ಭಾರತ ಥೋಡೋ ಮಾಡಿದ್ದೇ ಕಾಂಗ್ರೆಸ್‍ನವರು : ಸಿಎಂ ಬೊಮ್ಮಾಯಿ

Social Share

ಹಾವೇರಿ,ಸೆ.29- ಭಾರತ್ ಥೋಡೊ ಮಾಡಿದ್ದೇ ಕಾಂಗ್ರೆಸ್ ಪಕ್ಷದವರು. ಈಗ ಭಾರತ್ ಜೋಡೊ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಭಾರತ್ ಜೋಡೊ ಮಾಡುತ್ತಿರುವವರು ಯಾರು, ಭಾರತ್ ಥೋಡೊ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತು.
ಇಂಥವರು ಈಗ ದೇಶ ಜೋಡಿಸುತ್ತೇವೆ ಎಂದು ಹೊರಟಿರುವುದು ಹಾಸ್ಯಾಸ್ಪದ ಎಂದು ಕುಹುಕುವಾಡಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್‍ಗಳನ್ನು ಹರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಎಲ್ಲ ರಾಜಕೀಯ ಪಕ್ಷಗಳು ಅನುಮತಿ ಪಡೆದು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯವರ ಒಂದೇ ಒಂದು ಫ್ಲೆಕ್ಸ್ ಬೋರ್ಡ್‍ಗಳನ್ನು ಹಾಕಿಕೊಳ್ಳಲು ಬಿಡುವುದಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ ಅನುಮತಿ ಪಡೆದು ಹಾಕಿಕೊಳ್ಳುವ ಫ್ಲೆಕ್ಸ್‍ಗಳನ್ನು ತಡೆಯಲು ಇವರ್ಯಾರು ಎಂದು ಪ್ರಶ್ನಿಸಿದರು.

ಪಿಎಫ್‍ಐ ನಿಷೇಧ ಮಾಡಿರುವುದು ವಿಳಂಬವಾಗಿದೆ. ಇದು ಚುನಾವಣೆ ಗಿಮಿಕ್ ಎಂಬ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಕ್ಕೆ, ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಮತ್ತೆ ಪ್ರಶ್ನಿಸಿದರು.

Articles You Might Like

Share This Article