ಕಲ್ಲಿದ್ದಲು ಗಣಿ ಹೂಡಿಕೆಗೆ ನಾಳೆ ಬೆಂಗಳೂರಿನಲ್ಲಿ ಸಮಾವೇಶ

Social Share

ನವದೆಹಲಿ,ಡಿ.2- ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಕೇಂದ್ರ ಕಲ್ಲಿದ್ದಲು ಸಚಿವಾಲಯವು ನಾಳೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ಆಯೋಜಿದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಕಲ್ಲಿದ್ದಲು ಸಚಿವಾಲಯವು ಭಾರತದಾದ್ಯಂತ ಹಲವಾರು ಸ್ಥಳಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಯೋಜಿಸಿದೆ ಮತ್ತು ಈಗಾಗಲೇ ಇಂದೋರ್ ಮತ್ತು ಮುಂಬೈ ನಗರಗಳಲ್ಲಿ ಅಂತಹ ಸಮಾವೇಶಗಳನ್ನು ಯಶಸ್ವಿಯಾಗಿ ನಡೆದಿವೆ. ಇದು ಕಲ್ಲಿದ್ದಲು ಗಣಿಗಳ ಹರಾಜಿನ ಬಗ್ಗೆ ಉತ್ಸಾಹವನ್ನುಂಟು ಮಾಡಿದೆ. ನಿರೀಕ್ಷಿತ ಬಿಡ್ಡರ್ ಭಾಗವಹಿಸುವಿಕೆಯನ್ನು ಬೆಂಬಲಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

6 ನೇ ಸುತ್ತಿನ ವಾಣಿಜ್ಯ ಹರಾಜಿನಲ್ಲಿ 133 ಕಲ್ಲಿದ್ದಲು ಗಣಿಗಳನ್ನು, 5 ನೇ ಹಂತದ ವಾಣಿಜ್ಯ ಹರಾಜಿನ 2 ನೇ ಪ್ರಯತ್ನದಲ್ಲಿ 8 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ 141 ಕಲ್ಲಿದ್ದಲು ಗಣಿಗಳು ಮುಖ್ಯವಾಗಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್, ಮಧ್ಯಪ್ರದೇಶ,

ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್

ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪರಿಗೆ ಸೇರಿವೆ. ಸಂಚಿತ ಪಿ.ಆರ್.ಸಿ. 305 ಎಂ.ಟಿ.ಪಿ.ಎ. ಗಾತ್ರವನ್ನು ಹೊಂದಿವೆ. ವಿವರವಾದ ಚರ್ಚೆಯ ನಂತರ ಗಣಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ಅಪರೂಪದ ಜೀವಜಂತುಗಳ ಆವಾಸಸ್ಥಾನಗಳು, ಶೇ.40ಕ್ಕಿಂತ ಹೆಚ್ಚಿನ ಅರಣ್ಯವನ್ನು ಹೊಂದಿರುವ ಗಣಿಗಳು, ಸೂಕ್ಷ್ಮ ಪ್ರದೇಶ ಇತ್ಯಾದಿಗಳನ್ನು ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ದಟ್ಟವಾದ ಜನವಸತಿಯ ವಾಸಸ್ಥಾನ ಪ್ರದೇಶ, ಹೆಚ್ಚಿನ ಹಸಿರು ಹೊದಿಕೆ ಅಥವಾ ನಿರ್ಣಾಯಕ ಮೂಲಸೌಕರ್ಯ ಇತ್ಯಾದಿಗಳಿರುವ ಕೆಲವು ಕಲ್ಲಿದ್ದಲು ಗಣಿಗಳ ಬ್ಲಾಕ್ ಗಡಿಗಳನ್ನು ಪ್ರತ್ಯೇಕಿಸಲಾಗಿದೆ.

ಈ ಕಲ್ಲಿದ್ದಲು ಬ್ಲಾಕ್ ಗಳಲ್ಲಿ ಬಿಡ್‍ದಾರರ ಆಸಕ್ತಿ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಧ್ಯಸ್ಥಗಾರರ ಸಮಾಲೋಚನೆಯ ಸಮಯದಲ್ಲಿ ಸ್ವೀಕರಿಸಿದ ಸಲಹೆಗಳನ್ನು ಪಾಲನೆ ಮಾಡಲಾಗುತ್ತಿದೆ. ಹರಾಜು ಪ್ರಕ್ರಿಯೆಯ ಮುಂಗಡ ಮೊತ್ತ ಮತ್ತು ಬಿಡ್ ಭದ್ರತಾ ಮೊತ್ತದಲ್ಲಿ ಕಡಿತ, ಕಲ್ಲಿದ್ದಲು ಗಣಿಗಳನ್ನು ಭಾಗಶಃ ಪರಿಶೋಸಿದ ಸಂದರ್ಭದಲ್ಲಿ ಕಲ್ಲಿದ್ದಲು ಗಣಿಯ ಭಾಗವನ್ನು ಬಿಟ್ಟುಕೊಡಲು ಅನುಮತಿ, ಯಾವುದೇ ಪ್ರವೇಶ ಅಡೆತಡೆಗಳಿಲ್ಲದೆ ಸುಲಭವಾಗಿ ಭಾಗವಹಿಸುವಿಕೆ, ಕಲ್ಲಿದ್ದಲು ಬಳಕೆಯಲ್ಲಿ ಸಂಪೂರ್ಣ ನಮ್ಯತೆ, ಆಪ್ಟಿಮೈಸ್ಡ್ ಪಾವತಿ ರಚನೆಗಳು, ಆರಂಭಿಕ ಉತ್ಪಾದನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹ ಇತ್ಯಾದಿಗಳು ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳಾಗಿವೆ ಎಂದು ತಿಳಿಸಲಾಗಿದೆ.

ಗಾಯಕ ಸಿಧು ಮೂಸೆವಾಲಾ ಹಂತಕ ಗೋಲ್ಡಿ ಅಮೆರಿಕಾದಲ್ಲಿ ಸೆರೆ..!

ಟೆಂಡರ್ ಡಾಕ್ಯುಮೆಂಟ್ ನ ಮಾರಾಟವು ನವೆಂಬರ್ 03ರಿಂದ ಪ್ರಾರಂಭವಾಗಿದೆ. ಗಣಿಗಳ ವಿವರಗಳು, ಹರಾಜು ನಿಯಮಗಳು, ಅಂತಿಮ ಸಮಯ ಇತ್ಯಾದಿ ಮಾಹಿತಿಗಳು ಎಂ.ಎಸ್.ಟಿ.ಸಿ. ಹರಾಜು ವೇದಿಕೆಯಲ್ಲಿ ಲಭ್ಯ ಇವೆ. ಶೇಕಡಾವಾರು ಆದಾಯದ ಹಂಚಿಕೆಯ ಆಧಾರದ ಮೇಲೆ ಪಾರದರ್ಶಕ ಎರಡು ಹಂತದ ಪ್ರಕ್ರಿಯೆಯ ರೀತಿಯಲ್ಲಿ ಅಂತರ್ಜಾಲ(ಆನ್‍ಲೈನ್) ಮೂಲಕ ಹರಾಜು ನಡೆಸಲಾಗುವುದು ಎಂದು ತಿಳಿಸಲಾಗಿದೆ.

coal, mine, investment, Conference, bangalore,

Articles You Might Like

Share This Article