ಬಿಜೆಪಿ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳೋದಕ್ಕೆ ಮಾತ್ರ ಸೀಮಿತವೇ..?

Social Share

ಬೆಂಗಳೂರು, ಆ.25- ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಡುತ್ತಿರುವುದಾಗಿ ಹೇಳುತ್ತಿರುವ ಹಾವು ಭಷ್ಟಚಾರಕ್ಕೆ ಸಂಬಂಧಿಸಿದ್ದಾ ಅಥವಾ ಸಿಡಿ ಕುರಿತಾರುವುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಪಕ್ಷದ ಶಿಸ್ತನ್ನು ಪ್ರಶ್ನಿಸಿರುವ ಕಾಂಗ್ರೆಸ್, ನನ್ನ ತಂಟೆಗೆ ಬಂದರೆ ನಿಜವಾದ ಹಾವು ಬಿಡ್ತೀನಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರ ಧಮಕಿ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವೇ ಎಂದು ಸವಾಲು ಹಾಕಿದೆ.

ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಯವರಿಗೆ ಕನಿಷ್ಠ ಪಕ್ಷ ಒಬ್ಬ ಯತ್ನಳರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ಆಡುವ ಮಾತುಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರದು, ಬಾಯಿ ಮಾತ್ರ ಯತ್ನಾಳರದು ಎಂದು ಲೇವಡಿ ಮಾಡಿದೆ.

ಚಿತ್ರದುರ್ಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಕಾರು, ಸ್ಥಳದಲ್ಲೇ ಮೂವ ಸಾವು

ಬಿಜೆಪಿಯವರೇ ಬಿಜೆಪಿಗೆ ವಿರುದ್ಧವಾಗಿದ್ದು, ಆ ಪಕ್ಷದ ನಾಯಕರು ಕಾಂಗ್ರೆಸ್ ಕಿಟಿಕಿಯಲ್ಲಿ ಇಣುಕುವುದರಲ್ಲೇ ನಿರತರಾಗಿದ್ದಾರೆ. ಆಂತರಿಕ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ. ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ. ಯತ್ನಳರು ಹೇಳುತ್ತಿರುವ ಹಾವು ಯಾವುದು ? ಭ್ರಷ್ಟಾಚಾರದ ಹಾವೇ? ಅಥವಾ ಸಿಡಿ ಹಾವೇ? ಎಂದು ಪ್ರಶ್ನಿಸಲಾಗಿದೆ.

Articles You Might Like

Share This Article