ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ 36 ರೂ. ಇಳಿಕೆ

Social Share

ಮುಂಬೈ, ಆ.1- ಹಬ್ಬದ ಸಡಗರದ ಮಾಸ ಆಗಸ್ಟ್ ಮೊದಲ ದಿನವೇ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಲಾಗಿದೆ. ಇಂದಿನಿಂದ ಅನ್ವಯವಾಗುವಂತೆ 36 ರೂ. ಇಳಿಸಲಾಗಿದೆ. ಆದರೆ ಗೃಹ ಬಳಕೆ ಎಲ್‍ಪಿಜಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ಜುಲೈನಿಂದ ವಾಣಿಜ್ಯ ಸಿಲಿಂಡರ್ ಬೆಲೆ ಗಣನೀಯವಾಗಿ ಇಳಿಕೆ ಆರಂಭಗೊಂಡಿತ್ತು.

ಪ್ರಸ್ತುತ 19 ಕೆಜಿ ಎಲ್‍ಪಿಜಿ ಸಿಲಿಂಡರ್ 2010ಕ್ಕೆ ಮಾರಾಟವಾಗುತ್ತಿತ್ತು. ಈಗ ಅದು 2063.50 ಪೈಸೆಗೆ ಇಳಿದಿದೆ.
ದೆಹಲಿಯಲ್ಲಿ 1976, ಕೊಲ್ಕತ್ತಾದಲ್ಲಿ 2095, ಮುಂಬೈಯಲ್ಲಿ 1936, ಚೆನ್ನೈನಲ್ಲಿ 2141 ಕ್ಕೆ ಬೆಲೆ ನಿಗದಿಯಾಗಿದೆ.

ಇದರಿಂದಾಗಿ ಹೊಟೇಲ್ ಹಾಗೂ ರೆಸ್ಟೋರೆಂಟ್‍ಗಳಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಕೂಡ ಕಡಿಮೆಯಾಗುವ ನಿರೀಕ್ಷೆ ಇದೆ.

Articles You Might Like

Share This Article