ನವದೆಹಲಿ,ಜ.29- ಹಿಂಡೆನ್‍ಬರ್ಗ್ ವರದಿ ಬಹಿರಂಗವಾದ ನಂತರ ಅದಾನಿ ಕಂಪೆನಿಯ ಷೇರುಗಳು ಕುಸಿತ ಕಂಡು ಮಾರುಕಟ್ಟೆ ವಿಚಲಿತವಾಗಿದ್ದರೂ, ಸರ್ಕಾರಿ ಸ್ವಾಮ್ಯದ ಎಲ್‍ಐಸಿ ಅದಾನಿ ಸಂಸ್ಥೆಗಳಲ್ಲಿ ಮತ್ತಷ್ಟು ಹೂಡಿಕೆ ಮಾಡಿರುವುದನ್ನು ಕಾಂಗ್ರೆಸ್ ಮತ್ತು ಬಿಆರ್‍ಎಸ್ ಪಕ್ಷಗಳು ಪ್ರಶ್ನಿಸಿವೆ.
ಇಂದು ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವಿಟ್ ಮಾಡಿ, ಎಲ್‍ಐಸಿ 29 ಕೋಟಿ ವಿಮಾದಾರರನ್ನು ಹೊಂದಿದ್ದು, ಅದಾನಿ ಕಂಪನಿ ನಷ್ಟ ಅನುಭವಿಸುತ್ತಿರುವ ನಡುವೆಯೂ ಎಲ್‍ಐಸಿ ತನ್ನ ಮತ್ತಷ್ಟು ಹಣವನ್ನು ಅದಾನಿ ಗ್ರೂಪ್‍ನಲ್ಲಿ ಹೂಡಿಕೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಹಿಂಡೆನ್‍ಬರ್ಗ್ ವರದಿ ಬಹಿರಂಗವಾದ ಬಳಿಕ ಎರಡು ದಿನದಲ್ಲಿ ಎಲ್‍ಐಸಿ 22,442 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ ಮತ್ತಷ್ಟು ಹಣ ಹೂಡಿಕೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್‍ಐಸಿ ಸಂಸ್ಥೆಯ ಹೆಸರನ್ನೇ ಆಪ್ತರಿಗಾಗಿ ಲೂಟಿ ಹೂಡಿಕೆ ಎಂದು ಹೆಸರು ಬದಲಾವಣೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಎಲ್‍ಐಸಿ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಜನ ಸಾಮಾನ್ಯರು ಇದನ್ನು ನಂಬಿ ಪಾಲಿಸಿ ಮಾಡಿಸಿ, ಹೂಡಿಕೆ ಮಾಡಿದ್ದಾರೆ. ಅದಾನಿಯ ಐದು ಕಂಪನಿಗಳಲ್ಲಿ ಜನವರಿ 24ರ ವೇಳೆಗೆ ಎಲ್‍ಐಸಿ ಶೇ.1ರಿಂದ 9ರವರೆಗೆ ಷೇರುಗಳನ್ನು ಹೊಂದಿದೆ. ಇದರ ಮೌಲ್ಯ ಸರಿ ಸುಮಾರು 72,268 ಕೋಟಿ ರೂಪಾಯಿಗಳಷ್ಟಿತ್ತು.
ಅಮೆರಿಕಾದ ಹಿಂಡೆನ್‍ಬರ್ಗ್ ರಿಸರ್ಚ್‍ನ ವರದಿ ಬಹಿರಂಗವಾದ ಬಳಿಕ ಅದಾನಿ ಗ್ರೂಪ್‍ನ ಷೇರುಗಳ ಮೌಲ್ಯ ಕುಸಿದಿದ್ದು, ಸಾಲ ನೀಡಿರುವ ಕಂಪೆನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಷೇರು ಮೌಲ್ಯ ಕುಸಿತದಿಂದ ಎಲ್‍ಐಸಿ ಎರಡು ದಿನದಲ್ಲಿ 19 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
ದೇಶದ ಜನರ ನಡುವೆ ಬಿರುಕು ಮೂಡಿಸುವ ಯತ್ನಗಳು ನಡೆಯುತ್ತಿವೆ, ಎಚ್ಚರದಿಂದಿರಿ : ಮೋದಿ
ನಷ್ಟದ ಪ್ರಮಾಣ 24 ಸಾವಿರ ಕೋಟಿ ರೂಪಾಯಿಗೆ ತಲುಪಿದೆ. ಎಲ್‍ಐಸಿ ಮತ್ತು ಎಸ್‍ಬಿಐ ತಮ್ಮ ಷೇರು ಮೌಲ್ಯದಿಂದ ಸುಮಾರು 78 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಆದರೂ ಹಣಕಾಸು ಸಚಿವರು ಮೌನವಹಿಸಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಎಲ್‍ಐಸಿಯ ಷೇರು ಮೌಲ್ಯ 77 ಸಾವಿರ ಕೋಟಿಯಿಂದ ಕೋಟಿಯಿಂದ 53,000 ಸಾವಿರ ಕೋಟಿ ರೂಪಾಯಿಗೆ ಕುಸಿದಿದ್ದು, 24 ಕೋಟಿ ನಷ್ಟವಾಗಿದೆ. ಅದರ ನಂತರವೂ ಎಲ್‍ಐಸಿ 300 ಕೋಟಿ ರೂಪಾಯಿಗಳನ್ನು ಅದಾನಿ ಗ್ರೂಪ್‍ನಲ್ಲಿ ಹೂಡಿಕೆ ಮಾಡಿರುವುದೇಕೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಆಡಳಿತಾರೂಢ ಬಿಆರ್‍ಎಸ್‍ನ ನಾಯಕರು ಮಾರುಕಟ್ಟೆಯ ಸ್ಥಿತಿ ಚಿಂತಾಜನಕವಾಗಿದೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರ, ರಾಜ್ಯ ಪೌರಾಡಳಿತ ಸಚಿವ ಕೆ ಟಿ ರಾಮರಾವ್, ಅದಾನಿ ಕಂಪೆನಿಯಲ್ಲಿನ ಷೇರುಗಳ ಮೌಲ್ಯ ಕುಸಿತದಿಂದ ಎಲ್‍ಐಸಿ ಮತ್ತು ಎಸ್‍ಬಿಐ ಅನುಭವಿಸಿರುವ ನಷ್ಟಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ.
ದೇಶದಲ್ಲಿ ಹೆಚ್ಚು ಸಾಲ ನೀಡುವ ಎಸ್‍ಬಿಐ ಮತ್ತು ಹೆಚ್ಚು ವಿಮಾದಾರರನ್ನು ಹೊಂದಿರುವ ಎಲ್‍ಐಸಿಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಬೇಕಿದೆ ಎಂದಿದ್ದಾರೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಬಿಆರ್‍ಎಸ್ ಪಕ್ಷ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಪತ್ತಿಕಾ ಪ್ರಕಟಣೆಯಲ್ಲಿ, ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ.
‘Loot Investment for Cronies’: Congress attacks Modi govt as LIC doubles down on Adani