ಇಂಧೋರ್ ತಲುಪಿದ ಕಾಂಗ್ರೆಸ್ ‘ಐಕ್ಯತಾ ಯಾತ್ರೆ’

Social Share

ಇಂಧೋರ್, ನ.27- ಭಾರತ ಐಕ್ಯತಾ ಯಾತ್ರೆ ಮಧ್ಯಪ್ರದೇಶದ ರಾಜಧಾನಿ ಇಂಧೋರ್‍ಗೆ ಕಾಲಿಟ್ಟಿದೆ. ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಐದು ದಿನಗಳ ಹಿಂದೆ ಪ್ರವೇಶಿಸಿದ ಯಾತ್ರೆ ಇಂದು ರಾಜಧಾನಿಗೆ ಆಗಮಿಸಿದೆ. ಇಂದೂ ಕೂಡ ವಿವಿಧ ವರ್ಗಗಳ ಜನ ಯಾತ್ರೆಯಲ್ಲಿ ಭಾಗವಹಿಸಿದ್ದರು.

ವಿಕಲಚೇತನರೊಬ್ಬರ ತ್ರಿಚಕ್ರ ವಾಹನವನ್ನು ಖುದ್ದು ರಾಹುಲ್‍ಗಾಂಧಿ ಸ್ವಲ್ಪ ದೂರ ತಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ನಿನ್ನೆ ರಾತ್ರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹುಟ್ಟೂರಿನಲ್ಲಿ ತಂಗಿದ ಬಳಿಕ ಯಾತ್ರೆ ಪುನರಾರಂಭವಾಗಿದೆ.

ಅರೆನಗರ ಪ್ರದೇಶದಿಂದ ಮುಂದುವರೆದ ಯಾತ್ರೆಗೆ ರಾಹುಬಳಿ ರೆಡ್‍ಕಾರ್ಫೆಟ್ ಸ್ವಾಗತ ಕೋರಲಾಯಿತು. ಇಂಧೋರ್‍ನ 1400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಪ್ಲಾಸ್ಟಿಕ್ ಮುಕ್ತವಾಗಿರಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಇತ್ತೀಚೆಗೆ ರಾಹುಲ್‍ಗಾಂಧಿ ಅವರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ಇಂಧೋರ್‍ನಲ್ಲಿ ಯಾತ್ರೆ ನಡೆಯುವ ವೇಳೆ ಬಾಂಬ್ ಸ್ಪೋಟಿಸುವ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

BIG NEWS : ಯಾವುದೇ ದಾಖಲೆಗಳನ್ನು ಪಡೆಯಲು ಜನನ ಪತ್ರ ಕಡ್ಡಾಯ..!

ಬೆದರಿಕೆ ಪತ್ರದಲ್ಲಿ 1984ರ ಸಿಕ್ಕರ ಮೇಲಿನ ದಾಳಿಯನ್ನು ಉಲ್ಲೇಖಿಸಿತ್ತು. ಈ ಬಗ್ಗೆ ಕೆಲ ವ್ಯಕ್ತಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

Congress, Bharat Jodo Yatra, reaches, Indore, Madhya Pradesh,

Articles You Might Like

Share This Article