ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗೆದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

Social Share

ನವದೆಹಲಿ, ಆ.13- ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಾದ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ಅವರು, ಕಳೆದ ಕೆಲವು ವಾರಗಳಲ್ಲಿ ದೇಶವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ಮಾಡಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿನ ಐತಿಹಾಸಿಕ ಪ್ರದರ್ಶನದ ಜೊತೆಗೆ, ದೇಶವು ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಿದೆ ಎಂದಿದ್ದಾರೆ.

ಕ್ರೀಡಾಪಟುಗಳು ಕ್ರೀಡಾಂಗಣ ದಲ್ಲಿ ಸ್ಪರ್ಧೆ ಮಾಡುತ್ತಿದ್ದರೆ, ಕೋಟಿಗಟ್ಟಲೆ ಭಾರತೀಯರು ಇಲ್ಲಿ ಪ್ರದರ್ಶನ ನೀಡುತ್ತಿದ್ದರು. ತಡರಾತ್ರಿಯವರೆಗೂ ಅಥ್ಲೇಟಿಕ್ಗಳ ಪ್ರತಿಯೊಂದು ನಡೆಯನ್ನು ಗಮನಿಸುತ್ತಿದ್ದರು. ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ನೋಡಿದ ಬಳಿಕವೇ ಅನೇಕ ಜನರು ಮಲಗುತ್ತಿದ್ದರು ಎಂದಿದ್ದಾರೆ.

ಸಂವಾದದ ಸಮಯದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಾವು 4 ಹೊಸ ಪಂದ್ಯಗಳಲ್ಲಿ ಗೆಲ್ಲುವ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಲಾನ್ ಬೌಲ್ಗಳಿಂದ ಹಿಡಿದು ಅಥ್ಲೆಟಿಕ್ಸ್ವರೆಗೆ ನಮ್ಮ ಕ್ರೀಡಾಪಟುಗಳು ಅದ್ಬುತ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದಿಂದ ದೇಶದಲ್ಲಿ ಹೊಸ ಕ್ರೀಡೆಗಳತ್ತ ಯುವಕರ ಆಸಕ್ತಿಯು ಹೆಚ್ಚಾಗಲಿದೆ ಎಂದರು.

ಬಾಕ್ಸಿಂಗ್, ಜೂಡೋ, ಕುಸ್ತಿ ಕ್ರೀಡೆಗಳಲ್ಲಿ ಹೆಣ್ಣುಮಕ್ಕಳು ಪ್ರಾಬಲ್ಯ ಸಾಸಿದ ರೀತಿ ಅದ್ಭುತವಾಗಿದೆ. ನೀವು ದೇಶಕ್ಕೆ ಪದಕವನ್ನು ನೀಡುವುದು ಮಾತ್ರವಲ್ಲ, ನಾವು ಸಂಭ್ರಮಿಸಲು, ಹೆಮ್ಮೆಪಡಲು ಅವಕಾಶವನ್ನು ನೀಡುತ್ತೀರಿ, ಏಕ್ ಭಾರತ್, ಶ್ರೇಷ್ಠ ಭಾರತ ಎಂಬ ಮನೋಭಾವವನ್ನು ಬಲಪಡಿಸಿದ್ದೀರಾ ಎಂದು ಪ್ರಧಾನಿ ಕ್ರೀಡಾಪಟುಗಳನ್ನು ಕುರಿತು ಹೇಳಿದರು.

ಕ್ರೀಡೆಯಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಲು ದೇಶದ ಯುವಕರನ್ನು ವಿಜೇತರು ಪ್ರೇರೇಪಿಸಿದ್ದಾರೆ. ತ್ರಿವರ್ಣ ಧ್ವಜದ ಶಕ್ತಿ ಏನು ಎಂಬುದನ್ನು ಸ್ವಲ್ಪ ಸಮಯದ ಹಿಂದೆ ಉಕ್ರೇನ್ನಲ್ಲಿ ನೋಡಿದ್ದೇವೆ. ತ್ರಿವರ್ಣ ಧ್ವಜವು ಭಾರತೀಯರಿಗೆ ಮಾತ್ರವಲ್ಲ, ಇತರ ದೇಶಗಳ ಜನರಿಗೆ ಯುದ್ಧಭೂಮಿಯಿಂದ ಹೊರಬರಲು ರಕ್ಷಣಾತ್ಮಕ ಗುರಾಣಿಯಾಗಿದೆ ಎಂದರು.

ಖೇಲೋ ಇಂಡಿಯಾ ವೇದಿಕೆಯಿಂದ ಹೊರಬಂದ ಅನೇಕ ಆಟಗಾರರು ಈ ಬಾರಿ ಉತ್ತಮ ಪ್ರದರ್ಶನ ನೀಡಿರುವುದು ಖುಷಿ ತಂದಿದೆ. ಉನ್ನತ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮ ಕಂಡುಬಂದಿದೆ. ಹೊಸ ಪ್ರತಿಭೆಗಳನ್ನು ಹುಡುಕಲು, ಸೂಕ್ತ ವೇದಿಕೆಗೆ ಕರೆದೊಯ್ಯಲು ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗಿದೆ ಎಂದರು.

ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿಜೇತರನ್ನು ಕಳೆದ ಬಾರಿ ದೇಶದ 75 ಶಾಲೆಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಪೆÇ್ರೀತ್ಸಾಹಿಸುವಂತೆ ವಿನಂತಿಸಿದ್ದೆ. ಮೀಟ್ ದಿ ಚಾಂಪಿಯನ್ ಅಭಿಯಾನದ ಅಡಿಯಲ್ಲಿ, ಅನೇಕ ಕ್ರೀಡಾಳುಗಳು ತಮ್ಮ ಬಿಡುವಿಲ್ಲದ ಸಮಯದ ನಡುವೆಯೂ ಈ ಕೆಲಸ ಮಾಡಿದ್ದಾರೆ. ಕಾಮನ್ವೆಲ್ತ್ ವಿಜೇತರು ಈ ಅಭಿಯಾನವನ್ನು ಮುಂದುವರಿಸಿ ಎಂದು ಸಲಹೆ ನೀಡಿದರು.

Articles You Might Like

Share This Article