ಬೆಂಗಳೂರು,ಜ.18- ಕಾಂಗ್ರೆಸ್ ಕೆಲವೊಂದು ಜನಪ್ರಿಯ ಪ್ರಣಾಳಿಕೆ ಘೋಷಣೆಗಳನ್ನು ಮಾಡುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಕೌಂಟರ್ ಕೊಡಲು ಬಿಜೆಪಿಯೂ ಸಿದ್ದತೆ ನಡೆಸುತ್ತಿದೆ.
2023 ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೆಲವೊಂದು ಜನಪ್ರಿಯವಾದ ಘೋಷಣೆಗಳನ್ನು ಮಾಡುತ್ತಿದೆ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಒಂದು ಕಡೆಯಾದರೆ ಪ್ರತಿ ಕುಟುಂಬ ಓರ್ವ ಮಹಿಳೆಗೆ ತಿಂಗಳಿಗೆ 2000 ರೂ.ಗಳನ್ನು ಉಚಿತ ನೀಡುವ ಮತ್ತೊಂದು ಘೋಷಣೆ ಮಾಡಿದೆ.
ಸಾಮಾನ್ಯವಾಗಿ ಚುನಾವಣಾ ಪ್ರಣಾಳಿಕೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಒಟ್ಟಿಗೆ ಪ್ರಕಟ ಮಾಡಲಾಗುತ್ತದೆ. ಆದರೆ ಹಂತ ಹಂತವಾಗಿ ಘೋಷಣೆ ಮಾಡುವ ಮೂಲಕ ಜನರ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟ ಮಾಡಲಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷ ಜೈಲು
ಈ ನಿಟ್ಟಿನಲ್ಲಿ ಇದಕ್ಕೆ ಕೌಂಟರ್ ನೀಡುವುದು ಬಿಜೆಪಿಗೂ ಅನಿವಾರ್ಯವಾಗಿದೆ. ಫೆಬ್ರವರಿ ಮೂರನೇ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಚುನಾವಣಾ ದೃಷ್ಟಿಯಿಂದ ಇದು ಮಹತ್ವ ಪಡೆದುಕೊಂಡಿದೆ.
ನಿರೀಕ್ಷೆಗೂ ಮೀರಿ ಆದಾಯ ಬರುತ್ತಿದೆ. ಅಬಕಾರಿ, ವಾಣಿಜ್ಯ, ಸ್ಟಾಂಪ್ ಡ್ಯೂಟಿ ಸೇರಿದಂತೆ ಇತರೆ ತೆರಿಗೆ ಸಂಗ್ರಹ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಚುನಾವಣಾ ದೃಷ್ಟಿಯಿಂದ ಕೆಲವೊಂದು ಮಹತ್ವ ಘೋಷಣೆಗಳನ್ನು ಆಯವ್ಯಯದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಈಗಾಗಲೇ ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ದಿಗೆ ಗೃಹಿಣಿ ಶಕ್ತಿ ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ. ಶೀಘ್ರದಲ್ಲೇ ಅನುಷ್ಠಾನಕ್ಕೆ ತರುವುದಾಗಿಯೂ ತಿಳಿಸಿದೆ.
ಮನೆಯ ವೆಚ್ಚ ನಿರ್ವಹಣೆಗಾಗಿ ಮನೆಯ ಮುಖ್ಯಸ್ಥೆಗೆ ಸಹಾಯಧನ ನೀಡುವ ಯೋಜನೆ ಇದಾಗಿದೆ. ನಾ ನಾಯಕಿ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಬಂದ ದಿನವೇ ಈ ಯೋಜನೆಯನ್ನು ಸರ್ಕಾರ ಪ್ರಕಟ ಮಾಡುವ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ರಾಜ್ಯದಲ್ಲಿ 25 ಟೆಕ್ಸ್ಟೈಲ್ಸ್ ಪಾರ್ಕ್ ಮಾಡುವ ಘೋಷಣೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡುವ ಪ್ಲಾನ್ ಸರ್ಕಾರಕ್ಕಿದೆ. ದಾವಣಗೆರೆ ಸೇರಿದಂತೆ 25 ಟೆಕ್ಸ್ಟೈಲ್ಸ್ ಪಾರ್ಕ್ ಮಾಡುವ ಕುರಿತಂತೆ ಬಜೆಟ್ನಲ್ಲಿ ಸೇರಿಸಲಾಗುವುದು ಎಂದು ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಟೆಕ್ಸ್ಟೈಲ್ಸ್ ಹೆಚ್ಚು ಇದ್ದರೂ ಚಟುವಟಿಕೆ ಕಡಿಮೆ ಆಗಿದೆ. ಕಾಟನ್ ಹೆಚ್ಚಿಸಬೇಕು. ಕರ್ನಾಟಕದ ಗಾರ್ಮೆಂಟ್ಸ್ಗಳಿಂದ ನಿಂದ ಹೆಚ್ಚಾಗಿ ರಫ್ತಾಗುವುದು. ಈ ಹಿರಿಮೆಯನ್ನು ಉಳಿಸಿಕೊಳ್ಳಲು, ಮೂಲಭೂತ ಸೌಕರ್ಯ ಸೇರಿದಂತೆ ಟೆಕ್ಸ್ಟೈಲ್ಸ್ ಉದ್ಯಮ ಉತ್ತೇಜನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
RSS-BJPಯಿಂದ ಭಯದ ದೇಶದಲ್ಲಿ ವಾತಾವರಣ ಸೃಷ್ಟಿ : ರಾಹುಲ್
ಸದ್ಯಕ್ಕೆ ಏನೆಲ್ಲಾ ಜನಪ್ರಿಯ ಘೋಷಣೆಗಳು ಇವೆ ಎಂಬ ಸುಳಿವನ್ನು ಬೊಮ್ಮಾಯಿ ಬಿಟ್ಟು ಕೊಟ್ಟಿಲ್ಲ. ಹಾಗಿದ್ದರೂ ಕೊನೆಯ ಬಜೆಟ್ನಲ್ಲಿ ಬೆಟ್ಟದಷ್ಟು ನಿರೀಕ್ಷೆಗಳು ಇವೆ. ಇದನ್ನು ಬೊಮ್ಮಾಯಿ ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುವುದು ಸದ್ಯದ ಕುತೂಹಲ.
Congress, BJP, Manifesto, 2023,assembly elections,