ಬೆಂಗಳೂರು,ಮಾ.2- ಕಟ್ಟಡಗಳ ನಿರ್ಮಾಣದ ವೇಳೆ ನೀಡಲಾರುವ ನಿರಾಪೇಕ್ಷಣಾ ಪತ್ರ ಪದ್ಧತಿಯನ್ನು ಸಂಪೂರ್ಣ ಆನ್‍ಲೈನ್‍ಗೊಳಿಸಿ, ಸರಳೀಕರಣ, ಕಾಲಮಿತಿ ಮತ್ತು ಪಾರದರ್ಶಕತೆಯನ್ನು ಜಾರಿಗೆ ತರುವುದಾಗಿ ಬಿಬಿಎಂಪಿ ತಿಳಿಸಿದೆ.
ತನ್ನ 2023-24ನೇ ಸಾಲಿನ ಬಜೆಟ್‍ನಲ್ಲಿ, ನಗರ ಯೋಜನೆ ಶುಲ್ಕದ ಬಾಬ್ತಿನಲ್ಲಿ ಸರ್ ಚಾರ್ಜ್ ಸೇರಿದಂತೆ ಸುಧಾರಿತ ಆಯವ್ಯಯದಲ್ಲಿ 526 ಕೋಟಿ ರೂ ಸಂಗ್ರಹಿಸುವ ಗುರಿ ಇದೆ. ಹಿಂದಿನ ವರ್ಷದ 426 ಕೋಟಿ ರೂ ಹೋಲಿಕೆಯಲ್ಲಿ ಇದು ಶೇಕಡ 24 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನೆಡೆ
2023-24ನೇ ಸಾಲಿನಲ್ಲಿ ನಗರ ಯೋಜನೆ ಶುಲ್ಕದ ಸಂಗ್ರಹ ಹೆಚ್ಚಾಗಲಿದ್ದು, ಒಟ್ಟು 658 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇದೆ. ಪಾಲಿಕೆಯ ನಗರ ಯೋಜನಾ ವಿಭಾಗದಲ್ಲಿ ಕಟ್ಟಡಗಳ ನಿರ್ಮಾಣ ಅನುಮತಿ ನೀಡುವ ಸಂದರ್ಭದಲ್ಲಿ ಹಲವಾರು ಇಲಾಖೆಗಳಿಂದ ನಿರಾಪೇಕ್ಷ ಣಾ ಪತ್ರ ಪಡೆಯಲಾಗುತ್ತಿದೆ.
2023-24ನೇ ಸಾಲಿನಲ್ಲಿ ಈ ಪದ್ದತಿಗೆ ತಂತ್ರಾಂಶ ಅಳವಡಿಕೆ ಮಾಡಿ ಸುಧಾರಣೆ ತರಲಾಗುವುದು. ಸಂಬಂಧಪಟ್ಟ ಬೆಸ್ಕಾಂ, ಹೆಚ್.ಎ.ಎಲ್., ಬಿ.ಎಂ.ಆರ್.ಸಿ.ಎಲ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿ ಶಾಮಕ ಸೇರಿ ಇತ್ಯಾದಿ ಇಲಾಖೆಗಳಿಂದ ಆನ್‍ಲೈನ್ ಮುಖಾಂತರವೇ ಅನುಮೋದನೆ ಕೊಡುವುದನ್ನು ಪ್ರಾರಂಭಿಸಲಾಗುವುದು.
ಈ ತಂತ್ರಾಂಶ ಏಕೀಕರಣದಿಂದ ಕಟ್ಟಡ ನಿರ್ಮಿತಿ ಅನುಮೋದನೆ ಪ್ರಕ್ರಿಯೆ ಸುಲಭ, ಪಾರದರ್ಶಿಕ ಹಾಗೂ ಸಮಯ ಬದ್ಧ ವಾಗಲಿದೆ ಎಂದು ತಿಳಿಸಲಾಗಿದೆ.
#CompleteComputerization, #BuildingConstruction, #Permit, #BBMPBudget,