ಚಂಡೀಗಢ,ಜ.15- ಭಾರತ್ ಜೋಡೋ ಯಾತ್ರೆಯ ವೇಳೆ ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಜಲಂರ್ಧ ಜಿಲ್ಲೆಯ ಅವರ ಹುಟ್ಟೂರಾದ ಧಲಿವಾಲ್ ಗ್ರಾಮದಲ್ಲಿ ನಡೆಸಲಾಯಿತು.
ಎರಡು ಬಾರಿ ಸಂಸದರಾಗಿದ್ದ 76 ವರ್ಷದ ಸಂತೋಖ್ ಶನಿವಾರ ಪಂಜಾಬ್ನ ಫಿ¯್ಲರ್Ëನಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದಾಗ ನಿಧನರಾದರು. ಅವರ ಸಾವಿನ ನಂತರ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಚೌಧರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಪ್ರಜ್ಞೆ ತಪ್ಪಿದರು. ಅವರನ್ನು ಫಗ್ವಾರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.ಚೌಧರಿ ಅವರು ಕಠಿಣ ಪರಿಶ್ರಮಿ ನಾಯಕ ಮತ್ತು ಪಕ್ಷದ ಪ್ರಬಲ ಆಧಾರ ಸ್ತಂಭ ಎಂದು ರಾಹುಲ್ ಗಾಂ ಬಣ್ಣಿಸಿದ್ದಾರೆ. ಇಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ಸಂಸದರ ಕುಟುಂಬವದ ಸದಸ್ಯರನ್ನು ಭೇಟಿ ಮಾಡಿದರು.
75ನೇ ಸೇನಾ ದಿನ : ಬೆಂಗಳೂರಲ್ಲಿ ಮೈನವಿರೇಳಿಸಿದ ಸೈನಿಕರ ಶಕ್ತಿ ಪ್ರದರ್ಶನ
ಮುಖ್ಯಮಂತ್ರಿ ಭಗವಂತ್ ಮಾನ್, ಮಾಜಿ ಮುಖ್ಯಮಂತ್ರಿ ಅಮರಿಂದರ್ಸಿಂಗ್, ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ಸಿಂಗ್ ಬಾದಲ್ ಸೇರಿದಂತೆ ಹಲವು ನಾಯಕರು ಚೌಧರಿ ಅವರ ನಿಧನಕ್ಕೆ ಪಕ್ಷಾತೀತವಾಗಿ ಶೋಕ ವ್ಯಕ್ತಪಡಿಸಿದ್ದಾರೆ.
ಸಂಸದರ ನಿಧನದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಭಾರತ್ ಜೋಡೋ ಯಾತ್ರೆ, ಭಾನುವಾರ ಮಧ್ಯಾಹ್ನ ಜಲಂಧರ್ನ ಖಾಲ್ಸಾ ಕಾಲೇಜು ಮೈದಾನದಿಂದ ಪುನರಾರಂಭಗೊಂಡಿದೆ. ಯಾತ್ರೆಯ ವೇಳಾಪಟ್ಟಿಯ ಪ್ರಕಾರ ಆದಂಪುರದಲ್ಲಿ ರಾತ್ರಿ ತಂಗಲಿದೆ.
ಪಂಜಾಬ್ ಲೆಗ್ ಸಮೀಪ ಫತೇರ್ಘ ಸಾಹಿಬ್ ಸಿರ್ಹಿಂ ಬಳಿ ಯಾತ್ರೆಯನ್ನು ಸ್ವಾಗತಿಸಲಾಗಯಿತು. ಲೋಹ್ರಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು.ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಕೋಮುವಾದ, ದ್ವೇಷದ ರಾಜಕಾರಣ ವಿರೋಸಿ ರಾಹುಲ್ ಗಾಂ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆ ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಲ್ಲಿ ಗಾಂ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.
ಈವರೆಗೂ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಪಾದಯಾತ್ರೆ ಹಾದು ಬಂದಿದೆ.
#Congress, #MP, #SantokhChaudhary, #Cremation, #NativeVillage,