ಸಂಕಾಂತ್ರಿವರೆಗೂ ಮುಂದುವರೆಯಲಿದೆ ತೀವ್ರ ಚಳಿ

Social Share

ಬೆಂಗಳೂರು, ಜ.9-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗುತ್ತಿರುವುದರಿಂದ ಚಳಿಯ ತೀವ್ರತೆ ಹೆಚ್ಚಾಗಲಿದೆ. ಮಕರ ಸಂಕ್ರಾಂತಿ ಹಬ್ಬದವರೆಗೂ ಚಳಿಯ ಪ್ರಮಾಣ ಹೆಚ್ಚಾಗಿರಲಿದೆ. ಹಗಲಿನಲ್ಲಿ ಸಾಕಷ್ಟು ಬಿಸಿಲು ಇದ್ದರೂ ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿದ್ದು, ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗಲಿದೆ.

ಮುಂಜಾನೆ ಬಹಳಷ್ಟು ಕಡೆಗಳಲ್ಲಿ ಮಂಜು ಕವಿದ ವಾತಾವರಣ ಸಹಜವಾಗಿದೆ. ಕೆಲವೆಡೆ ದಟ್ಟ ಮಂಜು ಕವಿಯಲಿದೆ. ಹಲವು ಕಡೆಗಳಲ್ಲಿ ಭಾಗಶಃ ಮೋಡ ಕವಿಯಲಿದೆ. ಹೀಗಾಗಿ ರಾಜ್ಯದಲ್ಲಿ ಕನಿಷ್ಠ ತಾಪಮಾನ ಸರಾಸರಿ 12ರಿಂದ 16ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗುತ್ತಿದೆ. ಗರಿಷ್ಠ ತಾಪಮಾನವು 26ರಿಂದ 29 ಡಿಗ್ರಿ ಸೆಲ್ಸಿಯಸ್ವರೆಗೂ ದಾಖಲಾಗುತ್ತಿದೆ.

ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ವಾತಾವರಣದಲ್ಲಿ ತೇವಾಂಶವೂ ಆಧಿಕವಾಗಿದೆ. ಬಹಳಷ್ಟು ಕಡೆ ಬೆಳಗಿನ ಜಾವ ಸಾಕಷ್ಟು ಇಬ್ಬನಿಯೂ ಬೀಳುತ್ತಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಡಿಸೆಂಬರ್ವರೆಗೂ ಮಳೆ ಮುಂದುವರೆದಿದೆ. ಇದರಿಂದಾಗಿ ಜನವರಿಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಮಕರ ಸಂಕ್ರಾಂತಿ ಹಬ್ಬದ ವರೆಗೂ ಮಾಗಿಯ ಚಳಿಯ ತೀವ್ರತೆ ಹೆಚ್ಚಾಗಿರಲಿದೆ. ಆ ನಂತರ ಚಳಿಯ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಸಿದ್ದು ನಿಜ ಕನಸುಗಳು’ ವಿವಾದಿತ ಪುಸ್ತಕ ಬಿಡುಗಡೆಗೆ ಕಾಂಗ್ರೆಸ್ ಆಕ್ರೋಶ

ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 13-ರಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೆ ಮತ್ತು ಗರಿಷ್ಠ ತಾಪಮಾನ 26-28 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ವಾರ ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆಯಾಗುವ ಸಂಭವ ಹೆಚ್ಚಾಗಿದೆ. ಇದರಿಂದ ಸಂಜೆ, ರಾತ್ರಿ ಹಾಗೂ ಬೆಳಿಗ್ಗೆ ಚಳಿ ಹೆಚ್ಚಾಗಲಿದೆ.

ನವೆಂಬರ್ ನಿಂದ ಚಳಿಗಾಲ ಆರಂಭವಾಗಿದ್ದರೂ ಈತನಕ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಚಳಿ ಕಂಡುಬಂದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಚಳಿಯ ಪ್ರಮಾಣವನ್ನು ನಿಖರವಾಗಿ ಹೇಳಲಾಗದು. ಸ್ಥಳದಿಂದ ಸ್ಥಳಕ್ಕೆ ತಾಪಮಾನದಲ್ಲಿ ವ್ಯತ್ಯಾಸವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಕಾಣಬಹುದು. ಎಲ್ಲ ಪ್ರದೇಶದಲ್ಲೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಲ್ಲಿ ಬಡಾವಣೆಯಿಂದ ಬಡಾವಣೆಗೆ ವ್ಯತ್ಯಾಸ ಕಾಣಬಹದು. ನಾನಾ ಕಾರಣಗಳಿಂದ ತಾಪಮಾನದಲ್ಲಿ ಏರಿಳಿತವನ್ನು ಗಮನಿಸಬಹುದಾಗಿದೆ ಎಂದರು.

ಈ ವರ್ಷ ಸರಾಸರಿ ಪ್ರಮಾಣಕ್ಕಿಂತ ಚಳಿಯ ಪ್ರಮಾಣ ಹೆಚ್ಚಾದಂತೆ ಅನ್ನಿಸುತ್ತಿಲ್ಲ. ಸಾಮಾನ್ಯ ಪ್ರಮಾಣದ ಚಳಿ ಮುಂದುವರೆಯಲಿದೆ. ತೀವ್ರವಾದ ಚಳಿ ಕಂಡುಬರುವ ಲಕ್ಷಣಗಳು ಇದುವರೆಗೂ ಕಂಡುಬಂದಿಲ್ಲ ಎಂದು ಹೇಳಿದರು.

ಸಾಲು ಸಾಲು ಆರೋಪಗಳಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಸರ್ಕಾರ

ಚಳಿಗಾಲ ನವೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿಯ ವೇಳೆಗೆ ಮುಕ್ತಾಯವಾದರೂ, ಚಂಡ ಮಾರುತ, ವಾಯುಭಾರ ಕುಸಿತ ಹಾಗೂ ಮೈಲ್ಮೈ ಸುಳಿಗಾಳಿಗಳಿಂದಾಗಿ ಹಿಂಗಾರು ಮಳೆ ಡಿಸೆಂಬರ್ ವರೆಗೂ ಮುಂದುವರೆದಿತ್ತು. ಅಲ್ಲದೆ, ಪದೇ ಪದೇ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯ ತೀವ್ರತೆಯ ಅನುಭವ ಉಂಟಾಗಿತ್ತು.

cold, weather, bangalore,

Articles You Might Like

Share This Article