ನವದೆಹಲಿ,ಜ.27- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆ ಕೊನೆಗೊಳ್ಳಲು ಮೂರು ದಿನ ಬಾಕಿ ಇರುವಂತೆ ಇಂದು ಕಾಶ್ಮೀರ ಪ್ರವೇಶಿಸಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಂಬ ಧ್ಯೇಯದೊಂದಿಗೆ 3500 ಕಿಲೋ ಮಿಟರ್ ದೂರದ ಭಾರತ್ ಜೋಡೋ ಪಾದಯಾತ್ರೆ ಸೆಪ್ಟಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿತ್ತು. ಕಳೆದ ಗುರುವಾರ ಜಮ್ಮು ಪ್ರವೇಶಿಸಿದ ಯಾತ್ರೆ ಇಂದು ಕಾಶ್ಮೀರದ ಭನಿಹಾಲ್‍ನಿಂದ ವೆಸ್ಸು ಕೈಗಾರಿಕಾ ಪ್ರದೇಶದವರೆಗೂ ಸಂಚರಿಸಿದೆ. ಜನವರಿ 30ರಂದು ಕಾಶ್ಮೀರದಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ.
ರಾಹುಲ್‍ಗಾಂಧಿ ಈವರೆಗೂ ದೇಶಾದ್ಯಂತ 14 ರಾಜ್ಯಗಳ 72 ಜಿಲ್ಲೆಗಳಲ್ಲಿ ಸಂಚರಿಸಿದ್ದಾರೆ. ಒಟ್ಟು 132 ದಿನಗಳ ಕಾಲ ಯಾತ್ರೆ ನಡೆದಿದೆ. ಕೆಲವೊಮ್ಮೆ ವಿಶ್ರಾಂತಿ ಪಡೆದರೂ ಗುರಿಯಿಂದ ವಿಚಲಿತರಾಗದೆ ರಾಹುಲ್‍ಗಾಂಧಿ ದಿಟ್ಟ ಹೆಜ್ಜೆ ಹಾಕಿದ್ದಾರೆ.
ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಪಂಜಾಬ್, ಕಾಶ್ಮೀರದಲ್ಲಿ ವ್ಯಾಪಕ ಚಳಿ ಹೊರತಾಗಿಯೂ ರಾಹುಲ್‍ಗಾಂಧಿ ಬಿಳಿ ಟಿ-ಶರ್ಟ್ ಧರಿಸಿ ದಾರಿಯುದ್ಧಕ್ಕೂ ಹೆಜ್ಜೆ ಹಾಕಿದ್ದಾರೆ. ಯಾತ್ರೆಯಲ್ಲಿ ಭಾಗವಹಿಸಿದ್ದ ಹಲವರು ಬೆಚ್ಚನೆಯ ಉಡುಪುಗಳನ್ನು ಧರಿಸಿಯೂ ನಿರಂತರವಾಗಿ ನಡೆಯಲು ಸಾಧ್ಯವಾಗದೆ ಹಿಂದೇಟು ಹಾಕಿದ್ದರು. ಆದರೆ ಅಚ್ಚರಿ ಎಂಬಂತೆ ರಾಹುಲ್‍ಗಾಂಧಿ ಸಾದು ಉಡುಪುಗಳಲ್ಲಿಯೇ ಪಾದಯಾತ್ರೆ ಮುನ್ನೆಡೆದಿದ್ದರು.
ಮುಂದುವರೆದ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶನ
ಕೇರಳದಲ್ಲಿ ಮೈನಡುಗುವ ಚಳಿಯಲ್ಲಿ ಪಾದಯಾತ್ರೆ ನಡೆಸುವಾಗ ಕೆಲವು ಹೆಣ್ಣು ಮಕ್ಕಳು ಬೆಚ್ಚನೆಯ ಉಡುಪು ಇಲ್ಲದೆ ತಮ್ಮನ್ನು ಭೇಟಿ ಮಾಡಿದ್ದನ್ನು ಕಂಡ ರಾಹುಲ್‍ಗಾಂಧಿ ಕನಲಿ ಹೋಗಿದ್ದರು. ಲಕ್ಷಾಂತರ ಮಂದಿ ಈ ರೀತಿ ಬೆಚ್ಚನೆಯ ಉಡುಪು ಮತ್ತು ವಾತಾವರಣ ಇಲ್ಲದೆ ಜೀವನ ನಡೆಸುತ್ತಿರುವಾಗ ತಾವು ಮಾತ್ರ ಬೆಚ್ಚನೆಯ ಉಡುಪು ಧರಿಸುವುದು ಹೇಗೆ ಎಂಬ ಚಿಂತೆ ರಾಹುಲ್‍ರನ್ನು ಕಾಡಿತ್ತು.
