ಬೊಗೋಟಾ, ಮಾ.16 – ಮಧ್ಯ ಕೊಲಂಬಿಯಾದ ಕುಂಡಿನಮಾರ್ಕಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಂಭಸಿದ ಪ್ರಬಲ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿ ,10 ಮಂದಿ ನಾಪತ್ತೆಯಾಗಿದ್ದಾರೆ.
ಸಿಕ್ಕಿಬಿದ್ದ ಗಣಿ ಕಾರ್ಮಿಕರನ್ನು ತಲುಪಲು ರಕ್ಷಣ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಅಫ್ಘಾನ್ ಗಡಿಯಲ್ಲಿ ಉಗ್ರರ ಅಡಗುತಾಣದ ಮೇಲೆ ಪಾಕ್ ದಾಳಿ
ಮೀಥೇನ್ ಅನಿಲದ ಶೇಖರಣೆ ಮಾಡಿದ್ದ ಘಟಕ ಸೋಟಗೊಂಡು ಈ ದುರಂತ ಸಂಭವಿಸಿದೆ. ಸುರಂಗಗಳಿಂದ ಪರಸ್ಪರ ಸಂಪರ್ಕ ಹೊಂದಿರು ಗಣಿಯಲ್ಲಿ ಸರಣಿ ಸ್ಫೋಟ ಉಂಟಾಗಿದ್ದು ಭಾರಿ ವಿನಾಶ ಸೃಷ್ಠಿಸಿದೆ.
ಕೊಲಂಬಿಯಾದ ಕಲ್ಲಿದ್ದಲು ಗಣಿಗಳಲ್ಲಿ ಸೋಟಗಳು ಮತ್ತು ಭೂಕುಸಿತಗಳು ಸಾಮಾನ್ಯವಾಗಿದ್ದು ಕಳೆದ ರಾತ್ರಿ ಸಂಭವಿಸಿರುವ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಹೇಳಲಾಗಿದೆ.
#Colombia, #coalmine, #gasblast, #kills11,