ಬೆಂಗಳೂರು, ನ.26- ಅಝಾ ಎಂಬ ಕೋಡ್ ವರ್ಡ್‍ಗಳನ್ನು ಬಳಸಿ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ನೈಜೀರಿಯಾ ಪ್ರಜೆ ಹಾಗೂ ಅಂತರ್‍ರಾಜ್ಯ ಡ್ರಗ್ಸ್ ಪೆಡ್ಲರ್ಸ್‍ಗಳು ಸೇರಿದಂತೆ ಏಳು ಮಂದಿ ಹಾಗೂ ಇವರುಗಳಿಂದ ಮಾದಕ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಐದು ಮಂದಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 1 ಲಕ್ಷ ಮೌಲ್ಯದ ಕೊಕೈನ್, ಎಕ್ಸ್‍ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಹಫೀಜ್ ರಮ್ಲಾನ್(28), ಮನ್ಸೂರ್ ಅಲಿಯಾಸ್ ಮಂಚು(33), ಬೆಂಜಮಿನ್ ಅಲಿಯಾಸ್ ಗೆರಾಲ್ಡ್ ಅಲಿಯಾಸ್ ಬಾಬ್(32), ತ್ರಿವಣಿ ಅಲಿಯಾಸ್ ಜೆನ್ನಿ(25), ದಕ್ಷಿಣ ಕನ್ನಡ ಜಿಲ್ಲೆಯ ಉಮ್ಮರ್ ಫಾರೂಕ್(23), ಮುಂಬೈನ ವೈಶಾಲಿ ದಾಸ್(29), ನೈಜೇರಿಯಾ ದೇಶದ ಹಿಲರಿ ಎಗ್ವಾಂಬ(39) ಬಂಧಿತ ಆರೋಪಿಗಳು.
ಇವರುಗಳಿಂದ ಮಾದಕ ವಸ್ತುಗಳನ್ನು ಸ್ವೀಕರಿಸಿ ಉಪಯೋಗಿಸುತ್ತಿದ್ದ ಬೆಂಗಳೂರಿನ ರಾಮಮೂರ್ತಿ ನಗರದ ಗ್ಲ್ಯಾಡಿ ಸುನೀತಾ(27), ಸುಜಾನಾ(27), ಇಂದಿರಾ ನಗರದ ಮುಗೇಶ್(23), ಜಯನಗರದ ಮೊಹಮ್ಮದ್ ಬಿಲಾಲ(23), ಶೇಷಾದ್ರಿಪುರಂನ ಮನೀಶ್ ಚೌಹಾನ್(32) ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಆರೋಪಿಗಳಿಂದ 1 ಲಕ್ಷ ಮೌಲ್ಯದ 7 ಗ್ರಾಮ ಕೊಕೈನ್, 15 ಎಕ್ಸ್‍ಟಿಸಿ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಹಾಗೂ ಎಂಟು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮಹಿಳೆ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಭಾರತಿಯನ ಬಂಧನ
ರಿಂಗ್‍ರಸ್ತೆಯ ಲುಂಬಿಣಿ ಗಾರ್ಡನ್ ಬಳಿ ಸರ್ವೀಸ್ ರಸ್ತೆಯಲ್ಲಿ ಪಿಎಸ್‍ಐ ಶಿವಕುಮಾರ್ ಬದ್ನೂರು ಅವರು ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಇಬ್ಬರು ಮಾದಕ ವಸ್ತು ಕೊಕೈನ್ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದೆ.
ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಇಬ್ಬರನ್ನು ಬಂಸಿ ಕೊಕೈನ್ ಹಾಗೂ ಎಕ್ಸ್‍ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡು ಸುದೀರ್ಘ ವಿಚಾರಣೆಗೊಳಪಡಿಸಿ ಈ ಪ್ರಕರಣದಲ್ಲಿ ಒಟ್ಟಾರೆ 12 ಮಂದಿಯನ್ನು ಬಂಧಿಸಿದ್ದಾರೆ.
ಈ ಆರೋಪಿಗಳು ಅಝಾ ಎಂಬ ಕೋಡ್ ವರ್ಡ್‍ಗಳನ್ನು ಬಳಸಿ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡಿರುವುದು ಮತ್ತು ಮಾದಕ ವಸ್ತುಗಳು ಸೇವಿಸಿರುವುದು ಕಂಡು ಬಂದಿರುತ್ತದೆ.
ವೋಟರ್ ಡೇಟಾ ಅಕ್ರಮ ನಡೆದಿಲ್ಲ ಎಂದಾದರೆ IAS ಅಧಿಕಾರಿಗಳ ಅಮಾನತಾಗಿದ್ದೇಕೆ..?
ಆರೋಪಿ ಹಫೀಜ್ ರಮ್ಲಾನ್ ವಿರುದ್ಧ ಹೈದ್ರಾಬಾದ್‍ನ ಮಲಕ್ ಪೇಟ್ ಠಾಣೆ, ಮಂಗಳೂರಿನ ಪಾಂಡೇಶ್ವರ ಮತ್ತು ಸೂರತ್ಕಲ್ ಪೊಲೀಸ್ ಠಾಣೆಗಳಲ್ಲಿ ಎನ್‍ಡಿಪಿಎಸ್ ಪ್ರಕರಣಗಳು ದಾಖಲಾಗಿವೆ. ಆರೋಪಿ ಬೆಂಜಮಿನ್ ವಿರುದ್ಧ ಸಂಪಿಗೇಹಳ್ಳಿ ಪೊಲೀಸ್ ಠಾಣೆ ಹಾಗೂ ಆರೋಪಿ ಹಿಲರಿ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಪ್ರಕರಣ ದಾಖಲಾಗಿರುತ್ತದೆ.
ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ. ಅನೂಪ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಪಿಗೆಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಗಪ್ಪ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಗುರುಪ್ರಸಾದ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
code word, selling, drugs, 12 arrested,