ಸಿಎಂ ಕಚೇರಿಗೆ ಹೋಗಿದ್ದ ಕಡತ ನಾಪತ್ತೆ..?

Social Share

ಬೆಂಗಳೂರು,ನ.25-ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ ಕಡತ ಒಂದು ವರ್ಷವಾದರೂ ತಮ್ಮ ಕೈಸೇರಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಅಕಾರಿಯೊಬ್ಬರು ಪತ್ರ ಬರೆದಿರುವುದು ಭಾರೀ ಕುತೂಹಲ ಕೆರಳಿಸಿದೆ.

ಕಳೆದ 7.12.2021ರಂದು ಬಿಬಿಎಂಪಿ ಜಾಹೀರಾತು ನಿಯಮ 2019ರ ಕುರಿತಂತೆ ಕಳುಹಿಸಿದ್ದ ಫೈಲ್ ಇನ್ನೂ ಬಂದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಿಎಂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿಗೆ ಸಂಬಂಸಿದ ಈ ಮಹತ್ವದ ಫೈಲ್ ಲೆಕ್ಕಪತ್ರ ಸಮಿತಿಗೆ ಸಲ್ಲಿಸಲಾಗಿದೆಯೋ ಅಥವಾ ವಾಪಸಾಗಿದೆಯೋ ಎಂಬುದರ ಬಗ್ಗೆ ಅಕಾರಿಗಳೇ ಕಂಗಾಲಾಗಿದ್ದು, ಈಗ ಪತ್ರ ಬರೆದು ಸಿಎಂ ಗಮನಕ್ಕೂ ತರುತ್ತಿದ್ದಾರೆ. ಸರ್ಕಾರದಿಂದ ಅನುಮೋದನೆ ಪಡೆದಿದ್ದರೆ ಈ ನಿಯಮ ಜಾರಿಗೆ ಬರುತ್ತಿತ್ತು. ಆದರೆ, ಇದು ನಾಪತ್ತೆಯಾಗಿದೆ ಎಂಬ ಮಾಹಿತಿ ಭಾರೀ ಸದ್ದು ಮಾಡಿದೆ.

ಗಡಿ ವಿಷಯದಲ್ಲಿ ಪುಂಡಾಟಿಕೆ ಸಹಿಸಲ್ಲ : ಸಿಎಂ ಬೊಮ್ಮಾಯಿ ಎಚ್ಚರಿಕೆ

ಸಾವಿರಾರು ಕೋಟಿ ರೂ.ಗಳ ಜಾಹೀರಾತು ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಇದರ ಬಗ್ಗೆ ಚರ್ಚೆ ನಡೆದು ಅಂತಿಮ ರೂಪುರೇಷೆ ಸಿದ್ಧಪಡಿಸಿ ಕಡತವನ್ನು ಸಿಎಂ ಕಚೇರಿಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.

ಏಕನಾಥ್ ಶಿಂಧೆಗೆ ಕರ್ನಾಟಕ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ: ಠಾಕ್ರೆ

CM, office, Urban Development, file, missing,

Articles You Might Like

Share This Article