ಕಾಕ್ಟೈಲ್ ವಿರೇನ್​ಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

Social Share

ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಧಾರವಾಡ ಇವರು ಆಯೋಜಿಸಿರುವ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2022ರಲ್ಲಿ, ಡಾ. ಶಿವಪ್ಪ ನಿರ್ಮಾಣದಲ್ಲಿ ತಯಾರಾದ “ಕಾಕ್ಟೈಲ್”
ಚಲನಚಿತ್ರವನ್ನು ವೀಕ್ಷಿಸಿ, ಈ ಚಲನಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿರುವ ವಿರೇನ್ ಕೇಶವ್ ಅವರಿಗೆ ಮೊಟ್ಟ ಮೊದಲ ಬಾರಿಗೆ ” ಅತ್ಯುತ್ತಮ ನಾಯಕ ನಟ ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿರೇನ್ ಕೇಶವ್ ಅವರಿಗೆ ಬಾಲ್ಯದಿಂದಲೂ ಕಲೆ, ಸಾಹಿತ್ಯ, ನಾಟಕ ಅಭಿನಯದಲ್ಲಿ ಆಸಕ್ತಿ ಇದ್ದುದರಿಂದ ತಮ್ಮ ಎಂ.ಬಿ.ಎ ಶಿಕ್ಷಣವನ್ನು ಮುಗಿಸಿ ಮುಂಬೈನಲ್ಲಿರುವ ಅನುಪಮ್ ಖೇರ್ ಅವರ ನಟನಾ ಸಂಸ್ಥೆಯಲ್ಲಿ ನಟನೆಯಲ್ಲಿ ತರಬೇತಿಯನ್ನು ಪಡೆದು, ಒಬ್ಬ ಪರಿಪೂರ್ಣ ನಟನಾಗಲು ಬೇಕಾಗಿರುವ ಎಲ್ಲಾ ಕಲೆಗಳನ್ನು ಸಿದ್ಧಿಸಿಕೊಂಡಿರುವ ಒಬ್ಬ ಸುಂದರ ಸ್ತುರದ್ರೂಪಿ ಕಲಾವಿದ ವಿರೇನ್ ಕೇಶವ್.

ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರ ಈ ಪ್ರಶಸ್ತಿಯನ್ನು ನೀಡಿ ಶುಭ ಹಾರೈಸಿದ್ದಾರೆ.

ಐಪಿಎಲ್‍ನಲ್ಲಿ ಕಡೆಗಣಿಸಿದ್ದಕ್ಕೆ ಸಂದೀಪ್ ಶರ್ಮ ಬೇಸರ

ಭಾರೀ ಕುತೂಹಲ ಕೆರಳಿಸಿರುವ ” ಕಾಕ್ಟೈಲ್ ” ಚಲನಚಿತ್ರವು ದಿ. 06. 01. 2023 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಚಲನಚಿತ್ರವನ್ನು ವಿಜಯಲಕ್ಷ್ಮಿ ಕಂಬೈನ್ಸ್‍ನಲ್ಲಿ ಡಾ. ಶಿವಪ್ಪ ನಿರ್ಮಾಣ ಮಾಡಿದ್ದು, ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ.

ನಾಯಕನಟನಾಗಿ ಪ್ರತಿಭಾವಂತ ಹುಡುಗ ವಿರೇನ್ ಕೇಶವ್, ನಾಯಕಿಯಾಗಿ ಚರಿಷ್ಮಾ ನಟಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಶೋಭರಾಜ್, ರಮೇಶ್ ಪಂಡಿತ್, ಮಹಾಂತೇಶ್ , ಶಿವಮಣಿ, ಕರಿಸುಬ್ಬು, ಚಂದ್ರಕಲಾ ಮೋಹನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಲನಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಇವರು ಬಿಡುಗಡೆ ಮಾಡುತ್ತಿದ್ದು, ಎ2 ಮ್ಯೂಸಿಕ್‍ನಲ್ಲಿ ಹಾಡುಗಳು ಪ್ರಸಾರವಾಗುತ್ತಿದೆ.

ಸಂವಿಧಾನ ಧಾರ್ಮಿಕ ಪುಸ್ತಕ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ : ಕೇಂದ್ರ ಸಚಿವ

ಮುಂಬೈನ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ಹಾಡಿರುವ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಿರೇನ್ ಕೇಶವ್ ಅಭಿಮಾನಿ ಬಳಗ ಮತ್ತು ಹಿತೈಷಿಗಳು ತುಂಬು ಹೃದಯದಿಂದ ಶುಭಾಶಯ ಕೋರಿ ಅಭಿನಂದಿಸಿದ್ದಾರೆ.

Cocktail, Viren, Best Actor Award, virenkeshav, #kannadamovies,

Articles You Might Like

Share This Article