ಪಿನಾ ಕೊಲಾಡಾ ಬ್ಲೂಸ್ ಸಂಯೋಜನೆಯ ಮೊದಲ ಸಿಂಗಲ್, ‘ಕ್ಯೂ?’

Spread the love

ರಾಷ್ಟ್ರೀಯ,  ,ನ.2-, 2021: ಆತ್ಮಕ್ಕೆ ಟಾನಿಕ್ ಆಗಿರುವ ಕಾಕ್‌ಟೈಲ್ ನಿಂದ ಸ್ಫೂರ್ತಿ ಪಡೆದ ಅವರ ಹೆಸರಿನಂತೆಯೇ; ನಿರ್ಮಾಪಕರು, ಸಂಯೋಜಕರಾದ ಪಿನಾ ಕೊಲಾಡಾ ಬ್ಲೂಸ್ ಅವರು ಡ್ರೀಮ್, ಎಲೆಕ್ಟ್ರೋ-ಪಾಪ್, ಟ್ರ್ಯಾಪ್, ಹಿಪ್-ಹಾಪ್, ಆರ್ & ಬಿ, ಕರ್ನಾಟಕ ಮತ್ತು ಪೂರ್ವದಿಂದ ಸ್ಪೂರ್ತಿ ಪಡೆದ ಪಾಶ್ಚಿಮಾತ್ಯ ಶೈಲಿಗಳಂತಹ ಸಂಗೀತದ ವಿವಿಧ ಸ್ವರೂಪಗಳಲ್ಲಿ ತಾಜಾ ಟ್ರ್ಯಾಕ್ ಗಳನ್ನು ರಚಿಸಿದ್ದಾರೆ.

ಮತ್ತೊಮ್ಮೆ ತನ್ನ ರಾಗಗಳೊಂದಿಗೆ ಮಾಯಾಜಾಲವನ್ನು ಹೆಣೆಯುವ ಮೂಲಕ ಡೇ ಒನ್ ಲೇಬಲ್ ಪಿನಾ ಕೊಲಾಡಾ ಬ್ಲೂಸ್ ’ಕ್ಯೂ’?’ ಎನ್ನುವ ಎಂಬ ಶೀರ್ಷಿಕೆಯ ಮೊದಲ ಹಿಂದಿ ಸಿಂಗಲ್ ಅನ್ನು ಘೋಷಿಸಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಅಕಲುಕಾಯೋ ಎಂಬ ಮಲಯಾಳಂ ಆವೃತ್ತಿಯೊಂದಿಗೆ ಹೃದಯಗಳನ್ನು ಗೆದ್ದಿರುವ ಇತ್ತೀಚೆಗೆ ಬಿಡುಗಡೆಯಾದ ಈ ಹಾಡು ಹಿಂದಿ ಸಂಗೀತ ಕ್ಷೇತ್ರದಲ್ಲಿ ಪಿನಾ ಕೊಲಾಡಾ ಬ್ಲೂಸ್ ಅವರ ಪಾದಾರ್ಪಣೆಯನ್ನು ಸೂಚಿಸುತ್ತಿದ್ದು ಇದು ಹಿಂದಿ ಭಾಷಿಗರಿಗೆ ಒಂದು ರಸದೌತಣವಾಗಿದೆ. ಪ್ರೇಕ್ಷಕರು ಹಾಡನ್ನು ಇಲ್ಲಿ (ಯೂಟ್ಯೂಬ್ ಲಿಂಕ್) ಕೇಳಬಹುದು.

ಪ್ರಾರಂಭದಿಂದಲೇ ವೀಕ್ಷಕರ ಭಾವನಾತ್ಮಕ ಲಯವನ್ನು ಬಡಿದೆಬ್ಬಿಸುವ ಈ ಹಾಡು ’ಕ್ಯೂ?’ ಒಂದು ಚೇತೋಹಾರಿ ಹಾಡಾಗಿದೆ ಕ್ಯೂ? ಇದು ವಿಫಲವಾದ ಸಂಬಂಧವನ್ನು ಒಪ್ಪಿಕೊಳ್ಳುವ ಬಗ್ಗೆ ಹೇಳುವ ಒಂದು ಲಾವಣಿಯಾಗಿದೆ. ಸರಿಪಡಿಸಲಾಗದ ಕಾರಣಗಳಿಂದಾಗಿ ಜನರು ಒಬ್ಬರಿಂದ ಒಬ್ಬರು ದೂರ ಸರಿಯುವ ಬಗ್ಗೆ ಇದು ಮಾತನಾಡುತ್ತದೆ.

