ಬೆಂಗಳೂರು,ಮಾ.1- ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಜನರತ್ತಾ ಕೈ ಬೀಸಿ ಹೋದರೆಂದರೆ ಬರೆ ಬಿತ್ತು ಎಂದೇ ಅರ್ಥ ಎಂದು ಕಾಂಗ್ರೆಸ್ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಗೆ ಆಕ್ರೋಶ ವ್ಯಕ್ತ ಪಡಿಸಿದೆ.
ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ ಅವರು ಜನರತ್ತ ಕೈ ಬೀಸಿ ಹೋಗಿದ್ದರು. ಅದರ ಬೆನ್ನಲ್ಲೆ ಇಂದು ಬೆಳಗ್ಗೆ ಅಡುಗೆ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಪ್ರತಿ ಸಿಲಿಂಡರ್ ದರ 1105 ರೂಪಾಯಿ ದಾಟಿದೆ. ಬೆಲೆ ಏರಿಕೆಯ, ಹಣದುಬ್ಬರ, ಆದಾಯ ಕುಸಿತದಂತಹ ಸಂದರ್ಭದಲ್ಲಿ ಸಿಲಿಂಡರ್ ದರ ಹೆಚ್ಚಳ ಜನ ಸಾಮಾನ್ಯರನ್ನು ಕಂಗೇಡಿಸಿದೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(01-03-2023)
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆ ಬರೆ ಎಳೆದು ಹೋದರು ಎಂದೇ ಅರ್ಥ. ಗೃಹಬಳಕೆಯ ಸಿಲಿಂಡರ್ ದರ ಇಂದಿನಿಂದ ಮತ್ತೆ 50 ರೂಪಾಯಿ ಏರಿಕೆಯಾಗಿದೆ.
ಮೋದಿಜಿಯ ಅಚ್ಛೆ ದಿನಗಳಲ್ಲಿ ಜನರು ಕಾಡುಮೇಡು ಅಲೆದು ಗೆಡ್ಡೆಗೆಣಸು ತಿಂದು ಬದುಕುವ ಹಂತಕ್ಕೆ ಬರುವುದಂತೂ ನಿಶ್ಚಿತ. ಈ ಅಮಾನವೀಯ ಬೆಲೆ ಏರಿಕೆಯಲ್ಲಿ ನೆರವು ನೀಡಲೆಂದೇ ಕಾಂಗ್ರೆಸ್ ಪಕ್ಷ ಪ್ರತಿ ಕುಟುಂಬಕ್ಕೆ ವಾರ್ಷಿಕ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಭರವಸೆಯನ್ನು ಘೋಷಿಸಿದೆ ಎಂದರು.
#Congress, #Attack, #PMModi, #LPGPriceHike,