ಬೆಂಗಳೂರು,ಡಿ.2-ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತರು, ಮೂವರು ಸಹಾಯಕ ಆಯುಕ್ತರು ಸೇರಿದಂತೆ 18 ಅಧಿಕಾರಿಗಳನ್ನು ಏಕಕಾಲಕ್ಕೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ವರಮಾನ ತರುವ ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮಾನತು ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಸವಿತಾ-ಜಂಟಿ ಆಯುಕ್ತರು, ಮೈಸೂರು, ಶ್ರೀರಂಗಪ್ಪ, ಸಹಾಯಕ ಆಯುಕ್ತ (ಎಸಿ), ಚಳ್ಳಕೆರೆ, ಕೇಶವಮೂರ್ತಿ-ಎಸಿ, ಮಡಿಕೇರಿ, ಉಮಾದೇವಿ-ಎಸಿ, ದೇವನಹಳ್ಳಿ, ಮೈಸೂರಿನ ವಾಣಿಜ್ಯ ತೆರಿಗೆ ಅಕಾರಿಗಳಾದ ನಳಿನಾಕುಮಾರಿ ಮತ್ತು ಗಾಯತ್ರಿ ಎನ್.ಟಿ. ಜಯರಾಮ್.ಎಸ್, ಜನಾರ್ಧನ್.ಆರ್, ಅಪ್ಪು ಪೂಜಾರಿ -ಎಟಿ, ಸಿಐಟಿ ಸಿ.ಎನ್.ಪಾಟೀಲ್-
ವಾಣಿಜ್ಯ ತೆರಿಗೆ ನಿರೀಕ್ಷಕರು (ಸಿಟಿಐ), ಬೆಳಗಾವಿ, ವಾಸುದೇವ್ ಎಚ್.ಎಸ್-ಸಿಟಿಐ, ಮಡಿಕೇರಿ, ಯೋಗಾನಂದ್.ಕೆ- ಸಿಟಿಐ ಮೈಸೂರು, ರಂಗಸ್ವಾಮಿ ಆರ್.ವಿಜಯಕುಮಾರ್.ಜೆ-ಸಿಟಿಐ ಚಿತ್ರದುರ್ಗ, ಬೆಂಗಳೂರಿನ ಸಿಟಿಐಗಳಾದ ಶ್ರೀಧರ್.ಎಸ್, ದಿನೇಶ್.ಎಸ್, ಉಮೇಶ್.ಆರ್ ಮತ್ತು ಧನರಾಜ್ ಎಂ.ಕೆ, ಪ್ರಥಮ-ವಿಭಾಗ ಸಹಾಯಕ, ಮಡಿಕೇರಿ ಇವರುಗಳನ್ನು ಅಮಾನತುಪಡಿಸಲಾಗಿದೆ.
ಕಳೆದ ಹಲವು ತಿಂಗಳಿನಿಂದ ಈ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಇವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಇಲಾಖೆಯ ಮುಖ್ಯಸ್ಥರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಲವು ಉದ್ಯಮಿಗಳು ಪತ್ರ ಬರೆದಿದ್ದರು ಎನ್ನಲಾಗಿದೆ.
ಘೋಷಣೆ ಮಾಡಿರುವ ಅಭ್ಯರ್ಥಿಗಳ ಬದಲಾವಣೆ ಇಲ್ಲ : ಹೆಚ್‌ಡಿಕೆ
ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಬೊಮ್ಮಾಯಿ ಅವರು ಅಧಿಕಾರಿಗಳ ಮೇಳೆ ಆಂತರಿಕ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆಸಿರುವುದು ಕಂಡುಬಂದಿದ್ದರಿಂದ ಸಿಎಂ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಭ್ರಷ್ಟಾಚಾರದ ಆರೋಪದ ಮೇಲೆ ಈ ಅಧಿಕಾರಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿದ್ದೇವೆ ಸದ್ಯಕ್ಕೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದೇವೆ. ಒಂದು ವೇಳೆ ಆರೋಪ ಸಾಬೀತಾದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹರ್ಪ್ರೀತ್ ಸಿಂಗ್ ಅರೆಸ್ಟ್
ತೆರಿಗೆ ವಂಚಿಸಲು ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ಕೆಲವು ವ್ಯಾಪಾರಿಗಳು ದೂರು ನೀಡಿದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದಾಗ ಈ ಅಧಿಕಾರಿಗಳು ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ವಂಚಕರೊಂದಿಗೆ ಶಾಮೀಲಾಗಿರುವುದು ಮತ್ತು ತೆರಿಗೆಯನ್ನು ತಪ್ಪಿಸಲು ಟ್ರಕ್ ನಿರ್ವಾಹಕರಿಗೆ ಸುರಕ್ಷಿತ ಕಾರ್ಯಾಚರಣೆಯ ಮಾರ್ಗಗಳನ್ನು ಒದಗಿಸಿರುವುದು ಕಂಡುಬಂದಿತ್ತು. ಇದರಿಂದಾಗಿ ಇಲಾಖೆಗೆ ಕೋಟ್ಯಂತರ ರೂ. ದಾಯ ನಷ್ಟವಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಪರ ಪ್ರಚಾರ ಮಾಡಿದ ಕಾಂಗ್ರೆಸ್ ಮಾಜಿ ಶಾಸಕನ ಉಚ್ಚಾಟನೆ
ವಾಣಿಜ್ಯ ಇಲಾಖೆ ಅಧಿಕಾರಿಗಳು ವರ್ತಕರಿಂದ ಲಂಚ ಸ್ವೀಕರಿಸುತ್ತಿರುವ ಆಡಿಯೋ ವಿಶುವಲ್ ಸಾಕ್ಷ್ಯವನ್ನು ಸಂಗ್ರಹಿಸಿ ನಂತರ ಆಂತರಿಕ ತನಿಖೆಗೆ ಆದೇಶಿಸಲಾಗಿತ್ತು.
ವ್ಯಾಪಾರಿಗಳ ದೂರಿನ ಕುರಿತು ವರದಿನೀಡಲು ಹಿರಿಯ ಅಧಿಕಾರಿಯನ್ನು ಕೇಳಲಾಗಿತ್ತು. ನಂತರ ಇದನ್ನು ಗಂಭೀರವಾಗಿ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಮಾನತುಗೊಳಿಸಿದ್ದಾರೆ.
Commerce, Department, 18 officers, suspended,