ಸುಪೀರಿಯರ್(ಅಮೆರಿಕ),ಜ.2-ರಾಕಿ ಮೌಂಟನ್ಸ್ ತಪ್ಪಲಿನಲ್ಲಿ ಕಾಳ್ಗಿಚ್ಚಿನ ಕೆನ್ನಾಲಿಗೆ ಆವರಿಸಿದ್ದರಿಂದ ಕೊಲರಾಡೋದ ಕೆಲವು ಪ್ರದೇಶಗಳಲ್ಲಿ ಸುಮಾರು ಸಾವಿರ ಮನೆಗಳು ಮತ್ತು ಇತರ ಕಟ್ಟಡಗಳು ಭಸ್ಮವಾಗಿದ್ದು, ಅನ್ಯ ನೂರಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಯ್ಬೊರು ತಿಳಿಸಿದ್ದಾರೆ.
ಈ ಕಾಳ್ಗಿಚ್ಚಿನ ಜ್ವಾಲೆಯ ನಡುವೆ ಮೂರು ಮಂದಿ ಕಣ್ಮರೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಗುರುವಾರ ಹೊತ್ತಿಕೊಂಡ ಕಾಳ್ಗಿಚ್ಚು ಡೆನ್ವರ್ ಮತ್ತು ಬೌಲ್ಡರ್ ನಡುವಿನ ಪ್ರದೇಶಗಳಿಗೆ ವ್ಯಾಪಿಸಿದ್ದು, ಕಾಳ್ಗಿಚ್ಚಿಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೌಲ್ಡರ್ ಕೌಂಟಿಷರೀಫ್ ಜೋ ಪೆಲ್ಲೆ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಸ್ಥಳಗಳಲ್ಲಿ ವಿದ್ಯುತ್ ತಂತಿಗಳು ಕಡಿದುಬಿದ್ದಿಲ್ಲ. ಷಾರ್ಟ್‍ಸಕ್ರ್ಯೂಟ್ ಕೂಡ ಆದ ಕುರುಹುಗಳಿಲ್ಲ. ಹಲವಾರು ಕೋನಗಳಿಂದ ತನಿಖೆ ಮುಂದುವರಿದಿದೆ ಎಂದಿರುವ ಪೆಲ್ಲೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
