ಅಹಮದಾಬಾದ್,ಡಿ.5-ಗುಜರಾತ್‍ನಲ್ಲಿ ತಮ್ಮ ಶಾಸಕರೊಬ್ಬರ ಮೇಲೆ ಬಿಜೆಪಿ ನೇತೃತ್ವದ ಗುಂಪೊಂದು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಆದರೆ, ಈ ಆರೋಪಕ್ಕೆ ಬಿಜೆಪಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
ನಮ್ಮ ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಹುಲ್‍ಗಾಂಧಿ ನಿನ್ನೆ ಮಧ್ಯರಾತ್ರಿ ಟ್ವಿಟ್ ಮಾಡಿದ್ದರು ಮಾತ್ರವಲ್ಲ ಬಿಜೆಪಿ ನೇತೃತ್ವದ ಗುಂಪೊಂದು ಕತ್ತಿಗಳಿಂದ ಶಾಸಕರ ಮೇಲೆ ಹಲ್ಲೆ ನಡೆಸಿ ಇಂದು ಬೆಳಿಗ್ಗೆ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬನಸ್ಕಾಂತದ ದಾಂಟಾದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಧಿಸಿರುವ ಕಾಂತಿ ಖರಾಡಿ ಅವರು ನನ್ನ ಮೇಲೆ ಬಿಜೆಪಿ ಅಭ್ಯರ್ಥಿ ಲಾಡು ಪರ್ಘಿ ಕಡೆಯವರೆ ನನ್ನನ್ನು ಅಪಹರಿಸಿ ಹಲ್ಲೆ ನಡೆಸಲು ಪ್ರೇರಣೆ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ G-20 ಶೃಂಗದ ಪ್ರತಿನಿಧಿಗಳ ಸಭೆ
ನಿನ್ನೆ ಮಧ್ಯರಾತ್ರಿ ನನ್ನ ಮೇಲೆ ಮಾರಣಾಂತಿಕ ದಾಳಿ ನಡೆಸಲಾಯಿತು. ದಾಳಿಕೋರರಿಂದ ತಪ್ಪಿಸಿಕೊಂಡು ಕೆಲಕಾಲ ಕಾಡಿನಲ್ಲಿ ಕಳೆದು ನಂತರ ಆಸ್ಪತ್ರೆಗೆ ಹೋಗಿದ್ದೆ ಎಂದು ಅವರು ವಿವರಣೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮತ್ತು ಅವರ ಕಡೆಯವರಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನನ್ನ ಮೇಲೆ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಬಾಂಗ್ಲಾ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್
ಗುಜರಾತ್ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಕೂಡ ಟ್ವೀಟ್ ಮಾಡಿದ್ದು, ಬಿಜೆಪಿ ಸೋಲಿನ ಭೀತಿಯಿಂದ ಖಾರಾಡಿ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
#Congress, #Candidate, #Attacked, #Gujarat,