AICC ಕಚೇರಿಯಲ್ಲಿ ಇನ್ನು ಕಾಣಿಸಿಕೊಳ್ಳದ ಖರ್ಗೆ ಭಾವಚಿತ್ರ

Social Share

ನವದೆಹಲಿ,ನ.22-ಎಐಸಿಸಿ ಅಧ್ಯಕ್ಷ ಗಾದಿಗೆ 24 ವರ್ಷಗಳ ನಂತರ ಗಾಂಧಿಯೇತರ ವ್ಯಕ್ತಿಯಾಗಿರುವ ಕರ್ನಾಟಕದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಂಡಿದ್ದಾರೆ. ಅವರು ಅಧಿಕಾರ ವಹಿಸಿಕೊಂಡು ತಿಂಗಳು ಕಳೆದರೂ ಎಐಸಿಸಿ ಕಚೇರಿಯಲ್ಲಿ ಅವರ ಭಾವಚಿತ್ರ ಹಾಕಲು ಸಾಧ್ಯವಾಗಿಲ್ಲ. ಇದನ್ನು ಗಮನಿಸಿದರೆ, ಗಾಂಧಿ ಕುಟುಂಬದ ಪ್ರಾಬಲ್ಯ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆಯಾಗಿದೆ.

ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಅವರುಗಳು ಎಐಸಿಸಿ ಅಧ್ಯಕ್ಷರಾಗಿದ್ದಾಗ ಎಲ್ಲ ಸರಿಯಾಗಿಯೇ ಇತ್ತು. ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಮತ್ತು ಸವಲತ್ತುಗಳು ಸಿಕ್ಕಿದ್ದವು. ಆದರೆ, ನಮ್ಮ ಖರ್ಗೆ ಸಾಹೇಬರಿಗೆ ಇನ್ನ ಅಂತಹ ಸೌಲಭ್ಯ ದೊರೆತಿಲ್ಲ.

ಹೋರ್ಡಿಂಗ್‍ನಲ್ಲಿ ಅವರ ಭಾವಚಿತ್ರವಿರಲಿ ಖರ್ಗೆ ಸಾಹೇಬರಿಗೆ ಇನ್ನು ಪ್ರತ್ಯೇಕ ಕಚೇರಿಯನ್ನು ನೀಡಲಾಗಿಲ್ಲ. ಆದರೂ ಖರ್ಗೆ ಅವರು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಚುರುಕಾಗಿದ್ದಾರೆ.

ಆರಕ್ಕೇರದ ಬಿಜೆಪಿ, ಮೂರಕ್ಕಿಳಿಯದ ಕಾಂಗ್ರೆಸ್, ಜೆಡಿಎಸ್ ಜೋಶ್

ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಂತರ ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯಕ್ರಮ ರದ್ದುಗೊಂಡಿತ್ತು. ಆದರೆ, ಖರ್ಗೆ ಅವರು ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕಾರ್ಯಕರ್ತರ ಭೇಟಿ ಕಾರ್ಯಕ್ರಮ ಪುನರಾರಂಭಿಸಿದ್ದಾರೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೂ ಅವರು ಕಾರ್ಯಕರ್ತರ ಕಷ್ಟಸುಖ ಆಲಿಸುತ್ತಿದ್ದಾರೆ.

ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು

ಕೊರೊನಾ ಕಾಲದಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಕಾರ್ಯಕರ್ತರ ಭೇಟಿ ಕಾರ್ಯ ಆರಂಭಿಸಲಾಗಿದೆ. ಪಕ್ಷದ ಮುಖ್ಯಸ್ಥರನ್ನು ಕಾರ್ಯಕರ್ತರು ಯಾವುದೇ ಅಪಾಯಿಂಟ್‍ಮೆಂಟ್ ಪಡೆದುಕೊಳ್ಳದೆ ಅಧ್ಯಕ್ಷರನ್ನು ಭೇಟಿಯಾಗಿ ಕಷ್ಟ ಸುಖಗಳ ಬಗ್ಗೆ ಚರ್ಚಿಸಬಹುದಾಗಿದೆ ಎಂದು ಪಕ್ಷದ ಮುಖಂಡ ನಾಸೀರ್ ಹುಸೇನ್ ತಿಳಿಸಿದ್ದಾರೆ.

ಮತದಾರರ ಪಟ್ಟಿ ಅಕ್ರಮ : ನಾಳೆ ಕಾಂಗ್ರೆಸ್‍ನಿಂದ ಆಯೋಗಕ್ಕೆ ದೂರು

ಖರ್ಗೆ ಅವರ ಭಾವಚಿತ್ರ ಇನ್ನು ಹಾಕದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕೂಡಲೇ ಆಗಿರುವ ಪ್ರಮಾದ ಸರಿಪಡಿಸುವುದಾಗಿಯೂ ಹುಸೇನ್ ಭರವಸೆ ನೀಡಿದ್ದಾರೆ.

Congress, Chief, Mallikarjun Kharge, Photos, AICC, Party, Office,

Articles You Might Like

Share This Article