BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ

Social Share

ನವದೆಹಲಿ, ಸೆ. 21- ಕಳೆದ 40 ದಿನಕ್ಕೂ ಹೆಚ್ಚು ಕಾಲ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್‍ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಆಗಸ್ಟ್ 10 ರಂದು ಶ್ರೀವಾಸ್ತವ್‍ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಇಂದು ಬಣ್ಣದ ಬದುಕನ್ನು ಮುಗಿಸಿದ್ದಾರೆ. ರಾಜು ಶ್ರೀವಾಸ್ತವ್ ಅವರ ನಿಧನಕ್ಕೆ ಬಾಲಿವುಡ್‍ನ ಖ್ಯಾತ ಕಲಾವಿದರು, ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

ತೇಜಾಬ್, ಮೇನೆ ಪ್ಯಾರ್ ಕಿಯಾ, ಬಾಂಬೆ ಟು ಗೋವಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರಾಜು ಶ್ರೀವಾಸ್ತವ್ ಅವರು ತಮ್ಮ ಹಾಸ್ಯದ ಚಟಾಕಿ ಹರಿಸುವ ಮೂಲಕ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದರು.

ಕಪಿಲ್ ಶರ್ಮಾಗೆ ಮುನ್ನ ರಾಜು ಶ್ರೀವಾಸ್ತವ್ ಬಾಲಿವುಡ್‍ನ ನಂಬರ್ 1 ಹಾಸ್ಯಕಲಾವಿದರಾಗಿ ಮಿಂಚಿದರು. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್, ಕಾಮಿಡಿ ಸರ್ಕಸ್, ಕಾಮಿಡಿ ಕಾ ಮಹಾ ಮುಕಾಬ್ಲಾ, ಲಾಫ್ ಲಾಫ್ ಲಾಫ್‍ಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಕೋಟ್ಯಾನುಕೋಟಿ ಜನರನ್ನು ನಕ್ಕು ನಲಿಸಿದ್ದ್ದ ರಾಜು ಶ್ರೀವಾಸ್ತವ್, ನಚ್ ಬಲಿಯೆ ಹಾಗೂ ಬಿಗ್ ಬಾಸ್ ಗಳಲ್ಲಿಯೂ ಸ್ರ್ಪಯಾಗಿ ಭಾಗವಹಿಸಿ ಗಮನ ಸೆಳೆದಿದ್ದರು.

Articles You Might Like

Share This Article