸ್ಕøತಿಯನ್ನು ಬಿಟ್ಟು ಹೋಗಿದ್ದಾರೆ. ಅವರ ಇಚ್ಛೆಯಂತೆಯೇ ಎಲ್ಲವೂ ನೆರವೇರಲಿದೆ. ಮಾಜಿ ಸಚಿವರಾದ ಬಸನಗೌಡ ಪಾಟೀಲ್‍ಯತ್ನಾಳ್, ಎಂ.ಬಿ.ಪಾಟೀಲ್ ಸೇರಿದಂತೆ ಜನಪ್ರತಿನಿಗಳು, ಭಕ್ತರು, ಸಾರ್ವಜನಿಕರು ಎಲ್ಲ ರೀತಿಯಲ್ಲೂ ವ್ಯವಸ್ಥೆ ಮಾಡಿದ್ದಾರೆ.

ದರ್ಶನ ಮಾಡುವಾಗ ನೂಕುನುಗ್ಗಲು, ಗೊಂದಲಗಳಿಗೆ ಅವಕಾಶ ಬೇಡ. ಶಾಂತಿ, ಸಂಯಮದಿಂದ ವರ್ತಿಸಬೇಕು. ಇದುವೇ ನಾವು ಶ್ರೀಗಳಿಗೆ ನೀಡುವ ನಿಜವಾದ ಗೌರವ ಎಂದು ಹೇಳಿದರು.

ಯುವ ಕ್ರಿಕೆಟಿಗರು ಚಾಲಕರನ್ನು ನೇಮಿಸಿಕೊಳ್ಳಿ : ಕಪಿಲ್‍ದೇವ್

ಸಿದ್ದೇಶ್ವರ ಸ್ವಾಮೀಜಿಗಳು ಮಾತಿನಂತೆ ನಡೆದುಕೊಳ್ಳುವವರು ಎಂದು ಸ್ಮರಿಸಿದ ಬೊಮ್ಮಾಯಿ, ಶ್ರೀಗಳು ಪ್ರೀತಿ ವಿಶ್ವಾಸÀವನ್ನು ಬಿಟ್ಟು ಹೋಗಿದ್ದಾರೆ. ಒಂದು ಸಂಸ್ಕೃತಿಯನ್ನ ಬಿಟ್ಟು ಹೋಗಿದ್ದಾರೆ ಎಂದರು. ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿಎಂ ಬೊಮ್ಮಾಯಿ ಅವರು ಹೆಲಿಕಾಪ್ಟರ್ ಮೂಲಕ ವಿಜಾಪುರಕ್ಕೆ ತೆರಳಿದರು.

CM Bommai, Sri Siddheshwar Swami,

Articles You Might Like

Share This Article