ಬೆಂಗಳೂರು,ಜ.25- ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್. ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗಳಲ್ಲಿ ಹೇಗೆ ಅಕ್ರಮ ನಡೆಸಬೇಕು ಎಂಬುದನ್ನು ರಾಜ್ಯ ಮತ್ತು ದೇಶಕ್ಕೆ ತೋರಿಸಿಕೊಟ್ಟವರು ಕಾಂಗ್ರೆಸ್ ನಾಯಕರು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಂಥವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿರುವುದೇ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ತಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ದೂರು ನೀಡುತ್ತಿರುವುದರ ಕುರಿತು ಸಿಡಿಮಿಡಿಗೊಂಡ ಬೊಮ್ಮಾಯಿ, ಈ ರೀತಿ ನಾವು ಕೂಡ ನೂರಾರು ದೂರುಗಳನ್ನು ಕೊಡಬಹುದು. ದೇಶದಲ್ಲಿ ಕಾನೂನುಗಳಿವೆ. ತನಿಖಾ ಸಂಸ್ಥೆಗಳಿವೆ. ಇವರು ಹೇಳಿದ್ದೇ ಅಂತಿಮ ಎಂದು ಪ್ರಶ್ನೆ ಮಾಡಿದರು.
ವಿವಿಗಳಲ್ಲಿ ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನ, ಹೆಚ್ಚಿದ ಸಂಘರ್ಷ
ಮೊದಲು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂಬುದನ್ನು ಮರೆಯಬೇಡಿ. ಕುಣಿಗಲ್ನಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ಗಳನ್ನು ಸಾಕ್ಷಿ ಸಮೇತ ವಾಣಿಜ್ಯ ತೆರಿಗೆ ಧಿಅಕಾರಿಗಳು ಹಿಡಿದು ನಾಲ್ವರಿಗೆ ದಂಡ ಹಾಕಿದ್ದಾರೆ. ಕುಕ್ಕರ್ ಹಂಚುತ್ತಿದ್ದ ಫೋಟೋಗಳು ಸಹ ಸಿಕ್ಕಿಬಿದ್ದಿವೆ. ಹಾಗಾದರೆ ಇದು ಕಾಂಗ್ರೆಸ್ ಸಂಸ್ಕøತಿಯೇ ಎಂದು ತರಾಟೆಗೆ ತೆಗೆದುಕೊಂಡರು.
ಚುನಾವಣೆಯಲ್ಲಿ ಸೋಲುವುದು ಗೊತ್ತಾಗಿಯೇ ಕಾಂಗ್ರೆಸ್ ನಾಯಕರು ಜನತೆಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದರಲ್ಲಿ ನೀವು ಯಶಸ್ವಿಯಾಗುವುದಿಲ್ಲ. ನೀವು ನಮ್ಮ ವಿರುದ್ಧ ನೂರು ದೂರುಗಳನ್ನು ಕೊಡಬಹುದು. ಕುಣಿಗಲ್ನಲ್ಲಿ ನಿಮ್ಮ ಪಕ್ಷದವರೇ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದೀರಿ. ಇದಕ್ಕಿಂತ ನಿರ್ದಶನ ಇನ್ನೇನು ಬೇಕೆಂದು ಹರಿಹಾಯ್ದರು.
ಕಾಂಗ್ರೆಸ್ ತೀರ ಕೆಳಮಟ್ಟದ ರಾಜಕಾರಣ ಮಾಡಲು ನಿಂತಿದೆ. ನಾವು 2000 ಮಹಿಳೆಯರಿಗೆ ಮಸಾಶನ, ಉಚಿತ ವಿದ್ಯುತ್ ಪೂರೈಕೆ ಕೊಡುವುದಾಗಿ ಮುಕ್ತವಾಗಿಯೇ ಹೇಳಿದ್ದಾರೆ. ಈ ಮಾನದಂಡವನ್ನು ಪರಿಗಣಿಸುವುದಾದರೆ ಇದು ಕೂಡ ಮತದಾರರಿಗೆ ಆಮಿಷವೊಡ್ಡಿದಂತೆ ಆಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರು ಕೂಡ ಅಪರಾಧಿಗಳೇ ಎಂದು ತಿರುಗೇಟು ನೀಡಿದರು.
ಬಿಜೆಪಿಯಲ್ಲಿ ರಾಜಾಹುಲಿ ಬಿಎಸ್ವೈಗೆ ಇದೀಗ ಭಾರೀ ಬೇಡಿಕೆ
ತಾವು ಸೋಲುತ್ತೇವೆ ಎಂಬುದು ಗ್ಯಾರಂಟಿ ಆಗಿದೆ. ಹತಾಶೆಯಿಂದ ಈ ರೀತಿ ದೂರು ಕೊಡುವುದು, ಇನ್ನೊಂದು ಮತ್ತೊಂದು ಎಂದು ಎಲ್ಲಾ ಮಾಡುತ್ತಿದ್ದಾರೆ. ಅವರು ಕಂಪ್ಲೇಂಟ್ ಕೊಟ್ಟರೆ ನಾವು 100 ಕಂಪ್ಲೇಂಟ್ ಕೊಡಬಹುದು ಎಂದರು.
Congress, birth, corruption, CM Bommai,