Friday, November 22, 2024
Homeರಾಜ್ಯಡ್ರಗ್ಸ್, ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕದಿದ್ದರೆ ಪೊಲೀಸ್‌‍ ಅಧಿಕಾರಿಗಳೇ ಹೊಣೆ : ಸಿಎಂ ಖಡಕ್‌ ಎಚ್ಚರಿಕೆ

ಡ್ರಗ್ಸ್, ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕದಿದ್ದರೆ ಪೊಲೀಸ್‌‍ ಅಧಿಕಾರಿಗಳೇ ಹೊಣೆ : ಸಿಎಂ ಖಡಕ್‌ ಎಚ್ಚರಿಕೆ

ಬೆಂಗಳೂರು,ಜು.6- ತಮ್ಮ ವ್ಯಾಪ್ತಿಯಲ್ಲಿನ ಕ್ಲಬ್‌, ಇಸ್ಪೀಟು, ಬೆಟ್ಟಿಂಗ್‌, ಡ್ರಗ್ಸ್ ದಂಧೆಗಳನ್ನು ನಿಲ್ಲಿಸದಿದ್ದರೆ ಎಸ್ಪಿ ಮತ್ತು ಐಜಿ ಮಟ್ಟದ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದರು.

ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರ ಕಚೇರಿಯಲ್ಲಿ 2024 ರ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಸ್ಪಿ ಮತ್ತು ಐಜಿ ಮಟ್ಟದ ಅಧಿಕಾರಿಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ನಿಮ ವ್ಯಾಪ್ತಿಯಲ್ಲಿನ ಕ್ಲಬ್‌, ಇಸ್ಪೀಟ್‌, ಬೆಟ್ಟಿಂಗ್‌ ದಂಧೆಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಎಸ್ಪಿ-ಡಿಸಿಪಿ-ಐಜಿಗಳು ಪೊಲೀಸ್‌‍ ಮ್ಯಾನುಯೆಲ್‌ ವ್ಯಾಪ್ತಿಯ ಪ್ರಕಾರ, ಪ್ರತೀ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಸ್ಪಷ್ಟ ಸೂಚನೆ ನೀಡಿದ ಸಿಎಂ, ನಾಳೆಯಿಂದಲೇ ಠಾಣೆಗಳಿಗೆ ಭೇಟಿ ನೀಡಬೇಕು, ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು, ಕೂಲಂಕುಷ ಪರಿಶೀಲನೆ ನಡೆಸಬೇಕೆಂದು ಎಚ್ಚರಿಸಿದರು.

ಫೇಕ್‌ ನ್ಯೂಸ್‌‍ ಪ್ರಸಾರ ತಡೆಗಟ್ಟಿ :
ಫೇಕ್‌ ನ್ಯೂಸ್‌‍ಗಳು ಸಮಾಜದ ನೆಮದಿಗೆ ಕಂಠಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ ಫ್ಯಾಕ್ಟ್‌ಚೆಕ್‌ ಘಟಕಗಳನ್ನು ಮಾಡಿದ್ದೇವೆ, ಆದರೂ ಫೇಕ್‌ ನ್ಯೂಸ್‌‍ಗಳು ಹೆಚ್ಚಾಗುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್‌ ನ್ಯೂಸ್‌‍ ತಡೆಯಲು ಆಗುತ್ತಿರುವ ಕೆಲಸ ಸಾಕಾಗುತ್ತಿಲ್ಲ ಎಂದು ಎಚ್ಚರಿಸಿದರು.ಕೃತಕ ಬುದ್ಧಿಮತ್ತೆ ಬಳಸಿ ಸ್ವಯಂಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದೂರುಗಳನ್ನು ದಾಖಲಿಸಿ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಸ್ಪಷ್ಟ ಸೂಚನೆ ನೀಡಿದರು.

ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ? :
ಡ್ರಗ್‌್ಸ ಮಾರುವವರು ಯಾರು?, ರೌಡಿಗಳು ಯಾರು, ರಿಯಲ್‌ ಎಸ್ಟೇಟ್‌ ಮಾಡುವವರು ಯಾರು ಎನ್ನುವುದು ಆಯಾ ಠಾಣಾ ಅಧಿಕಾರಿಗಳಿಗೆ ಗೊತ್ತಿರುತ್ತೆ. ಆದರೂ ಏಕೆ ನಿಲ್ಲುತ್ತಿಲ್ಲ ಎಂದು ಪ್ರಶ್ನಿಸಿದರು. ನಿಮಗೆ ಗನ್‌ಗಳನ್ನು ಕೊಟ್ಟಿರುವುದು ಏಕೆ?, ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ?, ರೌಡಿಗಳಿಗೆ ಪೊಲೀಸ್‌‍ ಭಯವಿರಬೇಕು ಎಂದು ಎಚ್ಚರಿಸಿದರು.ಕೆಲವು ಪೊಲೀಸರಿಗೆ ಇ-ಬೀಟ್‌ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ತಪ್ಪುಗಳನ್ನು ಸರಿಮಾಡಿಕೊಂಡು ಗುಣಾತಕ ಪೊಲೀಸ್‌‍ ವ್ಯವಸ್ಥೆ ಗಟ್ಟಿಗೊಳಿಸುವ ಮೂಲಕ ದೇಶದಲ್ಲಿ ಕರ್ನಾಟಕ ಪೊಲೀಸ್‌‍ಗೆ ಇರುವ ಉನ್ನತ ಹೆಸರನ್ನು ಉಳಿಸಿ-ಬೆಳೆಸಬೇಕು ಎಂದರು.ಸಮಾಜದಲ್ಲಿ ಎಲ್ಲರೂ ನಿಶ್ಚಿಂತೆಯಿಂದ, ಭಯ ಮುಕ್ತವಾಗಿ ವಾಸಿಸುವ ವಾತಾವರಣ ಇರಬೇಕು. ಮಹಾತಗಾಂಧಿ ಅವರ ಮಾತು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾನೂನು ಸುವ್ಯವಸ್ಥೆ ಸುರಕ್ಷಿತವಾಗಿದ್ದರೆ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯ. ಇವೆಲ್ಲದರಿಂದ ತಲಾ ಆದಾಯ, ಜಿಡಿಪಿ ಬೆಳವಣಿಗೆ ಆಗುತ್ತ್ತದೆ. ನಮ ಸಮಾಜ ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆಯಿಂದ ಕೂಡಿದೆ. ಹಿರಿಯ ಪೊಲೀಸ್‌‍ ಅಧಿಕಾರಿಗಳು ನಿಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ನಿಮ ಕೆಳಗಿನ ಅಧಿಕಾರಿಗಳು ಇನ್ನಷ್ಡು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬೀಟ್‌ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಹೈವೇ ಪ್ಯಾಟೋಲಿಂಗ್‌ ವ್ಯವಸ್ಥೆಯನ್ನು ತೀವ್ರ ಪರಿಣಾಮಕಾರಿಯಾಗಿ ನಿರ್ವಹಿಸಲು ಸೂಚನೆ ನೀಡಿದರು.

ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಮತ್ತೊಂದು ಕೊಲೆಗಳು ನಡೆದವು. ಇಂಟೆಲಿಜೆಂಟ್‌ ಪೊಲೀಸರು ಎಚ್ಚರ ಇದ್ದಿದ್ದರೆ ಎರಡನೇ ಕೊಲೆ ತಪ್ಪಿಸಬಹುದಿತ್ತು. ಅದಕ್ಕೇ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕಾಯಿತು. ಇವರ ನಿರ್ಲಕ್ಷ್ಯದಿಂದ ಕೊಲೆ ಆಗಿದೆ. ಈ ಕೊಲೆ ತಪ್ಪಿಸಬಹುದಿತ್ತು ಎಂದರು.

ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್‌‍ಗೆ ಅಭಿನಂದಿಸಿದ ಸಿಎಂ :
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್‌‍ಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.

ಗೃಹ ಸಚಿವ ಜಿ.ಪರಮೇಶ್ವರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌‍, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್‌‍.ಆರ್‌.ಉಮಾಶಂಕರ್‌, ಡಿಜಿ-ಐಜಿ ಡಾ.ಅಲೋಕ್‌ ಮೋಹನ್‌‍, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್‌ ಚಂದ್ರ ಅವರುಗಳು ಉಪಸ್ಥಿತರಿದ್ದರು.

RELATED ARTICLES

Latest News