ಈ ಮನಸ್ಥಿತಿಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವ ಈ ಹಾಡು, ಕಾಕ್‌ಟೈಲ್‌ನಂತೆ, ಬಿಗ್ ಬ್ಯಾಂಡ್, ಅಕೌಸ್ಟಿಕ್ ಪಾಪ್ ಪ್ರಕಾರಗಳನ್ನು ಜಾಜ್‌ನ ಅಂಶಗಳೊಂದಿಗೆ (ನಿಮ್ಮನ್ನು ಆಕರ್ಷಿಸುವ ಉತ್ತಮ ಸ್ಯಾಕ್ಸೋಫೋನ್ ಸೋಲೋದೊಂದಿಗೆ) ಒಟ್ಟುಗೂಡಿಸುವ ಧ್ವನಿಗಳ ಸಮ್ಮಿಳನವಾಗಿದೆ. ರಿತೇಂದ್ರ ಧೀರ್ಘಾಂಗಿ ಬರೆದ ಈ ಹಾಡನ್ನು ಪಿನಾ ಕೊಲಾಡಾ ಬ್ಲೂಸ್ ಸಂಯೋಜಿಸಿ, ಹೊಂದಿಸಿ, ನಿರ್ಮಿಸಿದ್ದಾರೆ ಮತ್ತು ಮೃದುಲ್ ಅನಿಲ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪಿನಾ ಕೊಲಾಡಾ ಬ್ಲೂಸ್ ಹೇಳುತ್ತಾರೆ, “ಸಂಗೀತವು ನನಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ವೇದಿಕೆಯನ್ನು ನೀಡುತ್ತದೆ ಮತ್ತು ‘ಡೇ ಒನ್’ ಮೂಲಕ, ನನ್ನ ಸಂಗೀತ ಮತ್ತು ಈ ಹಾಡು ‘ಕ್ಯೂ?’ ನೊಂದಿಗೆ ಭಾಷೆಗಳು ಮತ್ತು ಪ್ರಕಾರಗಳ ಗಡಿಗಳನ್ನು ದಾಟಿ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದೇನೆ.

ಇದು ನನ್ನ ಮೊದಲ ಹಿಂದಿ ಸಿಂಗಲ್, ಮತ್ತು ಈ ಸೃಷ್ಟಿಯನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಕೊಂಡೊಯ್ಯುವ ಭರವಸೆ ಹೊದಿದ್ದೇನೆ. ಈ ಹಾಡಿನೊಂದಿಗೆ, ಇದನ್ನು ಈ ಪ್ರಕಾರಕ್ಕೆ ಸೇರಿದ ಇತರ ಹಾಡುಗಳಿಗಿಂತ ಭಿನ್ನವಾಗಿಸಲು ನಾನು ಜಾಜ್‌ನ ಸ್ಪರ್ಶವನ್ನು ಸೇರಿಸಿದ್ದೇನೆ. ಆತ್ಮ ಮತ್ತು ಹೃದಯದಿಂದ ತಯಾರಿಸಲಾದ ಈ ಹಾಡಿನ ಅತ್ಯಂತ ಪರಿಶುದ್ಧ ಭಾವನೆಗಳನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದೇನೆ ಮತ್ತು ಪ್ರೇಕ್ಷಕರು ಸಹ ಅದಕ್ಕೆ ಸ್ಪಂದಿಸುತ್ತಾರೆಂದು ನಾನು ನಿಜವಾಗಿಯೂ ಆಶಿಸುತ್ತೇನೆ.”

ಡೇ ಒನ್ ಬಗ್ಗೆ: ಸೋನಿ ಮ್ಯೂಸಿಕ್ ಇಂಡಿಯಾದ ಹೊಚ್ಚ ಹೊಸ ಲೇಬಲ್ ಆದ ಡೇ ಒನ್ ಹೊಸ ಮತ್ತು ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮತ್ತು ಸರಿಯಾದ ಪ್ರೇಕ್ಷಕರನ್ನು ತಲುಪಲು ಅವರಿಗೆ ವೇದಿಕೆಯನ್ನು ಒದಗಿಸುವ ಗುರಿ ಹೊಂದಿದೆ. ಈ ಲೇಬಲ್ ದಕ್ಷಿಣ ಏಷ್ಯಾದ ಕಲಾವಿದರು ನೀಡುವ ಆಯ್ದ ಧ್ವನಿಯ ಶ್ರೇಣಿಗಳು ಮತ್ತು ಸಮೃದ್ಧ ಭಾಷಾ ವೈವಿಧ್ಯತೆಯನ್ನು ಬೆಂಬಲಿಸುತ್ತದೆ.

ಗುಣಮಟ್ಟದ ಮೂಲ ಸಂಗೀತವನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಸಂಗೀತ ಉದ್ಯಮದೊಳಗೆ ಹೊಸ ಸಂಗೀತ ಸಂಸ್ಕೃತಿಯ ವ್ಯಾಖ್ಯಾನ ಬರೆಯುವುದು ಇದರ ಉದ್ದೇಶವಾಗಿದೆ.

Facebook Comments