ನವದೆಹಲಿ,ಜೂನ್ .1- ವಾಣಿಜ್ಯ ಬಳಕೆ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆಯಾಗಿದೆ. ಇಂದಿನಿಂದಲೇ ದರ ಕಡಿತ ಜಾರಿಗೆ ಬಂದಿದ್ದು,ಇದರಿಂದ ಬಹುತೇಕ ಹೋಟೆಲ್ ಉದ್ಯಮಕ್ಕೆ ಅನುಕೂಲವಾಗಲಿದೆ.
ಈ ಭಾರಿಯೂ ವಾಣಿಜ್ಯ ಅನಿಲ ಸಿಲಿಂಡರ್‍ಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದ್ದು ಗೃಹ ಬಳಕೆ ಎಲ್‍ಪಿಜಿ ಇಳಿಕೆಗೆ ಒತ್ತಾಯ ಕೇಳಿಬಂದಿದೆ.
ಮೇಕೆದಾಟು ವಿಚಾರವಾಗಿ ಆಕ್ರಮಣಕಾರಿ ವರ್ತನೆ ಬೇಡ: ತಮಿಳುನಾಡು
ವಾಣಿಜ್ಯ ಅನಿಲ ಸಿಲಿಂಡರ್‍ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ 172 ರೂ.ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ 250 ರೂ.ನಷ್ಟು ಕಡಿಮೆಯಾಗಿದೆ ಎನ್ನಬಹುದು.
Commercial, #LPG, #cylinder, #prices, #reduced,