ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

Social Share

ಬರ್ಮಿಂಗ್‍ಹ್ಯಾಮ್ , ಜು. 29 – ಬಣ್ಣ, ಬೆಳಕು ಮತ್ತು ನೃತ್ಯದ ಅದ್ಭುತ ಸಂಗೀತ ಸುಧೆಯೊಂದಿಗೆ ಇಲ್ಲಿ 22ನೇ ಬರ್ಮಿಂಗ್‍ಹ್ಯಾಮ್ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಖ್ಯಾತ ತಾಳವಾದ್ಯ ಕಲಾವಿದ ಅಬ್ರಹಾಂ ಪ್ಯಾಡಿ ಟೆಟ್ಟೆ ಅವರು ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಕ್ರೀಡೆಗೆ ಹಾಡುವ ಮೂಲಕ ಪ್ರಾರಂಭಿಸಿದರು, ನಂತರ ಭಾರತೀಯ ಶಾಸ್ತ್ರೀಯ ಗಾಯಕಿ ಮತ್ತು ಸಂಯೋಜಕಿ ರಂಜನಾ ಘಟಕ್ ಅವರು ವೈವಿಧ್ಯತೆ ಗಾನ ಸುಧೆ ಮೆರಗು ಮೂಡಿಸಿತು.

ಏತನ್ಮಧ್ಯೆ, ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳ 70 ಕಾರುಗಳು ಕ್ರೀಡಾಂಗಣಪ್ರವೇಶಿಸಿತು ಮೆಜೆಸ್ಟಿ ಕ್ವೀನ್ ಎಲಿಜಬೆತ್ ಅವರನ್ನು ಪ್ರತಿನಿಸುವ ಪ್ರಿನ್ಸ್ ಚಾಲ್ಸರ್ ಅವರು ಡಚೆಸ್ ಆಫ್ ಕಾನ್ರ್ವಾಲ್ ಜೊತೆಗೆ ತಮ್ಮ ಆಸ್ಟನ್ ಮಾರ್ಟಿನ್ ಕಾರಿನಲ್ಲಿ ಆಗಮಿಸಿದರು.

ಕಾರುಗಳ ರಚನೆಯು ಮೋಟಾರು ಉದ್ಯಮದ ಇತಿಹಾಸಕ್ಕೆ ಗೌರವಿಸಿತು. ಸಂಸ್ಕøತಿ ಮತ್ತು ವೈವಿಧ್ಯತೆಯ ಅದ್ಭುತ ಪ್ರದರ್ಶನದ ನಂತರ, ಸಂಜೆ ಚಾರ್ಲಿ ಚಾಪ್ಲಿನ್‍ಗೆ ಗೌರವ ಸಲ್ಲಿಸಲಾಯಿತು, ಪೌರಾಣಿಕ ಹಾಸ್ಯನಟನನ್ನು ನಗರದ ವೀರರಲ್ಲಿ ಒಬ್ಬ ಎಂದು ಪ್ರಶಂಸಿಸಲಾಯಿತು.

72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳು ಇಲ್ಲಿವೆ ಇದರಿಂದ ಬರ್ಮಿಂಗ್‍ಹ್ಯಾಮ್ ಭವ್ಯವಾಗಿ ಕಾಣುತ್ತದೆ ಎಮದು ಕಾಮನ್‍ವೆಲ್ತ್ ಗೇಮ್ಸ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಹೇಳಿದರು. ನಮ್ಮ 92 ವರ್ಷಗಳ ಇತಿಹಾಸದಲ್ಲಿ ಈ ಘಟನೆಯು ಕಾಮನ್‍ವೆಲ್ತï ಕ್ರೀಡಾಕೂಟದ ಶ್ರೇಷ್ಠ ಮತ್ತು ಪ್ರಮುಖ ಆವೃತ್ತಿಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು ನಂತರ ವಿವಿಧ ರಾಷ್ಟ್ರಗಳ ಕ್ರೀಡಾಪಟುಗಳ ಮೆರವಣಿಗೆ ಪ್ರಾರಂಭವಾಯಿತು.

ಆಸ್ಟ್ರೇಲಿಯಾವು ಹೊಂದಿನ ಕ್ರೀಡಾಕೂಟದ ಆತಿಥೇಯವಾಗಿದ್ದರಿಂದ ಪೆರೇಡ್‍ನಲ್ಲಿ ಮೊದಲು ಪ್ರವೇಶಿಸಿತು, ನಂತರ ಉಳಿದ ದೇಶಗಳು ವರ್ಣಮಾಲೆಯ ಕ್ರಮದಲ್ಲಿ ಪ್ರವೇಶಿಸಿದವು.

ಆಫ್ರಿಕಾ, ಅಮೇರಿಕಾ, ಏಷ್ಯಾ, ಕೆರಿಬಿಯನ್ ದೇಶಗಳು ಹಿಂಬಾಲಿಸಿದವು ಮತ್ತು ಭಾರತ ತಂಡವನ್ನು ಡಬಲ್ ಒಲಿಂಪಿಕ್ಸ್ ï ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಅವರು ದೊಡ್ಡ ಹರ್ಷೋದ್ಗಾರಗಳ ನಡುವೆ ತಂಡವನ್ನು ಮುನ್ನಡೆಸಿದರು.

ಎರಡೂವರೆ ಗಂಟೆಗಳ ಸುದೀರ್ಘ ಭವ್ಯತೆ, ಶ್ರೀಮಂತ ಸಂಸ್ಕøತಿ, ವೈವಿಧ್ಯತೆ ಮತ್ತು ಪರಂಪರೆಯನ್ನು ಪ್ರದರ್ಶಿಸಿದ ಸಮಾರಂಭದಲ್ಲಿ 2,000 ಕ್ಕೂ ಹೆಚ್ಚು ಪ್ರದರ್ಶಕರು ಮೆಕ್ಸಿಕನ್ ಅಲೆಯಾಗಿ ಸಂಭ್ರಮಿಸಿದರು.

Articles You Might Like

Share This Article