ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

Social Share

ಬೀಜಿಂಗ್, ಅ.22- ನಿರೀಕ್ಷೆಯಂತೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‍ಪಿಂಗ್ ಮೂರನೇ ಅಧಿಗೆ ಪುನರಾಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಕೇಂದ್ರ ಸಮಿತಿಯ ಒಂದು ವಾರಗಳ ಸಮಾವೇಶ ಶನಿವಾರ ಸಮಾರೋಪವಾಗಿದೆ.

ಸಮಾವೇಶದಲ್ಲಿ ಕ್ಸಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ನಿರ್ಣಯ ಕೈಗೊಳ್ಳಲಾಗಿದೆ. ಬಹುತೇಕ ಭಾನುವಾರ ಈ ನಿರ್ಣಯವನ್ನು ಅನುಮೋದಿಸುವ ನಿರೀಕ್ಷೆಯಿದೆ. ಈವರೆಗೂ ನಡೆದಿರುವ ಸಮಾವೇಶದಲ್ಲಿ 205ಕ್ಕೂ ಹೆಚ್ಚು ಹಿರಿಯ ನಾಯಕರನ್ನು ಒಳಗೊಂಡ ಕೇಂದ್ರ ಸಮಿತಿ ರಚನೆಯಾಗಿದೆ.

ರಾಷ್ಟ್ರ್ದ ಎರಡನೇ ಅಧಿಕೃತ ಮತ್ತು ಆರ್ಥಿಕ ಸುಧಾರಣೆಗಳ ಪ್ರತಿಪಾದಕರಾಗಿದ್ದ ಲೀ ಕೆಕಿಯಾಂಗ್‍ರನ್ನು ರಾಷ್ಟ್ರದ ಸರ್ವಶಕ್ತ ಪಾಲಿಟ್‍ಬ್ಯುರೊ ಸ್ಥಾಯಿ ಸಮಿತಿಯಿಂದ ಕೈ ಬಿಡಲಾಗಿದೆ. ಹೊರಗುಳಿದ ಏಳು ಸದಸ್ಯರಲ್ಲಿ ಲೀ ಕೆಕಿಯಾಂಗ್ ಕೂಡ ಸೇರಿದ್ದಾರೆ. ಶನಿವಾರ ಬಿಡುಗಡೆ ಮಾಡಲಾದ 205 ಸದಸ್ಯರ ಕೇಂದ್ರ ಸಮಿತಿ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಪಕ್ಷದ ಸಂವಿಧಾನಕ್ಕೆ ಪ್ರಮುಖ ತಿದ್ದುಪಡಿ ಮಾಡಲಾಗಿದೆ. ಅದು ಚೀನಾದ ಅಧ್ಯಕ್ಷರ ಸ್ಥಾನಮಾನವನ್ನು ಇನ್ನಷ್ಟು ಹೆಚ್ಚಿಸಲಿದೆ. ತಿದ್ದುಪಡಿಯ ಸಾರಂಶವನ್ನು ತಕ್ಷಣವೇ ಬಿಡುಗಡೆ ಮಾಡಿಲ್ಲ, ಆದರೆ ಅನುಮೋದನೆಗೂ ಮೊದಲು ನಿರ್ಣಯದ ತಾರ್ಕಿಕತೆಯನ್ನು ಅನೌನ್ಸರ್ ಓದಿದ್ದಾರೆ. ಮಿಲಿಟರಿ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ಪಕ್ಷದ ಅಕಾರವನ್ನು ಬಲಪಡಿಸುವಲ್ಲಿ ಕ್ಸಿ ಮತ್ತು ಅವರ ಸಾಧನೆಗಳನ್ನು ಅನೌನ್ಸರ್ ಪದೇ ಪದೇ ಪ್ರಸ್ತಾಪಿಸಿದರು.

