ಬೆಂಗಳೂರು,ಆ.14- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವಿದ್ಯುತ್ ಚಾಲಿತ 1200 ಬಸ್‍ಗಳು ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ವಿಧಾನಸೌಧದ ಮುಂಭಾಗ 75 ವಿದ್ಯುತ್ ಚಾಲಿತ ಬಸ್‍ಗಳಿಗೆ ಚಾಲನೆ ನೀಡಿ ಹಾಗೂ ಬಿಎಂಟಿಸಿ ರಜತ ಮಹೋತ್ಸವದ ಲೋಗೋ ಬಿಡುಗಡೆ ಮಾಡಿ ಸಿಎಂ ಮಾತನಾಡಿದರು.
ಇಂದು ವಿದ್ಯುತ್ ಚಾಲಿತ 75 ಬಸ್‍ಗಳನ್ನು ಲೋಕಾರ್ಪಣೆ ಮಾಡಲಾಗಿದೆ. 300 ವಿದ್ಯುತ್ ಚಾಲಿತ ಬಸ್‍ಗಳಿಗೆ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಲೀಸ್ ಆಧಾರದ ಮೇಲೆ ಬಸ್‍ಗಳನ್ನು ನೀಡುತ್ತಿದೆ. ಬಿಎಂಟಿಸಿಗೆ 1500 ಬಸ್‍ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, 922 ಬಸ್‍ಗಳಿಗೆ ಮಾತ್ರ ಅನುಮತಿ ಕೊಟ್ಟಿದೆ.
ಹೀಗಾಗಿ ಬಿಎಂಟಿಸಿಗೆ 1200 ವಿದ್ಯುತ್ ಚಾಲಿತ ಬಸ್‍ಗಳು ಬರಲಿವೆ ಎಂದರು. ಸಾರಿಗೆ ಇಲಾಖೆ ಕಾರ್ಯದರ್ಶಿಗಳು, ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಸಾರ್ವಜನಿಕ ಸಾರಿಗೆ ಬಳಸುವಂತೆ ಮನವೊಲಿಸಬೇಕು. ಸಂಘಟಿತವಾಗಿ ಕೆಲಸ ಮಾಡುವ ಕಾರ್ಮಿಕರು ಸಾರ್ವಜನಿಕರ ಸಾರಿಗೆ ಬಳಸಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಶೇ.30ರಷ್ಟು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದು, ಅದು ಶೇ.70ಕ್ಕೆ ಹೆಚ್ಚಳವಾಗಬೇಕು. ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಾಹನಗಳನ್ನು ಬಳಸುವಂತೆ ಬಿಎಂಟಿಸಿಯನ್ನು ಆಕರ್ಷಣೀಯವಾಗಿ ನಗರದ ಜನತೆಗೆ ಉತ್ತಮ ಸೇವೆ ಒದಗಿಸಿ ಲಾಭಗಳಿಸುವಂತಾಗಬೇಕು ಎಂದು ಅವರು ಹಾರೈಸಿದರು.
ಇಂದು ಚಾಲನೆ ನೀಡಿದ ವಿದ್ಯುತ್ ಚಾಲಿತ ಬಸ್‍ಗೆ ಕೇಂದ್ರ ಸರ್ಕಾರ 55 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ 33.33 ಲಕ್ಷ ಸಹಾಯ ಧನವನ್ನು ಪ್ರತಿ ಬಸ್‍ಗೆ ನೀಡುತ್ತಿದೆ. ಸ್ವಿಚ್ ಮೊಬಿಲಿಟಿ ಆಟೋಮೋಟಿವ್ ಸಂಸ್ಥೆಯು 300 ಎಲೆಕ್ಟ್ರಿಕ್ ಬಸ್‍ಗಳನ್ನು ಸರಬರಾಜು, ನಿರ್ವಹಣೆ, ಕಾರ್ಯಾಚರಣೆ ಜವಾಬ್ದಾರಿಯನ್ನು ಆ ಸಂಸ್ಥೆಗೆ ನೀಡಲಾಗಿದೆ ಎಂದರು.
ಹವಾನಿಯಂತ್ರಿತ ಬಸ್ ಆಗಿದ್ದು, 12 ಮೀಟರ್ ಉದ್ದ 40+1 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ವೆಹಿಕಲ್ ಟ್ರ್ಯಾಕಿಂಗ್ ಯುನಿಟ್, ಸಿಸಿ ಟಿವಿ, ತುರ್ತು ಪ್ಯಾನಿಕ್ ಬಟನ್, ಎಲ್‍ಇಡಿ ಮಾರ್ಗ ಫಲಕ, ವಿಶೇಷಚೇತನರಿಗೆ ಗಾಲಿಕುರ್ಚಿ ಸೌಲಭ್ಯ ಹೊಂದಿದೆ. ಹನ್ನೆರಡು ವರ್ಷಗಳ ಅವಗೆ ಗುತ್ತಿಗೆ ಪಡೆದಿದ್ದು, ಪ್ರತಿ ಕಿ.ಮೀ. 48.90 ರೂ.ನಂತೆ ಬಿಎಂಟಿಸಿ ಪಾವತಿಸಲಿದೆ ಎಂದು ವಿವರಿಸಿದರು.