ಡಾ.ಸಿ.ಎನ್.ಮಂಜುನಾಥ್ ಸೇವಾವಧಿ ವಿಸ್ತರಣೆ

ಬೆಂಗಳೂರು, ಜೂ.1- ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿಯನ್ನು ಒಂದು ವರ್ಷ ಕಾಲ ಜೂನ್ 2022ರ ವರೆಗೆ ವಿಸ್ತರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.

ಡಾ.ಮಂಜುನಾಥ್ ಅವರ ಸೇವಾವ ಇಂದಿಗೆ ಕೊನೆಯಾಗಿತ್ತು. ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ಬಹಳಷ್ಟು ಉಪಯುಕ್ತ ಸಲಹೆ ನೀಡಿದ್ದರು. ಅತ್ಯಂತ ಅನುಭವಿ ಹಾಗೂ ಪ್ರಸಿದ್ಧ ವೈದ್ಯರೂ ಆಗಿರುವ ಡಾ.ಮಂಜುನಾಥ್ ಅವರ ಸೇವಾ ಅವಧಿಯನ್ನು ವಿಸ್ತರಿಸುವಂತೆ ಹಲವು ಪ್ರಮುಖರು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಮಂಜುನಾಥ್ ಅವರ ಸೇವಾವಯನ್ನು ಒಂದು ವರ್ಷ ಕಾಲ ವಿಸ್ತರಿಸಿದ್ದಾರೆ.

Sri Raghav

Admin