ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ರಿಯಾಯ್ತಿ

Social Share

ಬೆಂಗಳೂರು,ಮಾ.9- ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಅಂತಿಮ ಸುತ್ತಿನ ಕಸರತ್ತು ಬಹುತೇಕ ಮುಕ್ತಾಯ ಹಂತದಲ್ಲಿದ್ದು ಇಂದು 34 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಕೊನೆಗೊಳ್ಳುವ ಸಾಧ್ಯತೆಗಳಿವೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮೈಸೂರು-ಬೆಂಗಳೂರು ಎಕ್ಸಪ್ರೆಸ್ ಹೆದ್ಧಾರಿ ಪರಿಶೀಲನೆಯ ಕಾರ್ಯಕ್ರಮವನ್ನು ರದ್ದು ಮಾಡಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಚುನಾವಣೆ ಟಿಕೆಟ್ ಪರಿಶೀಲನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ,

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ದೇವೇಗೌಡರು ಅಡಿಗಲ್ಲಿಟ್ಟ ಕಾಮಗಾರಿಗೆ ಮರು ನಾಮಕರಣ : ರೇವಣ್ಣ ಆಕ್ಷೇಪ

ಈಗಾಗಲೇ 190 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಹಾಲಿ ಶಾಸಕರ ಪೈಕಿ ಬಹುತೇಕರಿಗೆ ಟಿಕೆಟ್ ಖಾತ್ರಿಯಾಗಿದೆ. ವಿಧಾನ ಪರಿಷತ್‍ನ ಮಾಜಿ ಸದಸ್ಯರಾದ ಎಸ್.ಆರ್.ಪಾಟೀಲ್, ಎಂ.ನಾರಾಯಣಸ್ವಾಮಿ, ಬೇಮೆಲ್ ಕಾಂತರಾಜು, ಶ್ರೀಕಾಂತ್ ಘೋಟ್ನೆಕರ್, ರಘು ಆಚಾರ್ ಅವರಿಗೆ ಟಿಕೆಟ್ ಖಚಿತ ಪಡಿಸಲಾಗಿದೆ.

ಜೆಡಿಎಸ್‍ನಿಂದ ಕಾಂಗ್ರೆಸ್ ಸೇರಿರುವ ವೈ.ಎಸ್.ವಿದತ್ತ ಅವರಿಗೆ ಕಡೂರಿಗೆ. ಪಕ್ಷೇತರ ಶಾಸಕರಾದ ನಾಗೇಶ್ ಅವರಿಗೆ ಮಹದೇವಪುರ ಕ್ಷೇತ್ರಕ್ಕೆ ಟಿಕೆಟ್ ಖಾತ್ರಿಯಾಗಿದೆ. ಮುಂದೆ ಪಕ್ಷ ಸೇರುವ ಸಾಧ್ಯತೆ ಇರುವ ಜೆಡಿಎಸ್ ಶಾಸಕರ ಪೈಕಿ ಕೋಲಾರದ ಶ್ರೀನಿವಾಸಗೌಡ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು,

ಉಳಿದಂತೆ ಅರಸೀಕೆರೆಯ ಶಿವಲಿಂಗೇಗೌಡ, ಗುಬ್ಬಿಯ ಎಸ್.ಆರ್.ಶ್ರೀನಿವಾಸ್, ಅರಕಲಗೂಡು ಎ.ಟಿ.ರಾಮಸ್ವಾಮಿ ಅವರಿಗೆ ಟಿಕೆಟ್ ನೀಡಲು ಆಯ್ಕೆ ಸಮಿತಿ ಸಮ್ಮತಿಸಿದೆ. ಬಿಜೆಪಿ ಸರ್ಕಾರದ ಸಂಪುಟದಲ್ಲಿ ಸಚಿವರಾಗಿರುವ ಡಾ.ಕೆ.ಸಿ.ನಾರಾಯಣಗೌಡ, ವಿ.ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ಇನ್ನೂ ಕೆಲ ಶಾಸಕರ ಹೆಸರುಗಳು ಕಾಂಗ್ರೆಸ್‍ಗೆ ಬರುವವರ ಪಟ್ಟಿಯಲ್ಲಿದ್ದು, ಈ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿಲ್ಲ.

ವಿದ್ಯಾರ್ಥಿಗಳಿಗೆ ಕ್ರಿಕೆಟ್ ಸೂರ್ತಿಯಾಗಲಿ : ನರೇಂದ್ರ ಮೋದಿ

ದಕ್ಷಿಣ ಕನ್ನಡ ಭಾಗದಲ್ಲಿ ಪ್ರತಾಪ್‍ಚಂದ್ರ ಶೆಟ್ಟಿ ಅವರನ್ನು ಮತ್ತೆ ಚುನಾವಣಾ ರಾಜಕೀಯಕ್ಕೆ ಕರೆ ತಂದು ವಿಧಾನ ಸಭೆ ಚುನಾವಣೆಯಲ್ಲಿ ಕಣಕ್ಕಿಳಿಸುವ ಕಸರತ್ತು ನಡೆಯುತ್ತಿದ್ದು, ಅವರ ಮನವೋಲಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿನ ಬಹಳಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದು, ಕ್ಷೇತ್ರ ಮಟ್ಟದಲ್ಲಿ ಗೆಲ್ಲುವ ಸಾಧ್ಯತೆಗಳನ್ನು ಪರಿಗಣಿಸಿ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆಯ್ಕೆ ಸಮಿತಿ ಗೆಲ್ಲುವ ಸಾಧ್ಯತೆ ಇರುವ 150 ಕ್ಷೇತ್ರಗಳಿಗೆ ಒಂದೇ ಅಭ್ಯರ್ಥಿಯ ಹೆಸರನ್ನು ಸೂಚಿಸಿದೆ.

