ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಪ್ಪ ತನ್ನ ಅಧಿಕಾರಾವಧಿಯಲ್ಲಿ ಉತ್ತಮ ಸೇವಗಳ ಮೂಲಕ ಹೆಸರು ಮಾಡಿದ್ದವರು.ಮೊದಲಿನಿಂದಲೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ತನ್ನ ಪುತ್ರ ವೀರನ್ ಕೇಶವ್ ಮೂಲಕ ಈಡೇರಿಸಿ ಕೊಳ್ಳಲು ಹೊರಟಿದ್ದಾರೆ.
ಇದರ ಮೊದಲ ಪ್ರಯತ್ನವಾಗಿ ಮಾಡಿರುವ ಚಿತ್ರ ಇದೇವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಬಾರಿ ಸದ್ದು ಮಾಡುತ್ತಿದ್ದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ವಿವಿಧ ಮದ್ಯಗಳ ಮಿಶ್ರಣವೇ ಕಾಕ್ಟೇಲ್. ಅದೇ ರೀತಿ ಸಿನಿಮಾದ ಕಥೆಯು ಕೂಡ ಒಂದೇ ಜಾನರ್ ಆಗಿರದೆ ಹಲವು ಕಥೆಗಳಿಂದ ಸಂಮಿಳಿತವಾಗಿದೆ. ಪ್ರೀತಿ, ರಾಜಕೀಯ, ಆಕ್ಷನ್, ಎಮೋಷನ್, ಹಾಸ್ಯ, ಮರ್ಡರ್, ಸಸ್ಪೆನ್ಸ್ ಎಲ್ಲವೂ ಇರುತ್ತದೆ ಆದರೆ ನಿರ್ದಿಷ್ಟವಾಗಿ ಇದೇ ರೀತಿಯ ಸಿನಿಮಾ ಎಂದು ಹೇಳುವುದು ಕಷ್ಟ ಸಾಧ್ಯ. ಒಟ್ಟಾರೆ ಹೊಸ ವರ್ಷಕ್ಕೆ ಕಾಕ್ಟೈಲ್ ಪ್ರೇಕ್ಷಕರಿಗೆ ಒಳ್ಳೆ ಕಿಕ್ ಕೊಡುತ್ತೆ ಅನ್ನುತ್ತೆ ಚಿತ್ರತಂಡ.
ನಾಯಕ ವೀರನ್ ಗೆ ಇದು ಮೊದಲ ಚಿತ್ರ. ಆದರೂ ಬಿಡುಗಡೆಗೆ ಮುಂಚಿತವಾಗಿಯೇ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಐದಾರು ಶೇಡ್ಗಳಲ್ಲಿ ಕಥಾನಾಯಕ ಪ್ರೇಕ್ಷಕರನ್ನ ರಚಿಸಲಿದ್ದು, ವಿವಿಧ ಗೆಟಪ್ ಗಳು ಕಥೆಗೆ ವೇಗವನ್ನು ಕೊಟ್ಟಿದೆ. ನಿರ್ದೇಶಕ ಶ್ರೀರಾಮ್ ಹೇಳುವಂತೆ, ನಿರೂಪಣಶೈಲಿ, ಕಥೆಯ ಆಯ್ದುಕೊಂಡ ವಿಧಾನ ಎಲ್ಲವೂ ಭಿನ್ನವಾಗಿದ್ದು, ಸಿನಿಮಾ ನೋಡಿದ ಸೆನ್ಸರ್ ಅಧಿಕಾರಿಗಳೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರಂತೆ.
ಜ. 6 ರಂದು ರಾಜ್ಯದ್ಯಂತ ಚಿತ್ರ ಬಿಡುಗಡೆಯಾಗುತ್ತಿದ್ದು ಅನೇಕ ದಿನಗಳಿಂದ ಸಿನಿಮಾ ತಂಡ ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ನಾಯಕನ ಒಂದು ಗೆಟಪ್ಅನ್ನ ಆಯ್ದುಕೊಂಡ ಚಿತ್ರತಂಡ ಮುಖಕ್ಕೆ ಬಣ್ಣ ಬಳಿದುಕೊಂಡು ಮಾಲ್, ಬಸ್ಟಾಂಡ್, ರೈಲ್ವೆ ಸ್ಟೇಷನ್, ಆಟೋಗಳ ಮೂಲಕ, ಬೈಕ್ ಗಳಲ್ಲಿ, ಥಿಯೇಟರ್ಗಳ ಬಳಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.
ಈಗಾಗಲೇ ರಾಜ್ಯಾದ ಮೂಲೆ ಮೂಲೆಗೂ ತಲುಪಿ ಪ್ರಮೋಷನ್ ಮಾಡಿರುವ ಇವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚಿಗೆ ಪ್ರಿ ರಿಲೀಸ್ ಇವೆಂಟ್ ಗೆ ಆಗಮಿಸಿ ಟ್ರೈಲರ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದರು.
ಕೆ.ಆರ್.ಜಿ ಸ್ಟುಡಿಯೋ ಮೂಲಕ ರಾಜ್ಯದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದ್ದು, ಪೈರಸಿ ತಡೆಯುವಲ್ಲಿ ಮತ್ತು ಚಿತ್ರಗಳ ಪ್ರಮೋಷನ್ ಕಾರ್ಯದಲ್ಲಿ ದೇಶದಲ್ಲೇ ಹೆಸರಾಗಿರುವ ಪ್ರತಿಷ್ಠಿತ ಐ ಫ್ಲಿಕ್ಸ್ ಸಂಸ್ಥೆ ಈ ಚಿತ್ರದ ಎಲ್ಲಾ ಪ್ರಮೋಷನ್ ಜವಾಬ್ದಾರಿಯನ್ನು ಹೊತ್ತುಕೊಂಡು ವಿಭಿನ್ನ ರೀತಿಯಲ್ಲಿ ಚಿತ್ರಕ್ಕೆ ಪ್ರಚಾರವನ್ನು ಕೊಡುತ್ತಿದೆ.
cocktail, kannada, movie, release,