ಗಾಂಧೀಜಿ ಕೊಂದಿದ್ದು ನಾವೇ ಎಂದು ಒಪ್ಪಿಕೊಂಡ ಬಿಜೆಪಿ ನಾಯಕ : ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ

Social Share

ಬೆಂಗಳೂರು, ಆ.10- ಗಾಂಧೀಜಿ ಕೊಂದಿದ್ದು ನಾವೇ ಎಂದು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಸಂಘ ಪರಿವಾರ ಹೆಮ್ಮೆಯಿಂದ ಹೇಳಿಕೊಂಡಿದೆ. ಈ ಮೂಲಕ ಸಂಘದ ಕೂಸು ಬಿಜೆಪಿಯ ದೇಶ ದ್ರೋಹದ ಅಸಲಿ ಮುಖವಾಡ ಬಯಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ನೇರ ಪ್ರಸಾರದ ಚರ್ಚೆಯೊಂದರಲ್ಲಿ ಕಾಂಗ್ರೆಸ್ ನಾಯಕ ಸತ್ಯ ಪ್ರಕಾಶ್ ಮತ್ತು ಹಿಂದು ಮಹಾಸಭಾದ ನಾಯಕ ಎನ್ನಲಾದ ನಾರಾಯಣಸುಬ್ರಮಣ್ಯರಾಜು ಅವರ ನಡುವೆ ಚರ್ಚೆ ನಡೆದಿದ್ದು, ಅಲ್ಲಿ ನಾರಾಯಣ ರಾಜು ಅವರು ಮಹಾತ್ಮ ಗಾಂಧಿಯನ್ನು ಕೊಂದಿದ್ದು ನಾವೇ ಎಂದು ಸಮರ್ಥಿಸಿಕೊಂಡಿದ್ದಾರೆ.

ಗೋಡ್ಸೆ ನಮ್ಮ ಆರಾಧ್ಯ ದೈವ, ಹಿಂದು ಮಹಾಸಭಾ ವೀರ್ ಸಾರ್ವಕರ್ ನಮ್ಮ ಪೋಷಕರು. ದೇಶ ಇಬ್ಬಾಗವಾಗಬಾರದು ಎಂದು ಗಾಂಯನ್ನು ಕೊಂದಿದ್ದೇ ನಾವು. ಗಾಂಯನ್ನು ಮಹಾತ್ಮ ಎಂದು ನಾವು ಒಪ್ಪಿಕೊಂಡಿಲ್ಲ ಎಂದು ನಾರಾಯಣ ಸುಬ್ರಹ್ಮಣ್ಯ ರಾಜು ಸಮರ್ಥಿಸಿಕೊಂಡಿದ್ದಾರೆ.ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ಸತ್ಯಪ್ರಕಾಶ್ ಅವರು, ಸುಬ್ರಹ್ಮಣ್ಯರಾಜು ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿದೆ.

ಮುಂದುವರೆದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಭಾರತದ ಸ್ವಾತಂತ್ರ ಹೋರಾಟದ ಪ್ರಮುಖ ಘಟ್ಟವಾದ ಕ್ವಿಟ್ ಇಂಡಿಯಾ ಚಳವಳಿಯನ್ನು ಸಂಘ ಪರಿವಾರ ವಿರೋಧಿಸಿತ್ತು. ನಿನ್ನೆ ಕ್ವಿಟ್ ಇಂಡಿಯಾ ದಿನವನ್ನು ಆಚರಿಸದೆ ಬಿಜೆಪಿ ತನ್ನೊಳಗಿದ್ದ ದೇಶವಿರೋ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.

ಗಾಂ ಕೊಲೆ ಎಂದರೆ ಭಾರತದ ಕೊಲೆ ಮಾಡಿದಂತೆ. ಬಿಜೆಪಿ ಭಾರತದ ಕೊಲೆಗಡುಕರು ಎಂದು ಟೀಕಿಸಲಾಗಿದ್ದು, ದೇಶವಿರೋಬಿಜೆಪಿ ಎಂದು ಹ್ಯಾಸ್‍ಟ್ಯಾಗ್ ಬಳಸಿದೆ. ಸಂಘ ಪರಿವಾರ ಈ ದೇಶದ ಸಂವಿಧಾನ, ರಾಷ್ಟ್ರಧ್ವಜ, ಸಾರ್ವಭೌಮತ್ವಗಳಿಗೆ ದ್ರೋಹ ಎಸಗಿಕೊಂಡೇ ಬಂದಿದೆ. ಗೋಡ್ಸೆ ನಮ್ಮ ಆರಾಧ್ಯ ದೈವ ಎನ್ನುವ ಸಂಘ ಪರಿವಾರದಿಂದ ರಾಷ್ಟ್ರಭಕ್ತಿಯ ಪಾಠ ಕಲಿಯಬೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Articles You Might Like

Share This Article