ಉಳಿದಂತೆ 50 ಕ್ಷೇತ್ರಗಳಲ್ಲಿ ಎರಡು ಹೆಸರುಗಳನ್ನು ಉಲ್ಲೇಖಿಸಲಾಗಿದೆ. 34 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಹೀಗಾಗಿ ಆ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪೈಕಿ ಇಂದು ಚರ್ಚೆ ನಡೆಸಲಾಗುತ್ತಿದೆ. ಇದರಲ್ಲಿ ಅನ್ಯಪಕ್ಷಗಳಿಂದ ವಲಸೆ ಬರುವವರ ನಾಯಕರ ಕ್ಷೇತ್ರಗಳು ಸೇರಿವೆ.

ಉದಯಪುರ ಘೋಷಣೆಯ ಪ್ರಕಾರ ಕುಟುಂಬಕ್ಕೊಂದೆ ಟಿಕೆಟ್ ಎಂಬ ಷರತ್ತನ್ನು ಈ ಬಾರಿ ಅಕ್ಷರಶಃ ಪಾಲಿಸದಿರಲು ನಿರ್ಧರಿಸಲಾಗಿದೆ. ಕಾಂಗ್ರೆಸ್‍ಗೆ ರಾಜ್ಯ ವಿಧಾನಸಭೆ ಚುನಾವಣೆ ಸವಾಲಾಗಿದ್ದು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದರೆ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳೇ ಇಲ್ಲವಾಗುತ್ತಾರೆ. ದಾವಣಗೆರೆ, ಬೆಳಗಾವಿ, ಕಲಬುರಗಿ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನೆಡೆಯಾಗಲಿದೆ. ಪಕ್ಷದ ಪ್ರಭಾವಿ ನಾಯಕರ ಕುಟುಂಬಗಳು ಅನ್ಯ ಪಕ್ಷಗಳತ್ತ ವಲಸೆ ಹೋಗುವ ಅತಂಕ ಎದುರಾಗಿದೆ. ಹಾಗಾಗಿ ಈ ಒಂದು ಬಾರಿ ನಿಯಮಕ್ಕೆ ವಿನಾಯಿತಿ ನೀಡುವಂತೆ ಹೈಕಮಾಂಡ್‍ಗೆ ಮನವಿ ಮಾಡಲು ನಿರ್ಧರಿಸಲಾಗಿದೆ.

ಪ್ರಭಾವಿಗಳ ಪಾಲಾಗುತ್ತಿದೆ ಬಿಡಿಎಗೆ ಸೇರಿದ 1ಸಾವಿರ ಕೋಟಿ ಬೆಲೆಯ ಅಸ್ತಿ : ಉಮಾಪತಿ ಶ್ರೀನಿವಾಸಗೌಡ

ಪಕ್ಷದಲ್ಲಿ ಹೆಚ್ಚು ಸಕ್ರಿಯವಾಗಿರುವವರಿಗೆ ಟಿಕೆಟ್ ನೀಡುವುದು, ನಿಷ್ಠವಂತರನ್ನು ಗುರುತಿಸುವುದು, ಅನ್ಯ ಪಕ್ಷಗಳಿಂದ ವಲಸೆ ಬರುವ ನಾಯಕರಿಗೆ ಅವಕಾಶ ನೀಡುವುದು ಸಮಿತಿಯ ಪ್ರಮುಖ ತೀರ್ಮಾನಗಳಾಗಿವೆ. ವಲಸಿಗರಿಗೆ ಮಣೆ ಹಾಕುತ್ತಿರುವುದರಿಂದ ಮೂಲ ಕಾಂಗ್ರೆಸ್ಸಿಗರಲ್ಲಿ ಉಂಟಾಗುವ ಅಸಮಧಾನವನ್ನು ತಣ್ಣಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಂಟಿಯಾಗಿ ಮಾತುಕತೆ ನಡೆಸಬೇಕು ಎಂದು ನಿರ್ಧರಿಸಲಾಗಿದೆ.

ರಾಜ್ಯ ಆಯ್ಕೆ ಸಮಿತಿ ಇಂದು ಮುಗಿಯಲಿದ್ದು, ಇಂದು ಸಂಜೆ ಅಥವಾ ನಾಳೆಯೊಳಗೆ ಪಟ್ಟಿಯನ್ನು ಹೈಕಮಾಂಡ್‍ಗೆ ರವಾನೆ ಮಾಡಲಾಗುತ್ತದೆ. ತಕ್ಷಣವೇ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ ಪರಿಶೀಲನೆ ನಡೆಸಲಿದ್ದು, ಬಳಿಕ ಮಾರ್ಚ್ ಎರಡನೇ ವಾರದಲ್ಲಿ 150 ಕ್ಷೇತ್ರ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

Congress, candidates, family, politics,

Articles You Might Like

Share This Article