ಬೆಂಗಳೂರು,ಫೆ.28- ಸೂಕ್ತ ದಾಖಲೆಗಳು ಇಲ್ಲದೆ ಇದ್ದರೂ ನೂರಾರು ಕೋಟಿ ರೂಪಾಯಿ ಮೌಲ್ಯದ ಕಾಕಂಬಿ ರಫ್ತಿಗೆ ಪರವಾನಗಿ ನೀಡುವ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಭ್ರಷ್ಟಚಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಕಂಬಿ (ಮೋಲಾಸಿಸ್)ನಲ್ಲೂ ಬಿಜೆಪಿ ಸರ್ಕಾರ ಹಗರಣ ಮಾಡಿದೆ ಎಂದು ದೂರಿದರು.
ಮುಂಬೈ ಮೂಲದ ಕೆ.ಎಲ್.ರಿಸೋರ್ಸ್‍ಸ್ ಎಂಬ ಖಾಸಗಿ ಸಂಸ್ಥೆ ಎರಡು ಲಕ್ಷ ಮೆಟ್ರಿಕ್ ಟನ್ ಕಾಕಾಂಬಿಯನ್ನು ರಪ್ತು ಮಾಡಲು ಸರ್ಕಾರದ ಅನುಮಾತಿ ಕೇಳಿದ್ದಾರೆ. ಆ ವೇಳೆ ಅವರ ಬಳಿ ಯಾವ ದಾಖಲೆಗಳು ಇರಲಿಲ್ಲ. ಆದರೂ ಪರವಾನಗಿ ನೀಡಲಾಗಿದೆ.
ಮೋಲಾಸಿಸ್‍ನ್ನು ದೇಶಿಯ ಬಳಕೆಗೆ ನೀಡುವ ಎಂ 1 ಮತ್ತು ಸಾಗಾಣಿಕೆ, ದಾಸ್ತಾನು ಹಾಗ್ತೂ ರಫ್ತಿಗೆ ಎಂ-2 ಎಂಬ ಎರಡು ಮಾದರಿಯ ಪರವಾನಗಿಗಳನ್ನು ನೀಡಲಾಗುತ್ತಿದೆ. ಖಾಸಗಿ ಸಂಸ್ಥೆ ರಫ್ತಿಗೆ ಪರವಾನಗಿ ಕೇಳಿದೆ. ಆದರೆ ಇದಕ್ಕೆ ರಾಜ್ಯ ಡಿಸ್ಟಲರಿ ಸಂಘ ವಿರೋಧ ವ್ಯಕ್ತಪಡಿಸಿದೆ. ಉತ್ಪಾದನೆಯಾಗುತ್ತಿರುವ ಕಾಕಂಬಿ ರಾಜ್ಯದಲ್ಲಿನ ಬಳಕೆಗೆ ಸಾಲುತ್ತಿಲ್ಲ.
ಹಾಗಾಗಿ ರಫ್ತಿಗೆ ಅನುಮತಿ ನೀಡಬಾರದು ಎಂದು ಸಂಘ ಒತ್ತಾಯಿಸಿದೆ. ರಫ್ತಿಗೆ ಅವಕಾಶ ನೀಡಿದರೆ ರಾಜ್ಯದಲ್ಲಿ ಆಲ್ಕೋಹಾಲ್ ಉತ್ಪಾದನೆ ಕುಂಠಿತಗೊಳ್ಳುತ್ತದೆ. ರಾಜಸ್ವ ಸಂಗ್ರಹ ಕುಸಿಯಲಿದೆ ಎಂದು ಆತಂಕ ವ್ಯಕ್ತ ಪಡಿಸಿದೆ. ಸರ್ಕಾರ ಅದನ್ನು ಪರಿಗಣಿಸಿಲ್ಲ, ಖಾಸಗಿ ಸಂಸ್ಥೆಯ ಮೇಲೆ ಸರ್ಕಾರಕ್ಕೆ ಅದೇನು ವಿಶೇಷ ಪ್ರೀತಿ ಎಂದು ಪ್ರಶ್ನಿಸಿದರು.
