Friday, March 29, 2024
Homeಇದೀಗ ಬಂದ ಸುದ್ದಿಕಾಂಗ್ರೆಸ್ 60% ಕಮಿಷನ್ ಸರ್ಕಾರ: ಅಶೋಕ್

ಕಾಂಗ್ರೆಸ್ 60% ಕಮಿಷನ್ ಸರ್ಕಾರ: ಅಶೋಕ್

ಬೆಂಗಳೂರು,ನ.18- ವರ್ಗಾವಣೆ ದಂಧೆ ಈಗಲೂ ಎಗ್ಗಿಲ್ಲದೆ ನಡೆಯುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ 60% ಕಮಿಷನ್ ಸರ್ಕಾರ ಎಂಬುದು ಜಗಜ್ಜಾಹಿರವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಇದೇ ಕಾಂಗ್ರೆಸ್‍ನಾಯಕರು ಆರೋಪಿಸಿದ್ದರು. ಅಂದು ಯಾವುದೇ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಿರಲಿಲ್ಲ. ಈಗ ಇವರ ವರ್ಗಾವಣೆ ದಂಧೆಗೆ ದಾಖಲೆಗಳೇ ಬಹಿರಂಗಗೊಂಡಿವೆ. ನನ್ನ ಪ್ರಕಾರ ಇದು60% ಕಮಿಷನ್ ಸರ್ಕಾರ ಎಂದು ಆಪಾದಿಸಿದರು.

ಪಕ್ಷದೊಳಗೆ ಏನೇ ಅಸಮಾಧಾನ ಇದ್ದರೂ ಅಸಮಾಧಾನವಿದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ವಿರೋಧ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದರು. ಒಂದು ರಾಜಕೀಯ ಪಕ್ಷವೆಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಒಬ್ಬರಿಗೆ ಒಂದು ಸ್ಥಾನ ಸಿಕ್ಕಾಗ ಕೈ ತಪ್ಪಿದವರು ಅಸಮಾಧಾನಗೊಳ್ಳುವುದು ಸಹಜ. ಆದರೆ ನಮ್ಮ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಇರಲಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‍ನಿಂದ ಕೊಲಿಜಿಯಂ ಶಿಫಾರಸು ವಿಳಂಬ ವಿಚಾರಣೆ

ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಯಾರು ಬೇಸರಪಟ್ಟುಕೊಂಡಿದ್ದಾರೋ ಅವರ ಜೊತೆ ನಾನೇ ಖುದ್ದು ಮಾತನಾಡುತ್ತೇನೆ. ಯಾರೂ ಕೂಡ ಪಕ್ಷದ ತೀರ್ಮಾನವನ್ನು ವಿರೋಧಿಸಬಾರದು. ಕೆಲವು ಸಂದರ್ಭಗಳಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯ ಎಂದು ತಿಳಿಸಿದರು.

ಬಿಜೆಪಿ ಎಲ್ಲ ಸಂದರ್ಭಗಳಲ್ಲೂ ಸರ್ಕಾರಕ್ಕೆ ಅಗತ್ಯವಾದ ಸಲಹೆಸೂಚನೆಗಳನ್ನು ಕೊಟ್ಟು ಸಹಕಾರವನ್ನೂ ನೀಡಲಿದ್ದೇವೆ. ಸದನದ ಒಳಗೆ, ಹೊರಗೆ ಒಂದು ರಚನಾತ್ಮಕ ರಾಜಕೀಯ ಪಕ್ಷವಾಗಿ ನಾವು ಕೆಲಸ ಮಾಡಲಿದ್ದೇವೆ. ಅದನ್ನು ತಪ್ಪು ಎಂದು ಹೇಳಲು ಹಿಂದೆಮುಂದೆ ನೋಡುವುದಿಲ್ಲ. ಸರ್ಕಾರದ ಕಿವಿ ಹಿಂಡುವುದನ್ನು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ವಿರೋಧ ಪಕ್ಷವಾಗಿ ನಾವು ಎಲ್ಲವನ್ನು ವಿರೋಧ ಮಾಡುವುದೇ ನಮ್ಮ ಕೆಲಸವಲ್ಲ. ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ದನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡುತ್ತೇವೆ. ಅದಕ್ಕೂ ಬಗ್ಗದಿದ್ದಾಗ ಸರ್ಕಾರವನ್ನೇ ಕಿತ್ತೆಸೆಯಲು ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದರು.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಎಂದೂ ಕೂಡ ಯಾವುದೇ ಹುದ್ದೆಗೆ ಲಾಬಿ ಮಾಡಿದವನಲ್ಲ. ವರಿಷ್ಠರು ನನ್ನ ಮೇಲೆ ಯಾವ ವಿಶ್ವಾಸ ಇಟ್ಟುಕೊಂಡು ಉನ್ನತ ಸ್ಥಾನ ನೀಡಿದ್ದಾರೋ ಅವರ ಗೌರವಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ.

ಹಿಮಾಚಲದಲ್ಲಿ ಪತ್ತೆಯಾಯ್ತು ರಷ್ಯಾ ದಂಪತಿ ಬೆತ್ತಲೆ ಶವಗಳು

ಬೆಳಗಾವಿ ಅವೇಶನದಿಂದಲೇ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದೇ ನಮ್ಮ ಮುಂದಿರುವ ಸವಾಲು. ಅದನ್ನು ನಾವು ಮೆಟ್ಟಿ ನಿಲ್ಲುತ್ತೇವೆ ಎಂಬ ವಿಶ್ವಾಸವಿದೆ. ಈ ಬಾರಿ ಕಾಂಗ್ರೆಸ್ ಅಕಾರದಲ್ಲಿದ್ದರೂ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದರು.

RELATED ARTICLES

Latest News