ಸರಿಸುಮಾರು 2,000 ಪ್ರತಿನಿಧಿಗಳು ಭಾಗವಹಿಸಿದ್ದ ಸಮಾವೇಶದಲ್ಲಿ ಮುಂದಿನ ಐದು ವರ್ಷಗಳವರೆಗೆ ಪಕ್ಷವನ್ನು ಆಳಲು 205 ಸದಸ್ಯರ ಹೊಸ ಕೇಂದ್ರ ಸಮಿತಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲಾಗಿದೆ. ಏಳು ಸದಸ್ಯರ ಪ್ರಬಲ ಸ್ಥಾಯಿ ಸಮಿತಿ ಆಯ್ಕೆ ಮಾಡುವ ರಾಜಕೀಯ ಬ್ಯೂರೋವನ್ನು ಆಯ್ಕೆ ಮಾಡಲು ಉನ್ನತ ನಾಯಕರನ್ನು ಒಳಗೊಂಡ ಪ್ರಬಲ ಸಂಸ್ಥೆಯಾದ ಕೇಂದ್ರ ಸಮಿತಿಯು ಭಾನುವಾರ ಸಭೆ ಸೇರಲಿದೆ.

ಈ ವೇಳೆ ಪಕ್ಷದ ಕಾರ್ಯವಿಧಾನದ ಪ್ರಕಾರ ಸ್ಥಾಯಿ ಸಮಿತಿಯು ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತದೆ. ಅದರಲ್ಲಿ ಕ್ಸಿ ಪುನರಾಯ್ಕೆಯಾಗಲಿದ್ದಾರೆ. 2012 ರಿಂದಲೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಉಳಿದಿರುವ 69 ವರ್ಷದ ಕ್ಸಿ ಹೊಸ ಸ್ಥಾಯಿ ಸಮಿತಿಯ ಭಾಗವಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ, ಇದರಿಂದ ಮುಂದಿನ ಐದು ವರ್ಷಗಳ ಅವಧಿಯ ಅಧಿಕಾರವಾಧಿಗೆ ಅವರು ಚುನಾಯಿತರಾಗಲಿದ್ದಾರೆ.

ಈಗಾಗಲೇ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿರುವ ಕ್ಸಿ, ಪಕ್ಷದ ಸಂಸ್ಥಾಪಕ ಮಾವೊ ಝೆಡಾಂಗ್ ನಂತರ ಮೂರನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿಯುವ ಮೊದಲ ಚೀನಾದ ನಾಯಕರಾಗಲಿದ್ದಾರೆ.

ಪುನೀತ ಪರ್ವ ಕಾರ್ಯಕ್ರಮದಲ್ಲೇ ಅಪ್ಪು ಅಭಿಮಾನಿ ಸಾವು

ಮಾವೋ ಅವರಂತೆ ಜೀವನ ಪರ್ಯಂತ ಅಧಿಕಾರದಲ್ಲಿ ಮುಂದುವರಿಯಲು ಹೊಸ ಹಾದಿಯನ್ನು ಕ್ಸಿ ಹಿಡಿದಿದ್ದಾರೆ ಎಂದು ಟೀಕಾಕಾರರು ವಿಶ್ಲೇಷಿಸಿದ್ದಾರೆ.

ಬಹುತೇಕ ನಾಳೆ ಕ್ಸಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೊಸ ನಾಯಕನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವ ಪತ್ರಕರ್ತರನ್ನು ನಾಲ್ಕು ದಿನಗಳಿಂದ ಕ್ವಾರಂಟೈನಲ್ಲಿ ಇಡಲಾಗಿದೆ. ಸಮಾವೇಶದಲ್ಲೂ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗಿದೆ.