ಕೆ.ಎಲ್.ರಿಸೋರ್ಸ್‍ಸ್ ಸಂಸ್ಥೆ ಬಳಿ ಯಾವ ದಾಖಲೆಗಳು ಇರಲಿಲ್ಲ, ಮೂರು ವರ್ಷದಿಂದ ಜಿಎಸ್‍ಟಿಯನ್ನೂ ಆ ಸಂಸ್ಥೆ ಪಾವತಿಸಿಲ್ಲ. ಒಂದು ಟನ್ ಕಾಕಂಬಿಗೆ ಮಾರುಕಟ್ಟೆಯಲ್ಲಿ 10 ಸಾವಿರ ರೂಪಾಯಿ ಬೆಲೆ ಇದೆ. 2 ಲಕ್ಷ ಮೆಟ್ರಿಕ್ ಟನ್‍ಗೆ ಒಟ್ಟು 200 ಕೋಟಿ ರೂಪಾಯಿಗಳಾಗಲಿದೆ. ರಾಜ್ಯದಿಂದ ಕಾಕಂಬಿ ಪಡೆದು ಗೋವಾದಿಂದ ರಫ್ತು ಮಾಡುತ್ತೇವೆ ಎಂದು ಖಾಸಗಿ ಸಂಸ್ಥೆ ಹೇಳಿಕೊಂಡಿದೆ.
ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ..? : ಡಿಕೆಶಿ
ಇದನ್ನು ರಾಜ್ಯದ ಕಾರಾವರ ಬಂದರಿನಿಂದ ರಫ್ತು ಮಾಡಿದ್ದರೆ ಬೋಕ್ಕಸಕ್ಕೆ ಕನಿಷ್ಟ 10 ಕೋಟಿ ರೂಪಾಯಿ ತೆರಿಗೆ ಬರುತ್ತಿತ್ತು. ರಫ್ತು ಮಾಡದೇ ಕಾಕಂಬಿಯನ್ನು ರಾಜ್ಯದಲ್ಲೇ ಆಲ್ಕೋಹಾಲ್ ಉತ್ಪಾದನೆಗೆ ಬಳಕೆ ಮಾಡಿದ್ದರೆ 60 ಕೋಟಿ ರೂಪಾಯಿ ನೇರ ತೆರಿಗೆ, ಮದ್ಯ ತಯಾರಿಕೆ ಮಾಡಿ ಮಾರಾಟ ಮಾಡಿದ್ದರೆ 200 ಕೋಟಿ ರೂಪಾಯಿಗೂ ಅಕ ತೆರಿಗೆ ಸಂಗ್ರಹವಾಗುವ ಸಾಧ್ಯವಿತ್ತು ಎಂದು ವಿವರಿಸಿದ್ದಾರೆ.
ಈ ಹಗರಣ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಚಾರ ಮಾಡಿದ್ದಾರೆ ಎಂದು ವಿಧಾನಮಂಡಲ ಅವೇಶನದಲ್ಲಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ನಮ್ಮ ಪಕ್ಷದ್ದು ಸೇರಿ ಎಲ್ಲಾ ಹಗಣಗಳ ತನಿಖೆಗೆ ತ್ವರಿತ ವಿಲೇವಾರಿ ನ್ಯಾಯಾಲಯ ರಚನೆ ಮಾಡಿ, ಹೈಕೋರ್ಟ್‍ನ ಹಾಲಿ ನ್ಯಾಯಾೀಶರಿಂದ ತನಿಖೆ ನಡೆಸಿ.
3ನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಚಾಲನೆ
ತಾವು ಭ್ರಷ್ಟರಲ್ಲ ಎಂದು ಸಾಬೀತು ಪಡಿಸಿ, ಅಲ್ಲಿಯವರೆಗೂ ಬೇಕಿದ್ದರೆ ವಿಧಾನಸಭೆ ಚುನಾವಣೆಯನ್ನೂ ಮುಂದಕ್ಕೆ ಹಾಕಿ , ನಾವು ಬೇಡ ಎನ್ನಲ್ಲ ಎಂದು ಹೇಳಿದರು. ಕಾಂಗ್ರೆಸ್ ಎಲ್ಲಾ ರೀತಿಯ ಆರೋಪಗಳ ತನಿಖೆಗೆ ಒಳಗಾಗಲು ಸಿದ್ಧವಿದೆ. ಬಿಜೆಪಿ ಸಿದ್ದವಿದೆಯೇ ಎಂದು ಅವರು ಸವಾಲು ಹಾಕಿದರು.
Congress, Audio, Release, BJP Corruption