ರಾಜ್ಯಕ್ಕೆ ಸಿಎಂ ಬೊಮ್ಮಾಯಿಯೋ ಅಥವಾ ಯಡಿಯೂರಪ್ಪನವರೋ..?

Social Share

ಬೆಂಗಳೂರು,ಫೆ.5- ಸರ್ಕಾರದ ಪ್ರಮುಖ ವಿಷಯಗಳ ಪತ್ರಕ್ಕೆ ಬಳಸಬೇಕಾದ ಮುಖ್ಯಮಂತ್ರಿಗಳ ಹೆಸರಿನ ಲೆಟರ್‍ಹೆಡ್‍ನ ಬದಲಿಗೆ ಮಾಜಿ ಮುಖ್ಯಮಂತ್ರಿಯವರ ಲೆಟರ್ ಹೆಡ್ ಬಳಸಿ ಪ್ರಮಾದವೆಸಗಿರುವ ಪ್ರಸಂಗ ನಡೆದಿದೆ. ಮುಖ್ಯಮಂತ್ರಿ ಕಾರ್ಯಾಲಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದ್ದರೂ ಅವರ ನಿರ್ಲಕ್ಷ್ಯದಿಂದ ಸ್ವತಃ ಅಧಿಕಾರಿಗಳೇ ಮಾಜಿ ಮುಖ್ಯಮಂತ್ರಿ ಹೆಸರಿನ ಲೆಟರ್‍ಹೆಡ್ ಬಳಸಿದ್ದರಿಂದ ಮುಖ್ಯಮಂತ್ರಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮುಖ್ಯಮಂತ್ರಿ ಅವರು ಸರ್ಕಾರದ ಮಹತ್ವದ ವಿಷಯಗಳ ಪತ್ರ ವ್ಯವಹಾರಕ್ಕೆ ತಮ್ಮ ಹೆಸರಿನ ಲೆಟರ್‍ಹೆಡ್ ಬಳಸುತ್ತಾರೆ. ಆದರೆ ಮುಖ್ಯಮಂತ್ರಿ ಕಾರ್ಯಾಲಯ ಅಧಿಕಾರಿಗಳ ಎಡವಟ್ಟಿನಿಂದ ಪ್ರಮುಖ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿನ ಬದಲಾಗಿ ಮಾಜಿ ಸಿಎಂ ಯಡಿಯೂರಪ್ಪನವರ ಹೆಸರಿರುವ ಲೆಟರ್‍ಹೆಡ್ ಬಳಕೆ ಮಾಡಲಾಗಿದೆ.
ರಾಜ್ಯದ ಸಂಸದರೊಂದಿಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಸಭೆ ಆಯೋಜಿಸುತ್ತಿದ್ದಾರೆ. ಇದರ ಸಂಬಂಧ ಸಂಸದರಿಗೆ ಅವರು ಪತ್ರ ಬರೆದಿದ್ದರು. ಅದು ಸಂಸದರಿಗೆ, ಸಂಬಂಸಿದ ಇತರರಿಗೆ ರವಾನೆಯಾಗಿತ್ತು. ರವಾನೆಯಾಗಿದ್ದ ಲೆಟರ್‍ಹೆಡ್‍ನಲ್ಲಿ ಬೊಮ್ಮಾಯಿ ಹೆಸರಿರದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿನಲ್ಲಿತ್ತು ಎಂದು ಹೇಳಲಾಗಿದೆ.
ತಪ್ಪು ಪತ್ರ ರವಾನೆ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಬಂಸಿದ ಅಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮತ್ತೊಮ್ಮೆ ತಮ್ಮ ಹೆಸರಿರುವ ಲೆಟರ್‍ಹೆಡ್‍ನಲ್ಲಿ ಎಲ್ಲರಿಗೂ ಪತ್ರ ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Articles You Might Like

Share This Article