ತಜ್ಞ ವೈದ್ಯರೊಂದಿಗೆ ಸಿಎಂ ಬಿಎಸ್ವೈ ಸಂವಾದ
ಬೆಂಗಳೂರು, ಮೇ 15-ಕೋವಿಡ್ ಕರ್ತವ್ಯ ನಿರತ ವೈದ್ಯರು ಮತ್ತು ತಜ್ಞ ವೈದ್ಯರುಗಳೊಂದಿಗೆ ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್ ಮೂಲಕ ಸಂವಾದ ನಡೆಸಲಿರುವ ಅವರು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಕೋವಿಡ್ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವ ಇತರೆ ಸಿಬ್ಬಂದಿಗೆ ಆತ್ಮ ಸೈಯ೯ ತುಂಬಲಿದ್ದಾರೆ.
ಕೋವಿಡ್ ಸೇವೆ ಬಳಿಕವೂ ವೈದ್ಯರುಗಳ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಸರ್ಕಾರ ಇಂಥಹ ಘಟನೆಗಳು ಮರುಕಳಸದಂತೆ ಎಚ್ಚರಿಕೆವಹಿಸಲಿದೆ ಎಂಬ ಭರವಸೆಯನ್ನು ವೈದ್ಯರುಗಳಿಗೆ ಸಿಎಂ ಭರವಸೆ ನೀಡಲಿದ್ದಾರೆ.
ಹಾಗೇ ವೈದ್ಯರ ಸಮಸ್ಯೆಯನ್ನ ಖುದ್ದು ಸಿ.ಎಂ ಆಲಿಸಲಿದ್ದಾರೆ ಎಂದು ಗೊತ್ತಾಗಿದೆ.