ವರ್ಷ ಪೂರ್ತಿ ದಸರಾ ವಸ್ತು ಪ್ರದರ್ಶನ ಕೇಂದ್ರ ಬಳಕೆಗೆ ಚಿಂತನೆ : ಸಿಎಂ

Spread the love

ಮೈಸೂರು,ಅ.16- ದಸರಾ ವಸ್ತು ಪ್ರದರ್ಶನ ಮೈದಾನವನ್ನು 365 ದಿನ ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕನ್ನಡ ನಾಡಿನ ಜನತೆಗೆ ಮತ್ತೊಮ್ಮೆ ದಸರಾ ಶುಭಾಶಯಗಳನ್ನು ತಿಳಿಸಿದರು.

ಮೈಸೂರಿನ ಜನತೆಗೆ ಹೃದಯಪೂರ್ವಕ ಧನ್ಯವಾದಗಳು. ಮೈಸೂರಿನ ಜನರು ಈ ಸಲ ಬಾರಿ ಒಳ್ಳೆಯ ರೀತಿಯಲ್ಲಿ ದಸರಾ ನಡೆಸಿಕೊಟ್ಟಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳು. ಬರುವಂತಹ ವರ್ಷದಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಮೈಸೂರಿಗೆ ಕೊರೊನಾ ಮುಕ್ತವಾಗಿರುವಂತಹ ವಾತಾ ವರಣದಲ್ಲಿ ದಸರಾ ಆಚರಣೆಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಮೈಸೂರನ್ನು ದಸರಾ ಸಂದರ್ಭದಲ್ಲಿ ಟೂರಿಸಂ ಸರ್ಕಿಟ್ ಮಾಡಬೇಕೆಂದು ಪ್ರಸ್ತಾಪವಾಗಿದ್ದು, ಅದರ ಬಗ್ಗೆ ಖಂಡಿತವಾಗಿಯೂ ಗಮನ ಹರಿಸಿ ಸಮಗ್ರವಾಗಿ ಎಲ್ಲ ಚಿಂತನೆಯನ್ನು ಮಾಡಿ ಆ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ವಸ್ತು ಪ್ರದರ್ಶನ ಮೈದಾನವೇನಿದೆ ಅದನ್ನು 365 ದಿನಗಳೂ ಹೇಗೆ ಉಪಯೋಗ ಮಾಡಿಕೊಳ್ಳಬೇಕೆಂದು ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಬರುವಂತಹ ದಿನಗಳಲ್ಲಿ ಬಹಳಷ್ಟು ತಜ್ಞರು, ರಾಷ್ಟ್ರ ಮಟ್ಟದ ತಜ್ಞರ ಜೊತೆಗೆ ಚರ್ಚೆ ಮಾಡಿ ಯೋಜನೆಯನ್ನು ರೂಪಿಸಿ ಅದನ್ನೂ ಕೂಡ ಖಾಯಂ ಪ್ರದರ್ಶನ ವಾಗಿ ಮಾಡಲು ಚಿಂತನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಳೆಯಿಂದ ಉಪಚುನಾವಣೆ ಪ್ರಚಾರಕ್ಕೆ ತೆರಳಲಿದ್ದೇನೆ. 2ದಿನ ಹಾನಗಲ್, 2ದಿನ ಸಿಂಧಗಿಯಲ್ಲಿ ಪ್ರಚಾರ ನಡೆಸುತ್ತೇನೆ. ಎರಡೂ ಗೆಲ್ಲುವಂತಹ ಸಂಪೂರ್ಣ ವಿಶ್ವಾಸ ವಿದೆ. ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಚಿವರಾದ ಎಸ್.ಟಿ.ಸೋಮ ಶೇಖರ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾಕಾರಿ ಡಾ.ಬಗಾದಿ ಗೌತಮ್, ನಗರಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇದ್ದರು.

# ವಿದ್ಯುತ್ ದೀಪಾಲಂಕಾರ ಒಂಬತ್ತು ದಿನ ಇರುತ್ತೆ :
ಮೈಸೂರು, ಅ.16- ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.

ನಾಡಿನ ವಿವಿಧ ಕಡೆಗಳಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜನಪ್ರತಿನಿಗಳು ಮತ್ತು ಜನತೆಯ ಬೇಡಿಕೆಯ ಮೇರೆಗೆ ವಿದ್ಯುತ್ ದೀಪಾಲಂಕಾರವನ್ನು ವಿಸ್ತರಿಸುತ್ತಿರುವುದಾಗಿ ತಿಳಿಸಿದರು.

Facebook Comments

Sri Raghav

Admin