ಸತತ 3ನೇ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆ

ನವದೆಹಲಿ, ಮೇ 1- ವಾಣಿಜ್ಯ ಬಳಕೆಯ ಉರುವಲು ಅನಿಲದ ಬೆಲೆಯನ್ನು 102.50 ರೂಪಾಯಿಗೆ ಹೆಚ್ಚಿಲಾಗಿದೆ. ಸಮಾಧಾನಕರ ಅಂಶವೆಂದರೆ ಅಡುಗೆ ಅನಿಲದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.  ಬೆಲೆ ಏರಿಕೆ ಬಳಿಕ 2253 ರುಪಾಯಿ ಇದ್ದ 19 ಕೆಜಿ ತೂಕದ ಸಿಲಿಂಡರ್‍ನ ಬೆಲೆ 2355.50 ರೂಪಾಯಿ ಆಗಿದೆ. ಐದು ಕೆಜಿ ಸಿಲಿಂಡರ್ ಬೆಲೆ 655 ರೂಪಾಯಿಗಳಾಗಿದೆ. ಕಳೆದ ಮಾರ್ಚ್ 1ರಂದು 105, ಏಪ್ರಿಲ್ 1ರಂದು 250 ರೂಪಾಯಿ ದರ ಏರಿಕೆ ಮಾಡಲಾಗಿತ್ತು.

ಈ ತಿಂಗಳೂ ಮತ್ತೆ ಹೆಚ್ಚಿಸಲಾಗಿದೆ. ಕಳೆದ ಮೂರು ತಿಂಗಳಿನಿಂದಲೂ ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ಏರಿಕೆಯಾಗುತ್ತಲೆ ಇದೆ. ಅಡುಗೆ ಎಣ್ಣೆ, ತರಕಾರಿ, ದವಸ ಧಾನ್ಯಗಳ ಬೆಲೆ ಏರಿಕೆಯಿಂದ ನಷ್ಟದಲ್ಲಿರುವ ಹೊಟೇಲ್ ಉದ್ಯಮ ನಿಧಾನವಾಗಿ ತಿಂಡಿ, ಊಟಗಳ ಬೆಲೆ ಏರಿಕೆ ಮಾಡುತ್ತಿವೆ. ಪದೇ ಪದೇ ಗ್ಯಾಸ್ ಬೆಲೆ ಏರಿಕೆಯ ಬಿಸಿ ಗ್ರಾಹಕರ ಮೇಲಾಗುತ್ತಿದೆ.