ಚಳಿಗೆ ಉತ್ತರ ಭಾರತ ಗಢ ಗಢ

Social Share

ನವದೆಹಲಿ,ಡಿ.26- ರಾಷ್ಟ್ರ ರಾಜಧಾನಿಗೆ ಹಿಡಿದಿದ್ದ ಥಂಡಿ ಇದೀಗ ಉತ್ತರ ಭಾರತದ ಹಲವಾರು ರಾಜ್ಯಗಳಿಗೂ ವಿಸ್ತರಿಸಿದೆ. ಇದರ ಪರಿಣಾಮ ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವಾರು ಸ್ಥಳಗಳಲ್ಲಿ ಶೀತಗಾಳಿ ಬೀಸುತ್ತಿರುವುದರಿಂದ ಜನ ಚಳಿಗೆ ತತ್ತರಿಸಿ ಹೋಗಿದ್ದಾರೆ.

ದೆಹಲಿ, ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳ ಹಲವಾರು ಪ್ರದೇಶಗಳಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಷ್‍ಗೆ ಕುಸಿಯುವ ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳಲ್ಲಿ ದೆಹಲಿಯಲ್ಲಿ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‍ಗೆ ಇಳಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ,

ಪಂಜಾಬ್‍ನ ಹೆಚ್ಚಿನ ಸ್ಥಳಗಳಲ್ಲಿ ತೀವ್ರ ಚಳಿ ಇದೆ. ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲೂ ಜನ ಮನೆ ಬಿಟ್ಟು ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಥಂಡಿ ವಾತವರಣ ವಾಯುವ್ಯ ರಾಜಸ್ಥಾನ ಮತ್ತಿತರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇರುವುದರಿಂದ ಕೆಲವೇ ದಿನಗಳಲ್ಲಿ ಇಡೀ ಉತ್ತರ ಭಾರತ ಮಂಜುಮಯ ಪ್ರದೇಶವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಅಮೆರಿಕದಲ್ಲಿ ತೀವ್ರ ಹಿಮ ಮತ್ತು ಚಳಿಗೆ 34 ಮಂದಿ ಸಾವು

ದೆಹಲಿಯಲ್ಲಿ ಇಂದಿನಿಂದ ಚಳಿ ಮತ್ತಷ್ಟು ತೀವ್ರಗೊಂಡಿದೆ. ಈ ಮಧ್ಯೆ, ಪಂಜಾಬ್‍ಗೆ ಐದು ದಿನಗಳ ಮಂಜು ಎಚ್ಚರಿಕೆ ನೀಡಲಾಗಿದೆ. ಪಂಜಾಬ್‍ನ ಹಲವು ಪ್ರದೇಶಗಳಲ್ಲಿ, ಮುಂದಿನ ಎರಡು ದಿನಗಳಲ್ಲಿ ತೀವ್ರ ಮತ್ತು ದಟ್ಟವಾದ ಮಂಜು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಹಿಮಾಚಲ ಪ್ರದೇಶ, ಪಂಜಾಬ, ಉತ್ತರ ಪ್ರದೇಶ ಮತ್ತು ಚಂಡೀಗಢದಲ್ಲಿ ಭಾನುವಾರದಿಂದ ಶೀತದ ಅಲೆ ಆರಂಭಗೊಂಡಿದ್ದು, ಒಂದೇರಡು ದಿನಗಳಲ್ಲಿ ತೀವ್ರ ಶೀತ ಕಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಲಾಲೂ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ..!

ಹಿಮಾಚಲ ಪ್ರದೇಶ, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅಸ್ಸಾಂ, ಮತ್ತು ತ್ರಿಪುರಾ ಮತ್ತಿತರ ಪ್ರದೇಶಗಳು ಇನ್ನು ಕೆಲ ಕಾಲ ಚಳಿಯಿಂದ ತತ್ತರಿಸಿಹೋಗಲಿದ್ದು, ನಂತರದ ದೀನಗಳಲ್ಲಿ ಬಿಸಿಲು ಕಾಣುವ ಸಾಧ್ಯತೆಗಳಿವೆಯಂತೆ.

Cold wave, north India, Delhi, Haryana, Punjab

Articles You Might Like

Share This Article