ಕ್ಸಿ ಪುನರಾಯ್ಕೆಯ ನಂತರ ಚೀನಾದಲ್ಲಿ ಅಣ್ವಸ್ತ್ರಗಳ ಶಸ್ತ್ರಗಾರ ಮತ್ತಷ್ಟು ಬಲಗೊಳ್ಳಲಿದೆ ಎಂಬ ವ್ಯಾಖ್ಯಾನ ಕೇಳಿ ಬಂದಿದೆ. ಕಮ್ಯೂನಿಸ್ಟ್ ಕಾಂಗ್ರೆಸ್‍ನಲ್ಲಿ ಸೆಂಟ್ರಲ್ ಮಿಲಿಟರಿ ಕಮಿಷನ್‍ನ 63 ಪುಟಗಳ ವರದಿಯನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಅಧ್ಯಕ್ಷರು ಚೀನಾದ ಪ್ರಬಲ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿದ ಸರ್ವಾಧ್ಯಕ್ಷರಾಗಿರುತ್ತಾರೆ. ಮಾನವರಹಿತ, ಬುದ್ಧಿವಂತ ಯುದ್ಧ ಸಾಮಥ್ರ್ಯಗಳ ವೇಗರ್ವತ ಅಭಿವೃದ್ಧಿ, ಸಂಘಟಿತ ಅಭಿವೃದ್ಧಿಯ ಚಿಂತನೆಗಳು ವರದಿಯಲ್ಲಿ ಸೇರಿವೆ.

10 ಲಕ್ಷ ಉದ್ಯೋಗ ಕಲ್ಪಿಸುವ ರೋಜಗಾರ್ ಮೇಳಕ್ಕೆ ಮೋದಿ ಚಾಲನೆ

ಪ್ರಮುಖ ಪರಮಾಣು ಶಕ್ತಿಯಲ್ಲಿ ಪ್ರಬಲ ರಾಷ್ಟ್ರವಾಗಿರುವ ಅಮೆರಿಕಾದೊಂದಿಗಿನ ಪೈಪೋಟಿಗೆ ಚೀನಾ ಸಜ್ಜುಗೊಂಡಿದೆ. ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಆಯಕಟ್ಟಿನ ಸ್ಥಳಗಳಲ್ಲಿ ಪರಮಾಣು ಪಡೆಗಳನ್ನು ಹೆಚ್ಚಿಸಲಾಗುವುದು. ಭೂ-ಆಧಾರಿತ ಖಂಡಾಂತರ ಕ್ಷಿಪಣಿಗಳು, ಜಲಾಂತರ್ಗಾಮಿ ಉಡಾವಣಾ ಕ್ಷಿಪಣಿಗಳು ಮತ್ತು ವಾಯು ಉಡಾವಣಾ ಶಸ್ತ್ರಾಸ್ತ್ರಗಳ ಸಂಯೋಜನೆ ಜೊತೆಗೆ ಪರಮಾಣುಗೆ ಪ್ರತಿಕ್ರಿಯಿಸುವ ಮತ್ತು ದಾಳಿ ಸಾಮಥ್ರ್ಯ ಹೆಚ್ಚಿಸುವ ಕ್ರಮಗಳಿಗೆ ಅನುಮೋದನೆ ದೊರೆತಿದೆ.

ಕಂದಾಯ ಇಲಾಖೆ ಕಚೇರಿಗಳಲ್ಲಿ ಅಕ್ರಮ, ಲೋಕಾಯುಕ್ತ ತನಿಖೆ ಆರಂಭ

ಚೀನಾದ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಅಮೆರಿಕಾ ಈ ಮೊದಲೇ ಎಚ್ಚರಿಕೆ ನೀಡಿತ್ತು. ನವೆಂಬರ್‍ನಲ್ಲಿ ಪೆಂಟಗನ್ ಬಿಡುಗಡೆ ಮಾಡಿದ ವರದಿಯಲ್ಲಿ 2027 ರ ವೇಳೆಗೆ ಚೀನಾ 700 ಮತ್ತು 2030 ರ ವೇಳೆಗೆ ಕನಿಷ್ಠ ಸಾವಿರಕ್ಕೂ ಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಬಹುದು ಎಂದು ಅಂದಾಜಿಸಿತ್ತು. ಕ್ಸಿ ಆಡಳಿತ ಅದನ್ನು ಸತ್ಯ ಮಾಡಲು ಮುಂದಾಗಿದೆ ಎಂದು ವರದಿ ಮುನ್ಸೂಚನೆ ನೀಡಿದೆ.

Articles You Might Like

Share This Article