ಬೆಂಗಳೂರು, ಜೂ.6- ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಹದಿನಾಲ್ಕನೆಯ ಬಜೆಟ್ ಮಂಡನೆಗೆ ಇಂದಿನಿಂದ ಪೂರ್ವ ತಯಾರಿಗಳನ್ನು ಆರಂಭಿಸಿದ್ದಾರೆ. ಜು.3 ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆಯ ಬಳಿಕ ಜು.7ರಂದು ರಾಜ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಈವರೆಗೂ ಪಂಚಖಾತ್ರಿ ಯೋಜನೆಗಳ ಬಗ್ಗೆ ಆದ್ಯತೆ ನೀಡಿ ಸರಣಿ ಸಭೆಗಳನ್ನು ನಡೆಸಿದ ಸಿದ್ಧರಾಮಯ್ಯ ಅವರು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಾರೆ. ಮುಂದಿನ ಹಂತದಲ್ಲಿ ಅದಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸುವುದು ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಇತರ ಭರವಸೆಗಳಲ್ಲಿ ಶೇ.20ರಷ್ಟನ್ನು ಪರಿಗಣಿಸುವುದು ಸಿದ್ಧರಾಮಯ್ಯನವರ ಉದ್ದೇಶ ಎಂದು ಹೇಳಲಾಗಿದೆ.
‘ಮಧುರ ಕಾವ್ಯ’ದಲ್ಲಿ ಅಡಗಿರುವುದು ಲವ್ ಸ್ಟೋರಿ ಅಲ್ಲ.. ವೈದ್ಯರ ಜೀವನ..!
ಈ ನಿಟ್ಟಿನಲ್ಲಿ ಇಂದಿನಿಂದ ಆರಂಭಗೊಂಡಿರುವ ಬಜೆಟ್ ಪೂರ್ವತಯಾರಿ ಸಭೆಗಳಲ್ಲಿ ಸಿದ್ಧರಾಮಯ್ಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
#CMSiddaramaiah, #present, #stateBudget,