ಸಿಎಂ ಬೊಮ್ಮಾಯಿ ಸುಳ್ಳಿನ ರಾಜ : ಡಿಕೆಶಿ

Social Share

ಬೆಳಗಾವಿ,ಡಿ.19-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳಿನ ರಾಜ, ಸುವರ್ಣಸೌಧದ ವಿಧಾನಸೌಧ ಹಾಲ್‍ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಕು ಎಂದು ಒತ್ತಾಯ ಮಾಡಿ ಮಾಡಿಸಿದ್ದೇವೆ. ಸರ್ಕಾರ ಉತ್ತರ ಕರ್ನಾಟಕವನ್ನು ಮರೆತು ಬಿಟ್ಟಿದೆ. ಇಲ್ಲಿ ನಡೆದ ಪ್ರತಿಭಟನೆ, ಇಲ್ಲಿನ ಸಮಸ್ಯೆಗಳು, ಭ್ರಷ್ಟಾಚಾರದಿಂದ ಆತ್ಮಹತ್ಯೆ ಪ್ರಕರಣ ಚರ್ಚೆ ಆಗುತ್ತೆ ಎಂದು ದಾರಿ ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ವಿರೋಧದ ನಡುವೆಯೂ ಸುವರ್ಣಸೌಧದಲ್ಲಿ ಸಾರ್ವಕರ್ ಭಾವಚಿತ್ರ ಲೋಕಾರ್ಪಣೆ

ಸುವರ್ಣಸೌಧದ ಅಸೆಂಬ್ಲಿ ಹಾಲ್‍ನಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಅನಾವರಣ ಇದೆ ಎಂದು ಆಹ್ವಾನ ನೀಡಿದರು. ಆದರೆ ಈಗ ಸಾವರ್ಕರ್ ಫೋಟೋ ಕೂಡ ಹಾಕಿದ್ದಾರೆ. ಸಾವರ್ಕರ್ ಗೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಸಂಬಂಧ ಇಲ್ಲ, ಅವರು ವಿವಾದಾತ್ಮಕ ವ್ಯಕ್ತಿ ಎಂದು ಆರೋಪಿಸಿದರು.

ಅಸೆಂಬ್ಲಿ ಹಾಲ್‍ನಲ್ಲಿ ನೆಹರೂ, ಶಿಶುನಾಳ ಶರೀಫ, ಬಸವಣ್ಣ ನಾರಾಯಣ ಗುರು, ಕನಕದಾಸರ ಫೋಟೋ ಹಾಕಬೇಕು ಎಂಬುದು ನಮ್ಮ ಬೇಡಿಕೆ. ಬಿಜೆಪಿ ರಾಜಕಾರಣ ಮಾಡುತ್ತಿದೆಯೇ ಹೊರತು ಸಾಮಾಜಿಕ ಕಳಕಳಿ ಇಲ್ಲ. ಜನರ ಬದುಕು ಭಾವನೆ ಅದಕ್ಕೆ ಮುಖ್ಯ ಅಲ್ಲ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

ನಾವೂ ಕೂಡ ಹಿಂದೂಗಳೇ. ಅವರದ್ದು ಬರೀ ನಾಟಕ. ಆಚಾರ ವಿಚಾರದಲ್ಲಿ ನಾವು ಹಿಂದೂಗಳೇ. ಅಧಿವೇಶನದಲ್ಲಿ ಭ್ರಷ್ಟಾಚಾರ ಚರ್ಚೆ ಮಾಡಬಾರದು, ವೋಟ್ ಕಳ್ಳತನ ಚರ್ಚೆ ಆಗಬಾರದು ಎಂಬು ಹುನ್ನಾರದಿಂದ ಸಾರ್ವಕರ್ ಫೋಟೊ ವಿವಾದ ಸೃಷ್ಟಿಸುವ ತಂತ್ರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸುಳ್ಳಿನ ರಾಜ ಮುಖ್ಯಮಂತ್ರಿ ನನಗೆ ಫೋಟೋ ಹಾಕಿದ್ದು ಗೊತ್ತೇ ಇಲ್ಲ ಎನ್ನುತ್ತಾರೆ ಎಂದ ಅವರು, ಸ್ವಾತಂತ್ರ ಹೋರಾಟಕ್ಕೆ ಸಾವರ್ಕರ್ ಕೊಡುಗೆ ಇಲ್ಲ ಎಂದು ಪುನರುಚ್ಚಸಿದರು.

CM Bommai, Veer Savarkar, Photo, Suvarna Soudha, DK Shivakumar,

Articles You Might Like

Share This Article