Friday, October 11, 2024
Homeರಾಜಕೀಯ | Politicsಸಿಎಂ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್ : ಬಿಜೆಪಿ ಟಾಂಗ್

ಸಿಎಂ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್ : ಬಿಜೆಪಿ ಟಾಂಗ್

CM Siddaramaiah Old Viral Video

ಬೆಂಗಳೂರು,ಅ.1- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾಜಿ ಸಿಎಂ ಯಡಿಯೂರಪ್ಪ ಪ್ರಕರಣದಲ್ಲಿ ಆಡಿದ್ದ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ಲಾಗುತ್ತಿದ್ದು, ನಿಮ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.2011ರಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ವಿರುದ್ಧ ಭೂ ಹಗರಣದ ಆರೋಪ ಕೇಳಿಬಂದಿತ್ತು.

ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಯಡಿಯೂರಪ್ಪ ನಿವೇಶನಗಳನ್ನು ವಾಪಸ್‌‍ ಪಡೆಯುವುದಾಗಿ ಹೇಳಿದ್ದರು. ಆಗ ಸಿದ್ದರಾಮಯ್ಯನವರು ಹೇಳಿದ್ದ ಮಾತು ವೈರಲ್ಲಾಗಿದೆ.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಿ, ಸಿದ್ದರಾಮಯ್ಯ ನವರೇ ನೀವು ಯಾವಾಗ ರಾಜೀನಾಮೆ ಕೊಡುತ್ತೀರಿ ಎಂದು ವಿಡಿಯೋ ಮೂಲಕ ಟಾಂಗ್‌ ನೀಡಿದ್ದಾರೆ.

ಸಿದ್ದರಾಮಯ್ಯನವರು ಮಕ್ಕಳಿಗೆ ನೀಡಿದ್ದ ನಿವೇಶನವನ್ನು ಯಡಿಯೂರಪ್ಪ ವಾಪಸ್‌‍ ಕೊಡುವುದಾಗಿ ಹೇಳಿದ್ದಾರೆ. ಹಣವನ್ನು ಪಡೆದುಕೊಂಡಿದ್ದಾರೆ. ಅವರು ತಪ್ಪು ಮಾಡಿಲ್ಲ ಎಂದರೆ ನಿವೇಶನವನ್ನು ಏಕೆ ವಾಪಸ್‌‍ ಕೊಡಬೇಕಿತ್ತು. ಇದು ಕಾನೂನು ಬಾಹಿರವಲ್ಲವೇ? ತಪ್ಪು ಮಾಡಿದ್ದರಿಂದಲೇ ಸೈಟ್‌ ವಾಪಸ್‌‍ ಕೊಟ್ಟಿದ್ದಾರೆ ಎಂದರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಆಡಿರುವ ಮಾತು ವೈರಲ್‌ ಆಗಿ ನೀವು ನಿಮ ಮಾತಿಗೆ ಬದ್ಧರಾಗಿದ್ದರೆ ಮೊದಲು ಗೌರವಯುತವಾಗಿ ನಿಮ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

RELATED ARTICLES

Latest News