ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಅನಾವರಣ

Social Share

ಚಿಕ್ಕಬಳ್ಳಾಪುರ, ಜ.16- ಆದಿಯೋಗಿ ಅವರನ್ನು ಪ್ರತ್ಯಕ್ಷ ದರ್ಶನ ಮಾಡುವಂಥದ್ದು ಒಂದು ಸಾಧನೆ. ಅದು ನಮ್ಮ ಪುಣ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ತಾಲೂಕಿನ ಕೌರನಹಳ್ಳಿ ಬಳಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಮಾತನಾಡಿ, ಆದಿ ಯೋಗಿ ದರ್ಶನ ಮನುಷ್ಯನಿಗೆ ದಾರಿದೀಪ ಶಿವ ವಿಸ್ಮಯ ಮೂರ್ತಿ, ಶಿವನನ್ನು ಅರ್ಥ ಮಾಡಿಕೊಂಡವರು ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ನಮಗಿಂತ ಮುಂಚೆ, ನಂತರ ಸೃಷ್ಟಿಯಿದೆ. ತೃಣದಲ್ಲಿ ತೃಣ ನಮ್ಮ ಬದುಕು. ಹುಟ್ಟು ಸಾವು ನಡುವಿನ ಬದುಕು ಕ್ಷಣಿಕ ಆದಿ ಯೋಗಿ ಶಿವನ ದರ್ಶನ ಮಾಡಿ ಸದ್ಗುರು ನಮ್ಮ ಪಾಲಿನ ಸದಾ ಗುರು ಎಂದು ಬಣ್ಣಿಸಿದರು.

ರಾಜ್ಯಕ್ಕೆ ಪ್ರಿಯಾಂಕ ಆಗಮನ, ಕಾಂಗ್ರೆಸ್‌ನಲ್ಲಿ ಸಂಚಲನ
ದೇಹ ಮನಸ್ಸು ಒಂದಾದಾಗ ಅಮೃತ ಗಳಿಗೆಯ ದರ್ಶನವಾದಂತೆ. ಅದು ಯೋಗ ಮತ್ತು ಸಾಧನೆಯಿಂದ ಬರುತ್ತದೆ. ಅಂತಹ ಸಂದರ್ಭದಲ್ಲಿ ಆದಿ ಯೋಗಿ ದರ್ಶನ ಮನುಷ್ಯನಿಗೆ ದಾರಿದೀಪವಾಗುತ್ತದೆ. ಅನುಭವದಲ್ಲಿ ಅಮೃತವಿದೆ. ಅಮೃತಗೋಸ್ಕರ ಇಡೀ ಜೀವನವನ್ನು ತ್ಯಜಿಸಿರುವ ಗಣ್ಯರ ಇದ್ದಾರೆ ಎಂದು ತಿಳಿಸಿದರು.

ಆದಿ ಯೋಗಿ ಸ್ಥಾಪನೆಗೆ ಹಿಂದೆ ಬಹಳ ದೊಡ್ಡ ಪೂಜೆ, ಆಚರಣೆಯಿದೆ. ದೇಶಕ್ಕೆ ಬಹಳ ದೊಡ್ಡ ಚರಿತ್ರೆಯಿದೆ. ಆದರೆ ಈಗ ಬೇಕಾಗಿರುವುದು ಚಾರಿತ್ರ್ಯ. ರಸ್ತೆ, ದೊಡ್ಡದೊಡ್ಡ ಕಟ್ಟಡಗಳಿಂದ ಆಗುವುದಲ್ಲ. ಸತ್ಚಾರಿತ್ಯದಿಂದ ಆಗುವ ಪ್ರಯತ್ನ. ಆಚರಣೆ ಮಾಡುವ ವಿಧಿ ವಿಧಾನಗಳನ್ನು ಸದ್ಗುರು ಮಾಡಿದ್ದಾರೆ.

ದೇಶದಲ್ಲಿ ಸಂಘರ್ಷ ಇದ್ದು ಇದನ್ನು ತೊಡೆದು ಹಾಕಲು ಸಮನ್ವಯ ಬೇಕಾಗಿದೆ. ಇನ್ನು ಮುಂದೆ ಈ ಕ್ಷೇತ್ರ ಉತ್ರೋತ್ರವಾಗಿ ಬೆಳೆಯುತ್ತದೆ. ಕೃಷಿ, ವಿಜ್ಞಾನ, ತಂತ್ರಜ್ಞಾನದಲ್ಲಿ ಸದಾ ಕಾಲ ಅಭಿವೃದ್ಧಿಯಾಗುತ್ತದೆ.
ಈ ಭೂಮಿ ಪೂಣ್ಯ ಭೂಮಿಯಾಗಲಿದೆ ಎಂದು ಆಶಿಸಿದರು.

ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿವಾಸುದೇವ್ ಮಾತನಾಡಿ, ಯೋಗ ಈಗ ಅಂತರರಾಷ್ಟಿಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಪ್ರತಿ ದೇಶದಲ್ಲೂ ಸಾಕಷ್ಟು ಮಂದಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಯೋಗವು ಮನುಷ್ಯನ ಆರೋಗ್ಯ ಬೇಕಾಗಿರುವ ಅನುಕೂಲಗಳನ್ನು ಕಲ್ಪಿಸುತ್ತದೆ. ಕೇವಲ ಐದು ತಿಂಗಳಲ್ಲಿ ಆದಿಯೋಗಿ ಮೂರ್ತಿ ನಿರ್ಮಾಣವಾಗಿದೆ. ಇದೊಂದು ಅಶ್ಚರಿಯ ಸಂಗತಿಯಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ನಮ್ಮ ಅಜ್ಜಿಯ ಊರು. ಹಿಂದೆ ಕರವೆ ಬೆಟ್ಟ ಎಂದು ಕರೆಯುತ್ತಿದ್ದರು. ಆದರೆ ಈಗ ಕೆಲ ದುರ್ಯೋಧನ ಭಕ್ತರು ಕೌರವರ ಬೆಟ್ಟ ಅಂತ ಕರೆಯುತ್ತಿದ್ದಾರೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದರು.

ಸ್ಯಾಂಟ್ರೋ ರವಿ ಆಮಿಷಕ್ಕೆ ಒಳಗಾಗುವಂತ ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎರಡನೇ ಆದಿ ಯೋಗಿ ಮೂರ್ತಿ ಜಿಲ್ಲೆಯಲ್ಲಿ ಅನಾವಣಗೊಂಡಿರುವುದು ಸಂತಸದ ಸಂಗತಿ. ಇದು ನಾಡಿನ ಸತ್ವವನ್ನು ಪ್ರದರ್ಶಿಸಿದೆ ಎಂದು ಹರ್ಷ ವ್ಯಕ್ತಪಡಿಸಿ ಇಶಾ ಸಂಸ್ಥೆಯಿಂದ ಮಾಡಲು ಮುಂದಾಗಿರುವ ಸಾಮಾಜಿಕ ಕೆಲಸಗಳಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೆವೆ.

ಕೆಲ ದಿನಗಳ ಹಿಂದೆ ನೀರು ತರುವ ಸಂದರ್ಭದಲ್ಲಿ ಅಡಚಣೆ ಮಾಡಿದ್ದವರು ಈಗಲೂ ತೊಡಕು ಮಾಡಲು ಪ್ರಯತ್ನಿಸಿದ್ದರು. ಆದರೆ ಆದಿ ಯೋಗಿ ಎಲ್ಲಾ ಆಡಚಣೆಗಳನ್ನು ನಿವಾರಿಸುವ ಮೂಲಕ ನೆಲೆಗೊಂಡಿದ್ದಾರೆ ಎಂದು ಹೇಳಿದರು.

ಸದ್ಗುರು ಅವರು ವೈಯುಕ್ತಿಕ ಲಾಭಕ್ಕೆ ಈ ಕೆಲಸ ಮಾಡಿಲ್ಲ ಎಂದು ಭಾವಿಸುತ್ತೆನೆ. ಲೋಕ ಕಲ್ಯಾಣಕ್ಕಾಗಿ ಅವರನ್ನು ಅವರು ಅರ್ಪಿಸಿಕೊಂಡಿದ್ದಾರೆ. ಈಗ ಅವರು ನಮ್ಮ ಭಾಗದವರು ಆಗಿದ್ದಾರೆ ಎಂಬುದು ನಮ್ಮ ಹೆಮ್ಮೆ. ಈ ಒಂದು ಕಾರ್ಯಸಾಧನೆಯಿಂದ ನಾನು ಮೂಖಪ್ರೇಕ್ಷಕನಾಗಿದ್ದೇನೆ ಎಂದು ತಿಳಿಸಿದರು. ಸಚಿವರಾದ ನಾಗೇಶ್, ಸಿ.ಸಿ.ಪಾಟೀಲ್ ಹಾಗೂ ಅಪಾರ ಜನಸ್ತೋಮ ಕಾರ್ಯಕ್ರಮದಲ್ಲಿ ನೆರೆದಿತ್ತು.

CM Bommai, unveils, Adiyogi, Sadhguru, Chikkaballapur,

Articles You Might Like

Share This Article