ಬೆಂಗಳೂರು ಮಾರ್ಚ್ 2, 2023: ಸುಮಾರು 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದ ಡಾ. ಅಬ್ದುಲ್ ರೆಹಮಾನ್ ಅವರನ್ನು ಇಂದು ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (MEP)ಗೆ ರಾಜ್ಯದ ನೂತನ ಅಧ್ಯಕ್ಷರಾಗಿ ಪಕ್ಷ ಪುಸ್ ಕ್ಲಬ್ ನಲ್ಲಿ ನಲ್ಲಿ ಘೋಷಿಸಿತು.
ನೂತನ ಅಧ್ಯಕ್ಷರನ್ನು ಮತ್ತು ಪಕ್ಷಕ್ಕೆ ಸೇರ್ಪಡೆಗೊಂಡ ಸರಸ್ವತಿ ಅವರನ್ನು ಎಂಇಪಿಯ ಕಾರ್ಯಾಧ್ಯಕ್ಷರಾದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಫರೀದಾ ಬೇಗಂ ಸ್ವಾಗತಿಸಿದರು.
ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಕೇರಳದಲ್ಲಿ ರೈಲು ತಡೆದು ಪ್ರತಿಭಟನೆ
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ರೆಹಮಾನ್,’ವೈಬ್ರೆಂಟ್ ಕರ್ನಾಟಕ’ ಧ್ಯೇಯದೊಂದಿಗೆ ನಮ್ಮ ಪಕ್ಷ ರಾಜ್ಯದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಪಕ್ಷದ ಘೋಷಣೆಯ ಭಾಗವೂ ಆಗಿರುತ್ತದೆ ಮುಂಬರುವ ಚುನಾವಣೆಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಎಂಇಪಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದು, ನಂತರ ಕರ್ನಾಟಕ ರಾಜ್ಯ ವಿಶಾಲ ದೃಷ್ಟಿಕೋನದಲ್ಲಿ ಪಕ್ಷವು 150 ಸ್ಥಾನಗಳಲ್ಲಿ ಸ್ಪರ್ಧಿಸಲು ಮತ್ತು ಗೆಲ್ಲಬಹುದಾದ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ದಲಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಗುರುತಿಸುವ ದೃಷ್ಟಿಯಿಂದ ಗರಿಷ್ಠ ಸ್ಥಾನಗಳನ್ನು ಪಡೆಯುವ ಗುರಿಯೊಂದಿಗೆ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ 51% ಸೀಟು ಹಂಚಿಕೆಯ ಪ್ರಾತಿನಿಧ್ಯವಿರುತ್ತದೆ ಎಂದರು
ಪಕ್ಷವು ಮೂರು ವಿಭಿನ್ನ ಹಂತಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಮತ್ತು ಪಕ್ಷದ ವರಿಷ್ಠೆ ಡಾ ನೌಹೆರಾ ಶೇಕ್ ವರ್ಚುವಲ್ ರಿಯಾಲಿಟಿ ಎಂಬ ಪ್ರಾಯೋಗಿಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದರು
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಮೊಹಮ್ಮದ್ ಇಫ್ತೆಕಾರ್ ಷರೀಫ್, ಕೋರ್ ಕಮಿಟಿ ಸದಸ್ಯರಾದ ಮೊಹಮ್ಮದ್ ಜಾವೇದ್ ಇಬ್ರಾಹಿಂ, ಆರೀಫ್ ಎಂಪಿ, ಮಹಮ್ಮದ್ ವಸೀಮ್, ಗುಲ್ರೇಜ್ ಪಾಷಾ ಮತ್ತು ರಾಜ್ಯ ಸದಸ್ಯರಾದ ಇಮ್ರಾನ್ ಮತ್ತು ಎಂಎಸ್ ನೂರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.
Congress, BJP, member, joins, MEP,