ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಸ್ಟಾಲಿನ್

Social Share

ಚೆನ್ನೈ,ಮಾ.11- ಪ್ರಮುಖ ಮಸೂದೆಗಳಿತೆ ಸಹಿ ಹಾಕಲು ಸತಾಯಿಸುತ್ತಿರುವ ತಮಿಳುನಾಡು ರಾಜ್ಯಪಾಲ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ನೀಟ್ ವಿನಾಯ್ತಿ ನೀಡುವುದು ಹಾಗೂ ಆನ್‍ಲೈನ್ ರಮ್ಮಿ ನಿಷೇಧ ಸೇರಿದಂತೆ ಪ್ರಮುಖ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲ ಆರ್.ಎನ್.ರವಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಅವರು ಕಿಡಿ ಕಾರಿದ್ದಾರೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲï) 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಎಂಕೆ ಅಧ್ಯಕ್ಷರು ತಮ್ಮ ದಿವಂಗತ ತಂದೆ ಮತ್ತು ಮಾಜಿ ಸಿಎಂ ಎಂ ಕರುಣಾನಿಧಿ ಮುಸ್ಲಿಮರೊಂದಿಗೆ ಹೊಂದಿದ್ದ ಸೌಹಾರ್ದ ಸಂಬಂಧ ಮತ್ತು ಅವರ ಜೀವನದಲ್ಲಿ ಅವರ ಪಾತ್ರವನ್ನು ಪ್ರೀತಿಯಿಂದ ನೆನಪಿಸಿಕೊಂಡರು.

ತ್ರಿಪುರಾದಲ್ಲಿ ಸಂಸದೀಯ ನಿಯೋಗದ ಮೇಲೆ ದಾಳಿ

ಸಾಮಾಜಿಕ ನ್ಯಾಯ, ಭ್ರಾತೃತ್ವ ಮತ್ತು ಸಮಾನತೆಯ ಮೂರು ಪರಿಕಲ್ಪನೆಗಳು ಭಾರತವನ್ನು ರಕ್ಷಿಸುವ ಶಕ್ತಿಯನ್ನು ಹೊಂದಿವೆ ಎಂದು ಅವರು ಹೇಳಿದರು. ಭಾರತವನ್ನು ಒಂದೇ ಪರಿಕಲ್ಪನೆಯ ದೇಶವಾಗಿ ಬದಲಾಯಿಸಲು ಬಯಸುವವರು – ಒಂದು ನಂಬಿಕೆ, ಒಂದು ಭಾಷೆ, ಒಂದು ಸಂಸ್ಕøತಿ, ಒಂದು ಆಹಾರ, ಒಂದು ಚುನಾವಣೆ ಮತ್ತು ಒಂದು ಪರೀಕ್ಷೆ – ಸಾಮಾಜಿಕ ನ್ಯಾಯದ ವಿರುದ್ಧ ಎಂದು ಅವರು ಬಿಜೆಪಿಯನ್ನು ಟೀಕಿಸಿದರು.

ರಾಜ್ಯಪಾಲ ರವಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್, ಆನ್‍ಲೈನ್ ರಮ್ಮಿ ನಿಷೇಧಕ್ಕೆ ಯಾವುದೇ ಅನುಮೋದನೆ ನೀಡಲಾಗಿಲ್ಲ, ರಾಜಭವನವು ಮರುಪರಿಶೀಲನೆಗಾಗಿ ಇತ್ತೀಚೆಗೆ ಸರ್ಕಾರಕ್ಕೆ ಮರಳಿಸಿದ್ದಾರೆ. ನಾಲ್ಕು ತಿಂಗಳ ನಂತರ, (ಅವರು) ರಾಜ್ಯ ಸರ್ಕಾರಕ್ಕೆ ಅಂತಹ ಶಾಸನವನ್ನು ಜಾರಿಗೊಳಿಸುವ ಅಧಿಕಾರವಿಲ್ಲ ಎಂದು ಹೇಳುತ್ತಿದ್ದಾರೆ.

ಅಂತಹ ಸರಳ ಕಾನೂನನ್ನು ಜಾರಿಗೊಳಿಸಲು ಅದ್ದಾಕಾರವಿಲ್ಲವೆ ರಾಜ್ಯಪಾಲರೇ ಎಂದು ಅವರು ಪ್ರಶ್ನಿಸಿದ್ದಾರೆ.
ಆದಾಗ್ಯೂ, ರೈತರ ವಿರುದ್ಧ ಮತ್ತು ಅಲ್ಪಸಂಖ್ಯಾತ ವಿರೋದ್ದಾ ಸಿಎಎ ನಂತಹ ಈಗ ರದ್ದಾದ ಕೃಷಿ ಕಾನೂನುಗಳಂತಹ ಕೇಂದ್ರ ಶಾಸನಗಳನ್ನು ತ್ವರಿತವಾಗಿ ಅಂಗೀಕರಿಸಲಾಗಿದೆ. ಅವರು ನೀಟ್ ಅನ್ನು ತರುವ ಮೂಲಕ ಬಡವರ ವೈದ್ಯಕೀಯ ಕನಸುಗಳನ್ನು ಭಗ್ನಗೊಳಿಸುತ್ತಾರೆ; ಹಿಂದಿ ಹೇರುತ್ತಾರೆ.

ಗ್ರೀನ್ ಚೊಚ್ಚಲ ಶತಕ : ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

ಇತರ ಧರ್ಮಗಳ ಸದಸ್ಯರ ವಿರುದ್ಧ ದ್ವೇಷದ ಅಭಿಯಾನವನ್ನು ನಡೆಸುತ್ತಾರೆ. ಆದರೆ ಅವರು ರಮ್ಮಿ ಮತ್ತು ಜೀವಹಾನಿ (ಆತ್ಮಹತ್ಯೆ) ಮತ್ತು ಪ್ರಾಣಹಾನಿಯನ್ನು ತಡೆಯಲು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಯನ್ನು ಮಣಿಸಲು ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪ್ರತಿಪಕ್ಷಗಳು ಒಗ್ಗೂಡುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

cm Stalin, lashes, out, BJP, TN Governor,

Articles You Might Like

Share This Article