ಅಂದಿನಿಂದಲೂ ಬಿಳಿಯ ಟಿ-ಶರ್ಟ್‍ನಲ್ಲೇ ಪಾದಯಾತ್ರೆ ನಡೆಸುತ್ತಿದ್ದಾರೆ. ಇತ್ತಿಚೆಗೆ ಜಮ್ಮುವಿನಲ್ಲಿ ಹಿಮದ ತುಂತುರು ವ್ಯಾಪಕವಾಗಿದ್ದರಿಂದ ಕೆಲ ಕಾಲ ತೆಳುವಾದ ಜರ್ಕಿನ್ ಧರಿಸಿದ್ದರು. ಬಳಿಕ ಅದನ್ನು ತೆಗೆದು ಯಾತ್ರೆ ಮುನ್ನೆಡೆಸಿದ್ದರು. ಆರಂಭದಿಂದಲೂ ದಾಡಿ ಬೋಳಿಸದೆ ಸಂತನಂತೆ ಉದ್ದನೆಯ ದಾಡಿ ಬೆಳೆಸಿಕೊಂಡಿರುವ ರಾಹುಲ್ ಪಕ್ಷದ ಹಲವು ನಾಯಕರ ಒತ್ತಡದ ನಡುವೆಯೂ ಅದನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿನ ನಿರುದ್ಯೋಗ, ಬೆಲೆ ಏರಿಕೆ, ಕೋಮುದ್ವೇಷ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಹುಲ್‍ಗಾಂ ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ಆರಂಭವಾದ ನಂತರ ಕೇಂದ್ರ ಸರ್ಕಾರ 75 ಸಾವಿರ ಮಂದಿಗೆ ಸರ್ಕಾರಿ ನೌಕರಿ ನೇಮಕಾತಿ ಪತ್ರ ನೀಡಿದ್ದು ಗಮನ ಸೆಳೆದಿತ್ತು. ಆರಂಭದಲ್ಲಿ ಯಾತ್ರೆಯ ವಿರುದ್ಧ ಅಪಪ್ರಚಾರ ಮಾಡಲು ಮುಂದಾಗಿದ್ದ ಬಿಜೆಪಿ ಹಾಗೂ ಅದರ ಅಂಗ ಪಕ್ಷಗಳು ಕ್ರಮೇಣ ತಟಸ್ಥವಾಗಿದ್ದವು. ಯಾತ್ರೆಗೆ ನಿರೀಕ್ಷಿತ ಪ್ರಚಾರವೂ ಸಿಕ್ಕಿಲ್ಲ ಮತ್ತು ವಿರೋಧಗಳು ಕೇಳಿ ಬಂದಿಲ್ಲ.
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತೆಯ ಸವಾಲನ್ನು ಮೀರಿ ರಾಹುಲ್ ಹೆಜ್ಜೆ ಹಾಕಿದ್ದಾರೆ. ಸಿಆರ್‍ಪಿಎಫ್ ಹಲವು ಹಂತಗಳಲ್ಲಿ ಬಂದೋಬಸ್ತ್ ಕಲ್ಪಿಸಿದೆ. ಯಾತ್ರೆಯುದ್ಧಕ್ಕೂ ರಾಹುಲ್‍ಗಾಂ ಕೃಷಿಕರು, ಕಾರ್ಮಿಕರು, ಮಹಿಳೆಯರು, ಮಾಜಿ ಸೈನಿಕರು, ಯುವಕರು, ಉದ್ಯಮಿಗಳು ಸೇರಿದಂತೆ ಹಲವು ವರ್ಗಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
Congress, Bharat Jodo Yatra,resumes, Kashmir,