ಬೇಲೂರು, ಜು.20- ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಫಸಲು ನಾಶವಾಗಿದ್ದು, ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು, ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಅದರಲ್ಲೂ ಮಲೆನಾಡು ಭಾಗದ ಬಿಕ್ಕೋಡು, ಅರೇಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟದಲ್ಲಿ ನೀರು ನಿಂತು ಗಿಡಗಳು ಕೊಳೆಯಲಾರಂಭಿಸಿದರೆ, ಕಾಫಿ, ಮೆಣಸು, ಅಡಿಕೆ ನಾಶವಾಗಿವೆ. ಇದರಿಂದಾಗಿ ಮುಂಗಾರಿನಲ್ಲೆ ಬೆಳೆಗಾರರು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ, ಅತಿಯಾದ ಮಳೆಯಿಂದ ತೋಟದೊಳಗೆ ನೀರು ತುಂಬಿದ್ದು, ಮತ್ತೊಂದೆಡೆ ಕಾಡಾನೆಗಳ ಸಮಸ್ಯೆ ಬೆಳೆಗಾರರನ್ನು ಕಾಡುತ್ತಿದ್ದು, ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬೆಳೆಗಾರರಿಗೆ ಆಗಿರುವ ನಷ್ಟ ಭರಿಸಲು ಮುಂದಾಗಬೇಕು ಎಂಬುದು ಬೆಳೆಗಾರರ ಒತ್ತಾಯವಾಗಿದೆ.
ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿಕುಮಾರ್ ಮಾತನಾಡಿ, ಜುಲೈನಲ್ಲಿ ಬಂದ ಭಾರೀ ಮಳೆಯಿಂದ ಮಲೆನಾಡು ಭಾಗದ ರೈತರು, ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಾಫಿ, ಮೆಣಸು, ಅಡಿಕೆ ಗಿಡದಲ್ಲೆ ಉದುರುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆದ್ದರಿಂದ ಸಂಬಂಸಿದ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಕಾರಿಗಳು ತೋಟಗಳನ್ನು ವೀಕ್ಷಿಸಿ ನಷ್ಟ ಹೊಂದಿರುವ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಫಿ ಮಂಡಳಿ ಉಪ ವಲಯ ವಿಸ್ತರಣಾಕಾರಿ ಗುರುಪ್ರಸಾದ್ ಮಾತನಾಡಿ, ಈ ಬಾರಿ ಬಂದ ಮಳೆಯಿಂದ ಸಾಕಷ್ಟು ಕಾಫಿ ನೆಲಕ್ಕುರುಳಿ ನಷ್ಟವಾಗಿದೆ. ಈ ಬಗ್ಗೆ ಈಗಾಗಲೇ ಸ್ಥಳ ಪರಿಶೀಲಿಸಿ ಸಂಪೂರ್ಣ ವರದಿಯನ್ನುಇಲಾಖೆು ಮೇಲಕಾರಿಗಳಿಗೆ ಕಳುಹಿಸಲಾಗುವುದು. ಅವರು ಈ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.