ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ

Social Share

ನವದೆಹಲಿ.ಸೆ. 1- ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ ಮಾಡಲಾಗಿದೆ. ಆದರೆ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಇದು ಸತತ ನಾಲ್ಕನೇ ತಿಂಗಳು ವಾಣಿಜ್ಯ ಅನಿಲ ಬೆಲೆ ಇಳಿಕೆಯಾಗಿದೆ. ಇದರ ನಡುವೆ ಜುಲೈನಿಂದ ದೇಶದಲ್ಲಿ ಗೃಹಬಳಕೆಯಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ತೈಲ ಕಂಪನಿಗಳು ಪ್ರತಿ ತಿಂಗಳು ಎರಡು ಬಾರಿ ದರವನ್ನು ಪರಿಷ್ಕರಣೆ ಮಾಡುತ್ತವೆ. ತಿಂಗಳ ಮೊದಲ ದಿನ ಹಾಗೂ ತಿಂಗಳ ಮಧ್ಯದಲ್ಲಿ ವಾಣಿಜ್ಯ ಬಳಕೆ ದರಗಳನ್ನು ಪರಿಷ್ಕರಿಸುತ್ತವೆ. ಆಗಸ್ಟï 1 ರಂದು 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 36 ರೂಪಾಯಿ ಕಡಿಮೆ ಮಾಡಲಾಗಿತ್ತು.

ಇನ್ನು ಜುಲೈನಲ್ಲೂ 19 ಕೆಜಿ ಎಲ್ಪಿಜಿ ಸಿಲಿಂರ್ಡ ಬೆಲೆಯಲ್ಲಿ 198 ರೂಪಾಯಿ ಕಡಿತ ಮಾಡಲಾಗಿತ್ತು. ಜೂನ್ 1 ರಂದು ಈ ದರದಲ್ಲಿ 135 ರೂಪಾಯಿ ಕಡಿತ ಮಾಡಲಾಗಿತ್ತು.ಈಗ ಸುಮಾರು 100ರೂ ಕಡಿತಗೊಂಡಿದೆ.

Articles You Might Like

Share This Article